Thursday, May 8, 2025

Latest Posts

ಈ ಪ್ರದೇಶದಲ್ಲಿ ತೀರ್ಥ ಸ್ನಾನ ಮಾಡಿ.. ಶಿವ ಬ್ರಹ್ಮರ ಪೂಜೆ ಮಾಡಿದರೆ ಅದೃಷ್ಟ ನಿಮ್ಮ ಬೆನ್ನತ್ತುತ್ತದೆ..!

- Advertisement -

ಸನಾತನ ಹಿಂದೂ ಧರ್ಮವು ಕರ್ಮ ಸಿದ್ಧಾಂತವನ್ನು ನಂಬುತ್ತದೆ. ಹುಟ್ಟಿನಿಂದ ಹಿಡಿದು ವಿದ್ಯಾಭ್ಯಾಸ, ಉದ್ಯೋಗ, ಮದುವೆ ಮತ್ತು ಜೀವನದಲ್ಲಿ ನಡೆಯುವ ಎಲ್ಲವೂ ಕರ್ಮದ ಮೇಲೆ ಆಧಾರಿತವಾಗಿದೆ ಎಂದು ನಂಬಲಾಗಿದೆ. ಬ್ರಹ್ಮ ಹಣೆಯಲ್ಲಿ ಬರೆದ ಬರಹವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ.. ಆದರೆ ಪರಿಣಾಮವನ್ನು ಕಡಿಮೆ ಮಾಡಬಹುದು ಎಂದು ಅನೇಕ ಪರಿಹಾರಗಳನ್ನು ಮಾಡತ್ತಾರೆ. ದೇವಾಲಯಗಳ ಮೊರೆ ಹೋಗುತ್ತಾರೆ. ಆದರೆ ಪ್ರಪಂಚದಲ್ಲಿನ ಈ ಒಂದು ದೇವಾಲಯವು ನಮ್ಮ ಹಣೆಯ ಬರಹವವನ್ನು ಬದಲಾಯಿಸುತ್ಈ ಪ್ರದೇಶದಲ್ಲಿ ತೀರ್ಥ ಸ್ನಾನ ಮಾಡಿ.. ಶಿವ ಬ್ರಹ್ಮರ ಪೂಜೆ ಮಾತದೆ ,ಇಲ್ಲಿನ ದೈವವನ್ನು ದರ್ಶಿಸಿದರೆ ಹಣೆಬರಹ ಬದಲಾಗಿ ಅದೃಷ್ಟ ನಿಮ್ಮ ಕೈ ಇಡಿಯುತ್ತದೆ, ಎಂದು ನಂಬಲಾಗಿದೆ. ಆ ದೇವಸ್ಥಾನ ವಿಶೇಷತೆಗಳನ್ನು ತಿಳಿದುಕೊಳ್ಳೋಣ.

ಬ್ರಹ್ಮ, ವಿಷ್ಣು, ಮಹೇಶ್ವರರು ತ್ರಿಮೂರ್ತಿಗಳು. ಭೂಮಿಯ ಮೇಲೆ ದೇವಾಲಯಗಳಿಲ್ಲದೆ ನಮ್ಮನ್ನು ಸೃಷ್ಟಿಸಿದ ಬ್ರಹ್ಮನನ್ನು ಶಿವನು ಶಪಿಸಿದನು. ಆದರೆ ಒಂದು ಕ್ಷೇತ್ರವಿದೆ, ಅಲ್ಲಿ ಶಿವ ಮತ್ತು ಪಾರ್ವತಿಯೊಂದಿಗೆ ಬ್ರಹ್ಮ ದೇವರು ಕೂಡ ಪೂಜೆಯನ್ನು ಸ್ವೀಕರಿಸುತ್ತಾನೆ. ತಮಿಳುನಾಡಿನ ತಿರುಚ್ಚಿ ಬಳಿಯ ತಿರುಪತ್ತೂರಿನಲ್ಲಿರುವ ಬ್ರಹ್ಮಪುರೀಶ್ವರ ದೇವಾಲಯ . ಬ್ರಹ್ಮನು ಈಶ್ವರನನ್ನು ಪೂಜಿಸಿದ್ದರಿಂದ ಬ್ರಹ್ಮಪುರೇಶ್ವರ ದೇವಸ್ಥಾನ ಎಂಬ ಹೆಸರು ಬಂದಿದೆ. ಬ್ರಹ್ಮದೇವನ ದೇವಾಲಯವು ನಮ್ಮ ಮನಸ್ಸನ್ನು ಬದಲಾಯಿಸುವ ದೇವರು ಎಂದು ಪ್ರಸಿದ್ಧವಾಗಿದೆ. ಬ್ರಹ್ಮದೇವನ ಕೃಪೆಯಿದ್ದರೆ ಜೀವನದಲ್ಲಿ ಕಷ್ಟಗಳು ದೂರವಾಗಿ ಶುಭಕಾರ್ಯಗಳು ನಡೆಯುತ್ತವೆ ಎಂಬುದು ಭಕ್ತರ ನಂಬಿಕೆ.

