ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ AIMIM ಪಕ್ಷ ಇಂಡಿಯಾ ಮೈತ್ರಿಕೂಟಕ್ಕೆ ಬೆಂಬಲ ನೀಡೋಕೆ ಸಿದ್ಧವಿದೆ. ಹೀಗಂತ ಪಕ್ಷದ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ತಿಳಿಸಿದ್ದಾರೆ. ಆದರೆ, ಪಕ್ಷಕ್ಕೆ ಕನಿಷ್ಠ 6 ಸ್ಥಾನಗಳನ್ನು ಬಿಟ್ಟುಕೊಡಬೇಕು ಎಂಬ ಶರತ್ತನ್ನು ಅವರು ಮುಂದಿಟ್ಟಿದ್ದಾರೆ.
ನಾವು ಇಂಡಿಯಾ ಮೈತ್ರಿಕೂಟ ಸೇರಲು ಸಿದ್ಧವಿದ್ದೇವೆ. ಬಿಹಾರದಲ್ಲಿ ಸ್ಪರ್ಧಿಸಲು ನಮಗೆ 6 ಕ್ಷೇತ್ರಗಳನ್ನು...