ಚೆನ್ನೈ: ನೆಹರೂ ಮತ್ತು ರಾಜೀವ್ ಗಾಂಧಿ ಬಳಿಕ
ಮೋದಿಯೂ ಕೂಡ ಅವರಂತೆಯೇ ವರ್ಚಸ್ಸು ಹೊಂದಿರೋ ನಾಯಕ ಅಂತ ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಚಂಡ ಫಲಿತಾಂಶದ ಕುರಿತಾಗಿ ಮಾತನಾಡಿದ ಸೂಪರ್ ಸ್ಟಾರ್, ಇದು ಬಿಜೆಪಿ ಗೆಲುವಲ್ಲ. ಬದಲಾಗಿ ಮೋದಿಯವರ ಗೆಲುವು ಅಂತ ಹೇಳಿದ್ರು. ಇದೇ ವೇಳೆ ಕಾಂಗ್ರೆಸ್ ನ ನೆಹರೂ ಮತ್ತು...
ಬೆಂಗಳೂರು: ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ
ಆಯ್ಕೆಯಾಗಿರೋ ಸಂಸದೆ ಶೋಭಾ ಕರಂದ್ಲಾಜೆಗೆ ಕೇಂದ್ರ ಸಚಿವೆ ಸ್ಥಾನ ನೀಡುವ ಬಗ್ಗೆ ವರಷ್ಠರಿಗೆ ಮನವರಿಕೆ ಮಾಡಿಕೊಳ್ಳುತ್ತೇನೆ ಅಂತ ಬಿಜೆಪಿ
ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಬಿಎಸ್ ವೈ, ನಾನು ದೆಹಲಿಗೆ ಹೋಗುತ್ತಿದ್ದೇನೆ. ಸಂಸದೆ ಶೋಭಾ ಕರಂದ್ಲಾಜೆಯವರನ್ನು ಕೇಂದ್ರ ಸಚಿವರನ್ನಾಗಿ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾರಿಗೆ...
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸುಮಲತಾ ಅಂಬರೀಶ್ ಜೆಡಿಎಸ್ ಭದ್ರಕೋಟೆಯನ್ನ ಛಿದ್ರ ಛಿದ್ರ ಮಾಡಿದ್ದು ಈಗ ಇತಿಹಾಸ. ಸುಮಲತಾಗೆ ಬಿಜೆಪಿ ನೀವು ಯಾವಾಗ ಬೇಕಾದ್ರೂ ನಮ್ಮ ಪಕ್ಷಕ್ಕೆ ಬರಬಹುದು ಅಂತ ಆಹ್ವಾನಿಸಿದೆ. ಇದೇ ವಿಚಾರವಾಗಿ ಸುಮಲತಾ ಚುನಾವಣೆ ವೇಳೆ ಮಂಡ್ಯದ ಮುಸ್ಲಿಂ ಬಾಂಧವರಿಗೆ ನೀಡಿದ್ದ ಆ ಒಂದು ಮಾತು ಉಳಿಸಿಕೊಳ್ತಾರೋ ಇಲ್ಲವೋ ಅನ್ನೋ ಪ್ರಶ್ನೆ ಎದುರಾಗಿದೆ....
ಬೆಂಗಳೂರು: ಮೈತ್ರಿ ಸರ್ಕಾರದ ನಾಯಕರನ್ನ ಮಾಜಿ ಡಿಸಿಎಂ ಆರ್. ಅಶೋಕ್ ತೀವ್ರವಾಗಿ ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅಶೋಕ್, ಚುನಾವಣೆ ಸಮಯದಲ್ಲಿ ದೇವೇಗೌಡರು, ಸಿದ್ದರಾಮಯ್ಯ ಮತ್ತು ಸಿಎಂ ಕುಮಾರಸ್ವಾಮಿ ನರೇಂದ್ರ ಮೋದಿ ಅವ್ರನ್ನ ತೆಗಳಿದರು. ಕಳ್ಳರು, ಸುಳ್ಳರು, ಜೈಲಿಗೆ ಹೋಗಿ ಬಂದವರು ಅಂತ ಹೇಳಿದ್ರು.
ಇನ್ನಾದ್ರೂ ಬಿಎಸ್ ವೈ ಅವ್ರ ಬಗ್ಗೆ ಗೌರವ ಕೊಟ್ಟು...
ಅಭೂತಪೂರ್ವ ಗೆಲುವು ಸಾಧಿಸಿ ಮತ್ತೆ 2ನೇ ಬಾರಿಗೆ ಅಧಿಕಾರ ಹಿಡಿಯಲು ನರೇಂದ್ರ ಮೋದಿ ಸಜ್ಜಾಗಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ. ಆದ್ರೆ ಈ ಬಾರಿ ಸಂಪುಟದಲ್ಲಿ ಮೋದಿ ಯಾರನ್ನೆಲ್ಲಾ ಸೇರಿಸಿಕೊಳ್ತಾರೆ ಅನ್ನೋ ಬಗ್ಗೆ ಇದೀಗ ಬಿಸಿ ಬಿಸಿ ಚರ್ಚೆ ನಡೀತಿದೆ.