ವಿಷ್ಣುವಿನ ನಾಭಿಯಿಂದ ಹುಟ್ಟಿದ ಬ್ರಹ್ಮ ದೇವರು ಈ ಸೃಷ್ಟಿಯ ಮೂಲ ಎಂದು ಹೆಮ್ಮೆಪಡುತ್ತಾನೆ. ಆಗ ಭಗವಾನ್ ಶಿವನ ರೂಪವೆಂದು ಪರಿಗಣಿಸಲ್ಪಟ್ಟಿರುವ ಕಾಲಭೈರವನು ಬ್ರಹ್ಮನ 5ನೇ ತಲೆಯನ್ನು ಖಂಡಿಸಿದನು. ಇದಲ್ಲದೆ, ಶಿವನು ಬ್ರಹ್ಮನನ್ನು ತನ್ನ ಸೃಷ್ಟಿ ಶಕ್ತಿಯನ್ನು ಕಳೆದುಕೊಳ್ಳುವಂತೆ ಶಪಿಸುತ್ತಾನೆ. ಹಾಗ ಬ್ರಹ್ಮದೇವನು ತನ್ನ ತಪ್ಪನ್ನು ಅರಿತು ಪಶ್ಚಾತ್ತಾಪಪಟ್ಟು ಶಾಪ ವಿಮೋಚನೆಗಾಗಿ ಈ ಪ್ರದೇಶದಲ್ಲಿ ಶಿವನ 12 ಲಿಂಗಗಳನ್ನು ಸ್ಥಾಪಿಸಿ ಶಿವನನ್ನು ಪ್ರಾರ್ಥಿಸಿದನು. ಅದಕ್ಕಾಗಿಯೇ ಈ ಪಟ್ಟಣವನ್ನು ಬ್ರಹ್ಮಪುರಿ ಎಂದು ಕರೆಯುತ್ತಾರೆ. ಬ್ರಹ್ಮತೀರ್ಥದ ಸುತ್ತಲೂ. ಶಿವನನ್ನು ಪೂಜಿಸಲು ಬ್ರಹ್ಮನು ನೀರನ್ನು ತೆಗೆದುಕೊಂಡ ಕೊಳವನ್ನು ಬ್ರಹ್ಮ ತೀರ್ಥ ಎಂದು ಕರೆಯಲಾಗುತ್ತದೆ.

ಬ್ರಹ್ಮನ ಪಶ್ಚಾತ್ತಾಪವನ್ನು ಮನಗಂಡ ಪಾರ್ವತಿ ಪರಮೇಶ್ವರರು ಬ್ರಹ್ಮದೇವನ ಶಾಪವನ್ನು ವಿಮೋಚನೆ ಮಾಡಿ ಸೃಷ್ಟಿಯ ಶಕ್ತಿಯನ್ನು ಮರಳಿ ನೀಡಿದರು. ಹಾಗಾಗಿ ಈ ಬ್ರಹ್ಮಪುರಿಯಲ್ಲಿ ಬ್ರಹ್ಮ ದೇವರಿಗೆ ವಿಶೇಷವಾದ ದೇವಾಲಯವಿದೆ. ತಮ್ಮ ಜೀವನದಲ್ಲಿ ಬಯಸಿದ್ದನ್ನು ಸಾಧಿಸಲು ಸಾಧ್ಯವಾಗದಿದ್ದಾಗ.. ದುರದೃಷ್ಟಗಳು ಕಾಡಿದಾಗ ಇಲ್ಲಿರುವ ಬ್ರಹ್ಮ ದೇವರ ದರ್ಶನ ಮಾಡಿ.. ತಮ್ಮ ಕಷ್ಟಗಳನ್ನು ದೂರಮಾಡಿಕೊಳ್ಳುತ್ತಾರೆ.

ಪ್ರತಿ ವರ್ಷ ತಮಿಳು ಪಂಗುನಿ ಮಾಸದಲ್ಲಿ ಮೂರು ದಿನಗಳ ಕಾಲ ಸೂರ್ಯನ ಕಿರಣಗಳು ಏಳು ದ್ವಾರಗಳನ್ನು ಹಾದು ಗರ್ಭವನ್ನು ಪ್ರವೇಶಿಸಿ ನೇರವಾಗಿ ಬ್ರಹ್ಮನನ್ನು ಸ್ಪರ್ಶಿಸುತ್ತವೆ.6 ಅಡಿಯ ಬ್ರಹ್ಮ ಮೂರ್ತಿಯನ್ನು ಯಾವಾಗಲೂ ಕೇಸರಿ ಬಣ್ಣದಿಂದ ಅಲಂಕರಿಸಲಾಗುತ್ತದೆ. ಸೋಮವಾರ ಮತ್ತು ಗುರುವಾರ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಬ್ರಹ್ಮನ ಆಶೀರ್ವಾದ ಪಡೆಯಲು ಮತ್ತು ತಮ್ಮ ಹಣೆ ಬರಹವನ್ನು ಬದಲಾಯಿಸಲು ಅನೇಕ ಸ್ಥಳಗಳಿಂದ ಅಪಾರ ಸಂಖ್ಯೆಯ ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ.

 

- Advertisement -

Latest Posts

Don't Miss