ಬೆಂಗಳೂರು: ವಾಲ್ಮೀಕಿ ಸಂಘಟನೆ ನಡೆಸುತ್ತಿರುವ ಪ್ರತಿಭಟನೆಯ ಎಫೆಕ್ಟ್ ಸಚಿವ ಡಿ.ಕೆ ಶಿವಕುಮಾರ್ ರಿಗೂ ತಟ್ಟಿತು. ಸಾವಿರಾರು ಮಂದಿ ಪ್ರತಿಭಟನಾಕಾರರು ವಿಧಾನಸೌಧದೆದುರು ಜಮಾಯಿಸಿದ್ದರಿಂದ ಡಿ.ಕೆ ಶಿವಕುಮಾರ್ ರವರ ಕಾರು ಜಾಮ್ ಆದ ಪರಿಣಾಮ, ಸಚಿವರು ಮೆಟ್ರೋ ರೈಲೇರಿದ್ರು.
ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿಗಾಗಿ ಆಗ್ರಹಿಸಿ ವಾಲ್ಮೀಕಿ ಸಂಘಟನೆ ವಿಧಾನಸೌಧದೆದುರು ಬೃಹತ್ ಪ್ರತಿಭಟನೆ ನಡೆಸುತ್ತಿದೆ. ಜನರ ಜಮಾವಣೆಯಿಂದಾಗಿ ಸುತ್ತಮುತ್ತಲಿನ ರಸ್ತೆಗಳು ಬಂದ್ ಆಗಿತ್ತು. ಹೀಗಾಗಿ ಅದೇ ರಸ್ತೆ ಮೂಲಕ ಕೋರ್ಟ್ ಗೆ ತೆರಳಬೇಕಿದ್ದ ಜಲ ಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ಕೂಡ ರಸ್ತೆ ಬಂದ್ ನಿಂದ ಮುಂದೆ ಸಾಗಲಾರದೆ ಮೆಟ್ರೋ ಮೊರೆಹೋದ್ರು. ವಿಧಾನಸೌಧದಿಂದ ಸೆಂಟ್ರಲ್ ಕಾಲೇಜುವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿ ಕೋರ್ಟ್ ಗೆ ತೆರಳಿದ್ರು.
ಒಂದೇ ವಾರದಲ್ಲಿ ಸಿಎಂ 2 ಬಾರಿ ಗ್ರಾಮ ವಾಸ್ತವ್ಯ..? ಈ ಬಾರಿ ಎಲ್ಲಿಗೆ ಹೋಗ್ತಾರೆ ಗೊತ್ತಾ ಸಿಎಂ..? ಮಿಸ್ ಮಾಡದೇ ಈ ವಿಡಿಯೋ ನೋಡಿ