ಈ ಬಾರಿ ಮಂತ್ರಿಯಾಗೋ ಭಾಗ್ಯ ಯಾರಿಗೆ ಅಂತ ನೋಡೋದಾದ್ರೆ, ಚುನಾವಣೆಯಲ್ಲಿ...
ಗುಜರಾತ್ : ಸೂರತ್ ನಗರದ ವಾಣಿಜ್ಯ ಸಂಕೀರ್ಣದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಸುಮಾರು 20 ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಇಲ್ಲಿನ ತಕ್ಷಶಿಲಾ ಆರ್ಕೇಡ್ ನಲ್ಲಿ ಈ ಅಘಡ ನಡೆದಿದೆ. 4 ಅಂತಸ್ಥಿನ ಈ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಕೋಚಿಂಗ್ ಸೆಂಟರ್ ನಲ್ಲಿ ತೀವ್ರ ತರದ ಬೆಂಕಿ ಕಾಣಿಸಿಕೊಂಡಿದೆ. ಕ್ಷಣ ಮಾತ್ರದಲ್ಲಿ...
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಅಭಿನಂದನೆ ತಿಳಿಸಿದ್ದಾರೆ. ಇಂದು ಟ್ವೀಟ್ ಮಾಡಿರುವ ಕೊಹ್ಲಿ, “ಅಭಿನಂದನೆಗಳು ಮೋದಿಜಿ, ನಿಮ್ಮ ದೂರದೃಷ್ಟಿಯ ಮೂಲಕ ಭಾರತ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಿರಿ ಎಂದು ನಾವು ನಂಬಿದ್ದೇವೆ. ಜೈ ಹಿಂದ್” ಅಂತ ಬರೆದುಕೊಂಡಿದ್ದಾರೆ.
https://twitter.com/imVkohli/status/1131823451755425792
ಟೀಮ್...
ವಿಜಯಪುರ: ದೇಶದಲ್ಲಿ ಮೋದಿ ಅಭೂತಪೂರ್ವ
ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಯೊಬ್ಬರು ಇಂದು ಇಡೀ ದಿನ ಉಚಿತವಾಗಿ ಹೇರ್
ಕಟ್ಟಿಂಗ್ ಮಾಡಲಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ರಮೇಶ್ ಹಡಪದ್ ಎಂಬುವರೇ ಉಚಿತ ಹೇರ್ ಕಟ್ಟಿಂಗ್ ಮಾಡುತ್ತಿರುವ ಮೋದಿ ಅಭಿಮಾನಿ. ರಮೇಶ್ ಹಡಪದ್, ವಿಜಯಪುರದಲ್ಲಿ ಜಿಗಜಿಣಗಿ ಮತ್ತು ದೇಶದಲ್ಲಿ ಮೋದಿ ಅಧಿಕಾರಕ್ಕೆ ಬಂದ್ರೆ ಇಂದು ಫ್ರೀ ಹೇರ್...
ಲೋಕಸಭಾ ಮಹಾಸಮರದಲ್ಲಿ ಪ್ರಚಂಡ ಗೆಲುವು ಸಾಧಿಸಿದ ಬಿಜೆಪಿ ಇದೀಗ 2ನೇ ಬಾರಿ ಅಧಿಕಾರಕ್ಕೇರಲು ಸಜ್ಜಾಗಿದೆ. ಒಟ್ಟು 542 ಕ್ಷೇತ್ರಗಳಲ್ಲಿ ಎನ್ ಡಿಎ 300ಕ್ಕೂ ಹೆಚ್ಚು ಸ್ಥಾನ ಗೆದ್ದರೆ, ಕರ್ನಾಟಕದ 24 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಬೀಗಿದೆ.
ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ವಿಜಯೋತ್ಸವ
ಭಾಷಣ ಮಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಜಾತ್ಯತೀತ ಎಂಬ...
ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಬಿಜೆಪಿ ಭಾರೀ ಮುನ್ನಡೆ ಸಾಧಿಸಿರೋ ಹಿನ್ನೆಲೆಯಲ್ಲಿ ಸೂಪರ್ ಸ್ಟಾರ್ ರಜಿನಿ ಕಾಂತ್ ಶುಭಕೋರಿದ್ದಾರೆ.
ಗೌರವಾನ್ವಿತ ಪ್ರೀತಿಯ ನರೇಂದ್ರ ಮೋದಿಜೀ. ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು, ನೀವು ಸಾಧನೆ ಮಾಡಿದಿರಿ. ದೇವರ ಆಶೀರ್ವಾದ ನಿಮ್ಮ ಮೇಲಿರಲಿ ಅಂತ ಟ್ವೀಟ್ ಮಾಡೋ ಮೂಲಕ ನಟ ರಜನಿ ಕಾಂತ್ ಶುಭಕೋರಿದ್ದಾರೆ.
https://twitter.com/rajinikanth/status/1131479602000408576