ಹಾಸನ: ಹಾಸನ ಶಾಸಕ ಪ್ರೀತಂಗೌಡರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ಇದರಲ್ಲಿ ಪ್ರೀತಂ ತಮ್ಮ ಕಾರ್ಯಕರ್ತರ ಜೊತೆ ಮಾತನಾಡಿದ್ದಾರೆ. ಹಿಂದೂ, ಮುಸಲ್ಮಾನ್ ಮುಖಂಡರನ್ನ ಒಟ್ಟಿಗೆ ಸಭೆ ಕರೆದು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಇದಾಗಿದ್ದು, ಯಾವ ವಾರ್ಡಲ್ಲಿ ಎಷ್ಟೆಷ್ಟು ಓಟ್ ಬರುತ್ತವೆ ಎಂಬ ಬಗ್ಗೆ ಪ್ರೀತಂ ಮಾಹಿತಿ ಪಡೆದಿದ್ದಾರಂತೆ.
ಪ್ರೀತಂಗೌಡ: ಚಿಕ್ಕನಾಳು ಬೂತಲ್ಲಿ ಎಷ್ಟು ಮತ ಬರುತ್ತಪ್ಪಾ..?
ಕಾರ್ಯಕರ್ತ:...
ಹಾಸನ : ಪ್ರೀತಂಗೌಡ ವಿರುದ್ಧ ಭವಾನಿ ರೇವಣ್ಣ ಪರೋಕ್ಷವಾಗಿ ಗುಡುಗಿದ್ದಾರೆ. ಕರವೇ ವತಿಯಿಂದ ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜೆಡಿಎಸ್ ಅಭ್ಯರ್ಥಿ ಸ್ವರೂಪ್‌ಗೆ ಬೆಂಬಲ ಘೋಷಣೆ ಹಾಗೂ ದೇಣಿಗೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಭವಾನಿ, ಪ್ರೀತಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ನೀವೆಲ್ಲಾ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಸ್ವರೂಪ್‌ಗೆ ಬೆಂಬಲ ಕೊಡ್ತಿನಿ...
ಹಾಸನ: ಅರಸಿಕೆರೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ ಆರೋಪ ಕೇಳಿಬಂದಿದೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೆ.ಎಂ.ಶಿವಲಿಂಗೇಗೌಡ ಅವರ ಬೆಂಬಲಿಗರಿಂದ, ಜೆಡಿಎಸ್ ಕಾರ್ಯಕರ್ತ ಕಿರಣ್ ಮೇಲೆ ಹಲ್ಲೆಯಾಗಿದೆ ಎಂದು ಆರೋಪಿಸಲಾಗಿದೆ. ಕಿರಣ್ ಮೇಲೆ ಬ್ಲೇಡ್‌ನಿಂದ ಹಲ್ಲೆಯಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾತ್ರಿ 9.30 ರ...
ಹಾಸನ: ಹಾಸನದ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ಪ್ರಭಾವಿ ಮುಖಂಡ ನಾರ್ವೆ ಸೋಮಶೇಖರ್ ನಿರ್ಧಾರ ಮಾಡಿದ್ದಾರೆ. ಹಾಸನದ ಅಶೋಕ ಹೋಟೆಲ್ ನಲ್ಲಿ ಹಲವು ತಾಸುಗಳ ಚರ್ಚೆ ನಡೆದಿದ್ದು, ಜೆಡಿಎಸ್ ಪಕ್ಷದ ಪ್ರಮುಖರು ಭಾಗಿಯಾಗಿದ್ದರು.
ಮಾಜಿ ಸಚಿವ ಎಚ್.ಡಿ.ರೇವಣ್ಣ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರೊಂದಿಗೆ...
ಮಂಡ್ಯ: ಮೇಲುಕೋಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಸಿ.ಎಸ್.ಪುಟ್ಟರಾಜುಗೆ ಕುರುಬ ಸಮುದಾಯದವರು ಬೆಂಬಲ ಕೊಟ್ಟಿದ್ದಾರೆ. ಮಂಡ್ಯದ ಪಾಂಡವಪುರ ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ, ಮೇಲುಕೋಟೆ ಕುರುಬ ಸಮುದಾಯದವರು ಪುಟ್ಟರಾಜುಗೆ ಅಭಿನಂದಿಸಿದ್ದಾರೆ.
ಅಲ್ಲದೇ, ವಿಧಾನ ಸಭಾ ಚುನಾವಣೆಯಲ್ಲಿ ಪುಟ್ಟರಾಜು ಗೆಲ್ಲಿಸಲು ಮನವಿ ಮಾಡಿದ್ದಾರೆ. ಶಾಸಕ ಸಿ.ಎಸ್.ಪುಟ್ಟರಾಜು ಕೊರೊನಾ ಸಂಕಷ್ಟದಲ್ಲಿ ಜನರ ಪರ ಕೆಲಸ ಮಾಡಿದ್ದರು. ಹೀಗಾಗಿ...
