ಲವ್ ಮಾಕ್ಟೇಲ್.. ಈ ವರ್ಷ ಸಖತ್ ಸದ್ದು ಮಾಡಿದ್ದ ಚಿತ್ರ. ಥಿಯೇಟರ್‌ನಲ್ಲಿ ಅಷ್ಟೇನು ವೀವ್ಸ್ ಗಳಿಸದ ಲವ್ ಮಾಕ್ಟೇಲ್, ಅಮೇಜಾನ್ ಪ್ರೈಮ್‌ನಲ್ಲಿ ಸಿನಿಪ್ರಿಯರ ಮನ ಗೆದ್ದಿತ್ತು. ಅಯ್ಯೋ ಇಷ್ಟು ಚಂದದ ಸಿನಿಮಾವನ್ನ ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡುಬಿಟ್ವಲ್ಲ ಎಂದು ಬೇಜಾರಾದ ವೀಕ್ಷಕರು ಮತ್ತೊಮ್ಮೆ ಥಿಯೇಟರ್‌ನಲ್ಲಿ ಈ ಸಿನಿಮಾ ರಿಲೀಸ್ ಮಾಡಲು ರಿಕ್ವೆಸ್ಟ್ ಮಾಡಿದರು. ಅಷ್ಟರ ಮಟ್ಟಿಗೆ...
ಅಂತೂ ಇಂತೂ ಹಲವು ಗಾಳಿ ಸುದ್ದಿಗಳಿಗೆಲ್ಲ ಬ್ರೇಕ್ ಹಾಕಿ ನಟಿ ಶುಭಪುಂಜಾ ಮದುವೆಗೆ ರೆಡಿಯಾಗಿದ್ದು, ಮಂಗಳೂರು ಮೂಲದ ಸುಮಂತ್‌ರನ್ನ ವಿವಾಹವಾಗಲಿದ್ದಾರೆ.
ಗ್ಯಾಸ್ ಏಜೆನ್ಸಿ ಬ್ಯುಸಿನೆಸ್‌ನಲ್ಲಿ ಕೆಲಸ ಮಾಡುತ್ತಿರುವ ಸುಮಂತ್, ಜಯಕರ್ನಾಟಕ ಸಂಘಟನೆಯ ಬೆಂಗಳೂರು ಸೌತ್ ವಿಂಗ್ ಪ್ರೆಸಿಡೆಂಟ್ ಆಗಿದ್ದಾರೆ.
ಇನ್ನು ಮಗಳ ಮದುವೆಗೆ ಕಾತರರಾಗಿದ್ದ ಶುಭಪುಂಜಾ ತಾಯಿ ಶುಭ ಮತ್ತು ಸುಮಂತ್ ಪ್ರೀತಿಗೆ ಒಪ್ಪಿಗೆ...
ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಕಾಡು ಪ್ರಾಣಿ ಪಕ್ಷಿಗಳಿಗೆ ಸಂಬಂಧಿಸಿದ ಬಗ್ಗೆ ಚಿತ್ರ ನಿರ್ದೇಶಿಸಲಿದ್ದಾರೆ. ಅದಕ್ಕೆ ದಚ್ಚು ಹೀರೋ ಆಗಿ ನಟಿಸಲಿದ್ದಾರೆಂಬ ಸುದ್ದಿಗೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರತಿಕ್ರಿಯಿಸಿದ್ದಾರೆ.
ಸದ್ಯ ರಾಜವೀರ ಮದಕರಿನಾಯಕ ಚಿತ್ರಕ್ಕಾಗಿ ತಯಾರಿ ನಡೆಸುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಥಿಯೇಟರ್‌ಗಳು ತೆರೆದ ಮೇಲೆ ಶೂಟಿಂಗ್ ನಡೆಯುತ್ತದೆ ಎಂದಿದ್ದಾರೆ.
ರಾಜೇಂದ್ರ ಸಿಂಗ್ ಬಾಬು...
ಮಂಡ್ಯದಲ್ಲಿ ಹುಚ್ಚವೆಂಕಟ್‌ಗೆ ಥಳಿಸಿರುವ ಬಗ್ಗೆ ನಟ ದುನಿಯಾ ವಿಜಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಹುಚ್ಚ ವೆಂಕಟ್‌ಗೆ ಒಳ್ಳೆಯ ಚಿಕಿತ್ಸೆ ಕೊಡಿಸಲು ಮನವಿ ಮಾಡಿದ್ದಾರೆ.
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ವಿಜಿ, ಹುಚ್ಚ ವೆಂಕಟ್ ಅವರಿಗೆ ಬೀದಿಯಲ್ಲಿ ಹೊಡೆಯುವ ವಿಡಿಯೋಗಳು ಕಳೆದ ಎರಡು ದಿನಗಳಿಂದ ವೈರಲ್ ಆಗಿವೆ. 'ಹುಚ್ಚ' ಎಂದು ಸ್ವತಃ ಹೇಳಿಕೊಂಡು ಚಿತ್ರರಂಗಕ್ಕೆ ಪ್ರವೇಶಿಸಿದರೂ...
ನಟಿ ಮಯೂರಿ ಇಂದು ತಮ್ಮ ಬಹುಕಾಲದ ಗೆಳೆಯನಾದ ಅರುಣ್‌ರೊಂದಿಗೆ ಸಪ್ತಪದಿ ತುಳಿದು ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ.
ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಮಯೂರಿ ಹಸೆಮಣೆ ಏರಿದ್ದಾರೆ.
ಕಳೆದ 10 ವರ್ಷಗಳಿಂದ ಅರುಣ್ ಮತ್ತು ಮಯೂರಿ ಪ್ರೀತಿಸುತ್ತಿದ್ದು, ಮನೆಯವರ ಒಪ್ಪಿಗೆಯ ಮೇರೆಗೆ ಇಂದು ವಿವಾಹವಾಗಿದ್ದಾರೆ. ಇವ್ರದ್ದು, ಲವ್...
ಸ್ಯಾಂಡಲ್‌ವುಡ್ ನಟಿ ಮಯೂರಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಅರುಣ್ ಜೊತೆ ಸಪ್ತಪದಿ ತುಳಿದಿದ್ದಾರೆ.
ಮಯೂರಿಯವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಮಯೂರಿ ಮತ್ತು ಅರುಣ್ ಹತ್ತುವರ್ಷದಿಂದ ಗೆಳೆಯರಾಗಿದ್ದು, ಗೆಳೆತನ ಪ್ರೀತಿಗೆ ತಿರುಗಿ, ಈ ಪ್ರೀತಿಗೆ ಇಬ್ಬರ ಮನೆಯಲ್ಲೂ ಒಪ್ಪಿಗೆ ಸಿಕ್ಕಿದೆ. ಹೀಗಾಗಿ ಇಂದು ದೇವಸ್ಥಾನದಲ್ಲಿ ಸಿಂಪಲ್ ಆಗಿ ನಟಿ ಮಯೂರಿ...
ಮಂಡ್ಯ: ಮಂಡ್ಯದಲ್ಲಿ ಹುಚ್ಚಾ ವೆಂಕಟ್ ಪುಂಡಾಟ ಮುಂದುವರೆದಿದ್ದು, ಹುಚ್ಚಾ ವೆಂಕಟ್ ಕಿರಿಕಿರಿಗೆ ಬೇಸತ್ತು, ಯುವಕರು ಆತನನ್ನು ಕಾಲಿನಡಿ ಹಾಕಿ ತುಳಿದಿದ್ದಾರೆ.
ಮಂಡ್ಯ ತಾಲೂಕಿನ ಮೈ-ಬೆಂ ಹೆದ್ದಾರಿ ಸಮೀಪದ ಹುಮ್ಮಡಹಳ್ಳಿ ಬಳಿ ಈ ಘಟನೆ ನಡೆದಿದ್ದು, ಮಾತನಾಡಿಸಲು ಬಂದ ಯುವಕರ ಮೇಲೆ ಹುಚ್ಚಾವೆಂಕಟ್ ಹಲ್ಲೆಗೆ ಯತ್ನಿಸಿದ್ದಾರೆ.
ಹೀಯಾಳಿಸಿ ಹಲ್ಲೆಗೆ ಯತ್ನಿಸುತ್ತಿದ್ದಂತೆ ಯುವಕರು ಹಿಗ್ಗಾಮುಗ್ಗಾ ಗೂಸಾ...
ಈ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ಹಲವು ಸಿನಿಮಾಗಳು ರಿಲೀಸ್ ಆಗಲು ರೆಡಿಯಾಗಿತ್ತು. ರಾಮನವಮಿ, ಯುಗಾದಿ ಹಬ್ಬಕ್ಕೆ ಸಿನಿಮಾಗಳು ರಿಲೀಸ್ ಆಗಬೇಕೆಂದು ಸಿದ್ಧವಾಗಿತ್ತು. ಆದ್ರೆ ಕೊರೊನಾ ಮಹಾಮಾರಿಯಿಂದ ಎಲ್ಲ ಸಿದ್ದತೆಗೆ ಬ್ರೇಕ್ ಹಾಕಲಾಯಿತು. ದೇಶವೇ ಲಾಕ್‌ಡೌನ್ ಆಗಿ ಶೂಟಿಂಗ್, ಥಿಯೇಟರ್ ಎಲ್ಲವೂ ಸ್ಥಗಿತಗೊಂಡಿತು.
ಆದ್ರೆ ಇದೀಗ ಲಾಕ್‌ಡೌನ್ ಕೊಂಚ ಸಡಿಲಿಕೆ ಮಾಡಿದ್ದು, ಶೂಟಿಂಗ್ ಸಿನಿಮಾ ರಿಲೀಸ್‌ಗೆ ತಯಾರಿ...
ಭಾರತೀಯ ಸಿನಿ ಇಂಡಸ್ಟ್ರಿಯಲ್ಲಿ ಜೀವಮಾನ ಸಾಧನೆ ಮಾಡಿದವರಿಗೆ ದಾದಾಸಾಹೇಬ್ ಪ್ರಶಸ್ತಿ ಕೊಡಲಾಗುತ್ತದೆ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಈ ಪ್ರಶಸ್ತಿಗೆ ದಾದಾಸಾಹೇಬ್ ಎಂಬ ಹೆಸರೇಕೆ ಇಡಲಾಯಿತು..? ದಾದಾಸಾಹೇಬ್ ಯಾರು..? ಭಾರತೀಯ ಸಿನಿ ಇಂಡಸ್ಟ್ರಿಗೆ ಅವರ ಕೊಡುಗೆ ಏನು..? ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಏನನ್ನು ಒಳಗೊಂಡಿರುತ್ತದೆ ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ.
ಫಾಲ್ಕೆಯವರ...