Wednesday, July 2, 2025

Latest Posts

ಲಕ್ಷ ಲಕ್ಷ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್

- Advertisement -

Doddaballapura News: ದೊಡ್ಡಬಳ್ಳಾಪುರದ ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್ 2 ತಹಶೀಲ್ದಾರ್ ದಿವಾಕರ್ ಎಂಬುವವರು 1ವರೆ ಲಕ್ಷ ಲಂಚ ಪಡೆಯುವಾಗ, ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ.

ನೆಲಮಂಗಲ ತಾಲೂಕಿನ ಅಪ್ಪಗ“ಂಡನಹಳ್ಳಿಯ ವಕೀಲರಾದ ದೊರೆಸ್ವಾಮಿ ಎಲ್ ಎಂಬುವವರಿಗೆ, ನೆಲಮಂಗಲ ತಾಲೂಕಿನ ಗಿರಿಯನ ಪಾಳ್ಯದ ಸರ್ವೇ ನಂಬರ್ 1/1A1 ರೀ ಪೋಡಿ 1/4, 1/7. 8.20 ಗುಂಟೆ ಕೋರ್ಟ್ ಸೇಲ್ ಡೀಡ್ ಪ್ರಕಾರ ಖಾತೆ ಮಾಡಬೇಕಿತ್ತು. ಆದರೆ ಈ ಕೆಲಸಕ್ಕೆ ದಿವಾಕರ್ 2 ಲಕ್ಷ ರೂಪಾಯಿ ಲಂಚ ಕೇಳಿದ್ದರು. ಡೀಲ್ ಆಗಿ 1ವರೆ ಲಕ್ಷಕ್ಕೆ ಬಂದಿತ್ತು.

ಇಂದು ಆ ಲಂಚವನ್ನು ನೀಡುವಾಗ, ಲೋಕಾಯುಕ್ತ ಪೋಲೀಸ್ ಇನ್ಸ್‌ಪೆಕ್ಟರ್ ರಮೇಶ್ ಮತ್ತು ತಂಡದಿಂದ ದಾಳಿ ನಡೆದಿದೆ. ಸದ್ಯ ದಿವಾಕರ್‌ನನ್ನು ಬಂಧಿಸಲಾಗಿದ್ದು, ಕಚೇರಿಯಲ್ಲಿ ದಾಖಲೆ ಪರಿಶೀಲನೆ ನಡೆದಿದೆ.

- Advertisement -

Latest Posts

Don't Miss