ಹಾಸನ: ಹಾಸನದಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಶಾಸಕ ಪ್ರೀತಂಗೌಡ ಕೆಲಸದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಸ್ವರೂಪ್ ಗೆಲ್ಲಿಸಲು ಎಲ್ಲಾ ಸಮುದಾಯ ಸ್ಪಂದಿಸುತ್ತಿವೆ. ಹಾಸನ ಪೊಲೀಸ್ ವ್ಯವಸ್ಥೆಯನ್ನೇ ಹದಗೆಡಿಸಿದ್ದಾರೆ ಎಂದು ರೇವಣ್ಣ ಪರೋಕ್ಷವಾಗಿ ಪ್ರೀತಂಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಾಸನಕ್ಕೆ ಈ ಗಿರಾಕಿ ಒಂದು ಬೈಪಾಸ್ ಮಾಡೋದಕ್ಕೆ ಆಗಿಲ್ಲ. ಕೆಲವು ಇಂಜಿನಿಯರ್...
ಹಾಸನ: ಹಾಸನದಲ್ಲಿ ಶಾಸಕ ಪ್ರೀತಂಗೌಡ ಹತಾಶೆ ಹೇಳಿಕೆಗೆ ರೇವಣ್ಣ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಹಾಸನ ಶಾಸಕ ಹತಾಶೆ ಹೇಳಿಕೆ ಕೊಟ್ಟಿದ್ದಾರೆ. ಅಲ್ಪ ಸಂಖ್ಯಾತರ ದಿಕ್ಕು ತಪ್ಪಿಸಲು ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಮೂವತ್ತು ವರ್ಷ ಕೆಲಸ ಮಾಡಿದ್ದೇನೆ. ಎಲ್ಲಾ ಸಮುದಾಯಗಳನ್ನ ಒಟ್ಟಿಗೆ ತೆಗೆದುಕೊಂಡು ಹೋಗುತ್ತೇನೆ. ಅಧಿಕಾರ ತ್ಯಾಗ ಮಾಡಿ ಎಸ್ಟಿ ದಮುದಾಯಕ್ಕೆ ಅನುಕೂಲ ಮಾಡಿಕೊಟ್ಟಿರೋದು...
ಹಾಸನ: ಹಾಸನದಲ್ಲಿ ಮಾತನಾಡಿದ ಮಾಜಿ ಸಚಿವ ರೇವಣ್ಣ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಚುನಾವಣೆ ಎರಡೂ ರಾಷ್ಟ್ರೀಯ ಪಕ್ಷಗಳಿಗೆ. ಕುಮಾರಸ್ವಾಮಿಯವರು ನಿನ್ನೆ ನಮ್ಮ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಪ್ರಾದೇಶಿಕ ಪಕ್ಷಗಳಿರುವ ರಾಜ್ಯಗಳಲ್ಲಿ ಅಭಿವೃದ್ಧಿ ಆಗುತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಅಭಿವೃದ್ಧಿ ದಿಕ್ಕಿನತ್ತ ಹೋಗುತ್ತಿದೆ. ಈ ರಾಷ್ಟ್ರೀಯ ಪಕ್ಷಗಳು...
ಹಾಸನ : ಹಾಸನ ಶಾಸಕ ಪ್ರೀತಂಗೌಡ ಪ್ರಚಾರದ ವೈಖರಿ ನೋಡಿದ್ರೆ, ಅವರು ಮತದಾರರಿಗೆ ಆಮಿಷ ಒಡ್ಡಿದ್ರಾ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಶಾಸಕ ಪ್ರೀತಂಗೌಡ ದೇವರ ಹೆಸರಿನಲ್ಲಿ ಮತದಾರರನ್ನು ಸೆಳೆಯುವ ಯತ್ನ ಮಾಡಿದ್ದಾರೆ.
ದೇವರ ಮುಂದೆ ಮಂಗಳಾರತಿ ಮಾಡಿ ನನಗೆ ಮಾತು ಕೊಡಿ ಎಂದು ಪ್ರೀತಂಗೌಡ ಮತ ಕೇಳಿದ್ದಾರೆ. ಹಾಸನ ತಾಲೂಕಿನ ಸಾಲಗಾಮೆ ಮಲ್ಲನಾಯಕನಹಳ್ಳಿಯಲ್ಲಿ ನಿನ್ನೆ ರಾತ್ರಿ...
ಮಂಡ್ಯ: ಶ್ರೀರಂಗಪಟ್ಟಣದಲ್ಲಿ ರವೀಂದ್‌ರ ಶ್ರೀಕಂಠಯ್ಯ ಅಬ್ಬರದ ಪ್ರಚಾರ ನಡೆಸಿದ್ದು, ಜೆಡಿಎಸ್ ಪರ ಮತಯಾಚಿಸಿದ್ದಾರೆ. ಕೊಡಿಯಾಲ ಗ್ರಾಮದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಗ್ರಾಮಸ್ಥರು, ಪಟಾಕಿ ಸಿಡಿಸಿ ಪುಷ್ಪವೃಷ್ಟಿ ಸಲ್ಲಿಸಿದ್ದಾರೆ. ಅಲ್ಲದೇ ಆರತಿಯನ್ನೂ ಬೆಳಗಿದ್ದಾರೆ. ತದನಂತರ ರವೀಂದ್ರ ಶ್ರೀಕಂಠಯ್ಯ, ಚುನಾವಣೆ ಪ್ರಚಾರವನ್ನ ಕೈಗೊಂಡಿದ್ದಾರೆ.
ಈ ವೇಳೆ ಮಾತನಾಡಿದ ರವೀಂದ್ರ ಶ್ರೀಕಂಠಯ್ಯ, ಪ್ರಚಾರ ತುಂಬಾ ಚೆನ್ನಾಗಿ ನಡೆಯುತ್ತಿದೆ. ಜನರು ಪ್ರೀತಿಯಿಂದ...