ರಾಜಕೀಯ ಭವಿಷ್ಯವಾಣಿಗೆ ಹೆಸರುವಾಸಿಯಾಗಿರುವ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮತ್ತೊಂದು ಭವಿಷ್ಯವಾಣಿ ನುಡಿದಿದ್ದಾರೆ. ಅರಸನ ಅರಮನೆಗೆ ಕಾರ್ಮೋಡ ಕವಿದೀತು, ಜಗತ್ತೇ ತಿರುಗಿ ನೋಡುವಂತಹ ಆಘಾತ ಭಾರತಕ್ಕಾಗಲಿದೆ ಎಂಬ ಭವಿಷ್ಯ ನುಡಿದಿದ್ದಾರೆ. ಇದು ರಾಜ್ಯ ಹಾಗೂ ಕೇಂದ್ರ ಸರ್ಕಾರ ಯಾವುದಕ್ಕಾದರೂ ಆಗಬಹುದು. ಎರಡನ್ನೂ ಸೇರಿಸಿ ಹೇಳಿದ್ದು ಎನ್ನುವ ಮೂಲಕ ದೇಶ ನಾಯಕ ಸ್ಥಾನದಲ್ಲಿರುವವರಿಗೆ...
ಬೆಂಗಳೂರು : ರಾಜ್ಯ ಬಿಜೆಪಿಗೆ ನೂತನ ರಾಜ್ಯಾಧ್ಯಕ್ಷರ ನೇಮಕ ಪ್ರಕ್ರಿಯೆಯು ಸಂಪೂರ್ಣವಾಗಿ ಗೊಂದಲದ ಗೂಡಾಗಿ ಪರಿಣಮಿಸಿದೆ. ಪಕ್ಷದಲ್ಲಿನ ಬಣ ರಾಜಕೀಯದಿಂದ ಈ ಕ್ಷಣದವರೆಗೂ ಅಧ್ಯಕ್ಷರ ಆಯ್ಕೆಗೆ ಗ್ರಹಣ ಹಿಡಿದಂತಾಗಿದೆ. ಕೇವಲ ಶೀಘ್ರದಲ್ಲೇ ಘೋಷಣೆಯಾಗುತ್ತದೆ ಎಂದು ಪಕ್ಷದ ನಾಯಕರು ಹೇಳುತ್ತಿದ್ದರೂ, ಸಹ ಅದು ಅಷ್ಟೊಂದು ಸುಲಭವಾಗಿಲ್ಲ ಎನ್ನುವುದು ಗಮನಾರ್ಹ.
ಈಗಾಗಲೇ ದೇಶದಲ್ಲಿನ ಹಲವು ರಾಜ್ಯಗಳಿಗೆ ಪಕ್ಷದ ಅಧ್ಯಕ್ಷರನ್ನು...
ಬೆಂಗಳೂರು : 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ ಸರ್ಕಾರವನ್ನು ಕಿತ್ತೊಗೆದು ಎನ್ಡಿಎ ಮೈತ್ರಿಕೂಟ ಅಧಿಕಾರ ಹಿಡಿಯುವ ತಂತ್ರಗಾರಿಕೆ ರೂಪಿಸಿದೆ. ಸ್ಟಾಲಿನ್ ಮಣಿಸಿ ಕೇಸರಿ ಬಾವುಟ ಹಾರಿಸುವ ಗುರಿಯನ್ನು ಹೊಂದಿರುವ ಮೋದಿ- ಶಾ ಜೋಡಿಗೆ ಈ ಚುನಾವಣೆ ಪ್ರತಿಷ್ಠ ಪಣವಾಗಿದೆ. ಅದರಂತೆಯೇ ಸದಾ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಸಿಎಂ...
ನಿವೃತ್ತ ಐಪಿಎಸ್ ಅಧಿಕಾರಿ, ಬಿಜೆಪಿ ನಾಯಕ ಅಣ್ಣಾಮಲೈ ಕುಕ್ಕೆ ಸುಬ್ರಹ್ಮಣ್ಯ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಈ ಭೇಟಿ ಹಲವು ರಾಜಕೀಯ ಸುಳಿವುಗಳನ್ನ ನೀಡುತ್ತಿದೆ.
