ಬೆಂಗಳೂರು: ವಾಲ್ಮೀಕಿ ಸಂಘಟನೆ ನಡೆಸುತ್ತಿರುವ ಪ್ರತಿಭಟನೆಯ ಎಫೆಕ್ಟ್ ಸಚಿವ ಡಿ.ಕೆ ಶಿವಕುಮಾರ್ ರಿಗೂ ತಟ್ಟಿತು. ಸಾವಿರಾರು ಮಂದಿ ಪ್ರತಿಭಟನಾಕಾರರು ವಿಧಾನಸೌಧದೆದುರು ಜಮಾಯಿಸಿದ್ದರಿಂದ ಡಿ.ಕೆ ಶಿವಕುಮಾರ್ ರವರ ಕಾರು ಜಾಮ್ ಆದ ಪರಿಣಾಮ, ಸಚಿವರು ಮೆಟ್ರೋ ರೈಲೇರಿದ್ರು.
ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿಗಾಗಿ ಆಗ್ರಹಿಸಿ ವಾಲ್ಮೀಕಿ ಸಂಘಟನೆ ವಿಧಾನಸೌಧದೆದುರು ಬೃಹತ್ ಪ್ರತಿಭಟನೆ ನಡೆಸುತ್ತಿದೆ. ಜನರ ಜಮಾವಣೆಯಿಂದಾಗಿ...