ಅಣ್ಣಾಮಲೈ ಅವರು ಶ್ರೀ ಸಂಪುಟ ನರಸಿಂಹಸ್ವಾಮಿ ಸುಬ್ರಹ್ಮಣ್ಯ ಮಠದಲ್ಲಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪತ್ನಿ ಅಖಿಲಾ, ಮಕ್ಕಳು ಹಾಗೂ ಇತರೆ ಕುಟುಂಬ ಸದಸ್ಯರು ಉಪಸ್ಥಿತರಿದ್ದರು. ಪೂಜೆ ಮುಗಿಸಿದ...
ಆಪರೇಷನ್ ಸಿಂಧೂರ್ ವಿಶೇಷ :
ನವದೆಹಲಿ : ಪಾಕಿಸ್ತಾನದ ಜೊತೆ ದ್ವಿಪಕ್ಷೀಯ ಮಾತುಕತೆ ವಿಧಾನಗಳ ಮೂಲಕ ಕಟ್ಟುನಿಟ್ಟಾಗಿ ವ್ಯವಹರಿಸುವುದನ್ನು ಭಾರತ ಮುಂದುವರಿಸುತ್ತದೆ. ಈ ವಿಷಯದಲ್ಲಿ ಯಾವುದೇ ಗೊಂದಲಬೇಡ. ಅಲ್ಲದೆ ಭಾರತವು ಯಾವುದೇ ಕಾರಣಕ್ಕೂ ಪಾಕಿಸ್ತಾನದ 'ಪರಮಾಣು ಬೆದರಿಕೆ'ಗೆ ಮಣಿಯುವುದಿಲ್ಲ, ತನ್ನಲ್ಲಿಯ ಉಗ್ರರ ಪೋಷಣೆಯನ್ನು ಬಿಡಬೇಕು. ಇಲ್ಲವಾದರೆ ನಮ್ಮ ಆಪರೇಷನ್ ಸಿಂಧೂರ್ ಮತ್ತೆ ಆಕ್ಟೀವ್ ಆಗುತ್ತದೆ ಎಂದು...
ಆಪರೇಷನ್ ಸಿಂಧೂರ ವಿಶೇಷ..
ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿದ್ದ ಉಗ್ರರ ದಾಳಿಗೆ ಪಾಕಿಸ್ತಾನದ ವಿರುದ್ಧ ಭಾರತ ತನ್ನ ಪ್ರತೀಕಾರ ತೀರಿಸಿಕೊಂಡಿದೆ. ತಡರಾತ್ರಿ ಪಾಕಿಸ್ತಾನದ ಒಳಗೆ ನುಗ್ಗಿ ಹೆಮ್ಮೆಯ ಭಾರತೀಯ ಸೇನೆ ಉಗ್ರರನ್ನು ಬಗ್ಗು ಬಡಿಯುವ ಮೂಲಕ ಪಾಕ್ ಬುಡಕ್ಕೆ ಬೆಂಕಿ ಇಡುವ ಕೆಲಸ ಮಾಡಿದೆ.
ಆಪರೇಷನ್ ಸಿಂಧೂರಕ್ಕೆ ಅಸಾದುದ್ದೀನ್ ಖಷ್..!
ಇನ್ನೂ ಪಹಲ್ಗಾಮ್ ದಾಳಿಯ...
ನವದೆಹಲಿ : ಯುರೋಪ್ ಮತ್ತು ಮಧ್ಯಪ್ರಾಚ್ಯದಲ್ಲಿನ ಸಂಘರ್ಷಗಳನ್ನು ಪರಿಹರಿಸಲು ಅಮೆರಿಕ ನಾಯಕತ್ವ ಏಕಕಾಲದಲ್ಲಿ ಶ್ರಮಿಸುತ್ತಿರುವುದರಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಪ್ರವೇಶಿಸುವಂತೆ ಅಮೆರಿಕದಲ್ಲಿರುವ ಪಾಕಿಸ್ತಾನದ ರಾಯಭಾರಿ ರಿಜ್ವಾನ್ ಸಯೀದ್ ಶೇಖ್ ಒತ್ತಾಯಿಸಿದ್ದಾರೆ.
ಈ ಕುರಿತು ಅಮೆರಿಕದಲ್ಲಿ ಸಂದರ್ಶನವೊಂದರಲ್ಲಿ ಹೇಳಿರುವ ಶೇಖ್, ಈ ಆಡಳಿತದ ಅವಧಿಯಲ್ಲಿ ವಿಶ್ವ...
ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ನಡೆಸಿರುವ ಭೀಕರ ದಾಳಿಗೆ ಭಾರತಕ್ಕೆ ಜಾಗತಿಕ ಮಟ್ಟದಲ್ಲಿನ ಬಲಿಷ್ಠ ರಾಷ್ಟ್ರಗಳು ಬೆಂಬಲ ನೀಡುತ್ತಿವೆ. ಅಲ್ಲದೆ ವಿಶ್ವಕ್ಕೆ ಕಂಟಕವಾಗಿರುವ ಭಯೋತ್ಪಾದನೆಯನ್ನು ಖಂಡಿಸಿವೆ.
ಆದರೆ ಈ ಪಹಲ್ಗಾಮ್ ದಾಳಿಯಲ್ಲಿ ಹಮಾಸ್ ಸಂಘಟನೆಯ ಕೈವಾಡವಿದೆ ಎಂಬ ಸ್ಫೋಟಕ ಮಾಹಿತಿಯನ್ನು ಇಸ್ರೇಲ್ ಬಿಚ್ಚಿಟ್ಟಿರುವುದು ಭಾರತ ಇನ್ನಷ್ಟು ಎಚ್ಚರಿಕೆಯ ಹೆಜ್ಜೆ...
ನವದೆಹಲಿ : ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಯಿಂದ ಪಾಕಿಸ್ತಾನವನ್ನು ಹುಟ್ಟಡಗಿಸಲು ಸಿದ್ಧವಾಗಿರುವ ಭಾರತದ ನಡೆಗೆ ಉಗ್ರರ ರಾಷ್ಟ್ರ ಕಂಗಾಲಾಗಿ ಹೋಗಿದೆ. ಬುಧವಾರವಷ್ಟೇ ಪಾಕಿಸ್ತಾನಕ್ಕೆ ಬಿಗ್ ಶಾಕ್ ನೀಡಿದ್ದ ಕೇಂದ್ರ ಸರ್ಕಾರ ಪಾಕ್ ಜೊತೆಗಿನ ಎಲ್ಲ ಸಂಪರ್ಕಗಳನ್ನೂ ಕಡಿತಗೊಳಿಸುವ ದೊಡ್ಡ ತೀರ್ಮಾನ ಮಾಡಿದೆ.
ಅಲ್ಲದೆ ನಿರ್ದಯವಾಗಿ ಭಾರತೀಯರನ್ನು ಬಲಿಪಡೆದ ಉಗ್ರರ ವಿರುದ್ಧ ಪ್ರತೀಕಾರಕ್ಕಾಗಿ ಯಾವುದೇ ಕ್ಷಣದಲ್ಲಿಯೂ ಭಾರತ ದಾಳಿ...
ನವದೆಹಲಿ : ಜಮ್ಜು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯ ಬಗ್ಗೆ ಮೊದಲ ಬಾರಿ ಮೌನ ಮುರಿದಿರುವ ಪ್ರಧಾನಿ ನರೇಂದ್ರ ಮೋದಿ, ದಾಳಿಯಲ್ಲಿ ಭಾಗಿಯಾಗಿರುವ ಒಬ್ಬೊಬ್ಬರನ್ನು ಹುಡುಕಿ ಶಿಕ್ಷೆ ನೀಡುತ್ತೇವೆ ಎಂದು ಕಠಿಣ ಸಂದೇಶ ರವಾನಿಸಿದ್ದಾರೆ.
ಉಗ್ರರ ದಾಳಿಯನ್ನು ಖಂಡಿಸಿ ಬಿಹಾರದ ಮಧುಬನಿಯಲ್ಲಿ ಮಾತನಾಡಿರುವ ಅವರು, ಭೀಕರ ದಾಳಿ ನಡೆಸಿರುವ ಉಗ್ರರ ವಿರುದ್ಧ ಭಾರತವು...