www.karnatakatv.net :ಗುಂಡ್ಲುಪೇಟೆ: ಕರೋನಾ ಆರ್ಟಿಪಿಸಿಆರ್ ವರದಿಯನ್ನು ನೀಡಲು ತಾಲೂಕು ಆಸ್ಪತ್ರೆ ಆಡಳಿತ ಮಂಡಳಿ ವಿಳಂಭ ದೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ಕಾವಲುಪಡೆ ಸದಸ್ಯರು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು.
ನೆರೆರಾಜ್ಯ ಕೇರಳದಲ್ಲಿ ನಿಪಾ ವೈರಸ್ ಸೋಂಕಿಗೆ ಮೊದಲ ಬಲಿಯಾಗಿದೆ, ಇಂತಹ ಸಂಧರ್ಭದಲ್ಲಿ ಎಚ್ಚೆತ್ತುಕೊಳ್ಳಬೇಕಿದ್ದ ತಾಲೂಕು ಆರೋಗ್ಯ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಮಾನವ ಬಂದುತ್ವ ವೇದಿಕೆ ಜಿಲ್ಲಾ ಸಂಚಾಲಕ ಸುಭಾಷ್ ಮಾಡ್ರಹಳ್ಳಿ ಆರೋಪಿಸಿದ್ದಾರೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಪ್ರತಿಭಟನೆಯಲ್ಲಿ ನಿರತರಾಗಿರುವ ಕಾವಲುಪಡೆ ಸದಸ್ಯರಿಂದ ಅಧಿಕಾರಿಗಳಿಗೆ ದಿಕ್ಕಾರದ ಘೋಷಣೆ ಮಾಡಿದ್ದು, ಆರ್ಟಿಪಿಸಿಆರ್ ವರದಿಯನ್ನು ಪಡೆಯಲು ಕಂಪ್ಯೂಟರ್ ಕೇಂದ್ರಗಳಲ್ಲಿ ಜನ ಜಮಾಯಿಸುತ್ತಿದ್ದಾರೆ.
ಕರೋನಾ ಪರೀಕ್ಷೆ ಇಲ್ಲದೆ ಆರ್ಟಿಪಿಸಿಆರ್ ನೀಡಲು ಹೇಗೆ ಸಾಧ್ಯ, ಕರೋನಾ ನಿಯಂತ್ರಣದಲ್ಲಿರುವ ಸಂಧರ್ಭದಲ್ಲಿ ಆರೋಗ್ಯ ಇಲಾಖೆ ಜಾಣ ಕುರುಡು ಪ್ರದರ್ಶನ ಮಾಡುತ್ತಿರುವುದು ಎಷ್ಟು ಸರಿ. ಸರ್ಕಾರಿ ಆಸ್ಪತ್ರೆಯಲ್ಲೆ ಆರ್ಟಿಪಿಸಿಆರ್ ವರದಿಯನ್ನು ನೀಡಲು ವ್ಯವಸ್ಥೆ ಮಾಡುವಂತೆ ಆಗ್ರಹಿಸುತ್ತಿರುವ ಪ್ರತಿಭಟನಾಕಾರರು. ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲೇ ಇರುವ ಸರ್ಕಾರಿ ಆಸ್ಪತ್ರೆ ಇದು. ಇನ್ನಾದರು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದು ತಿಳಿಸಿದ್ರು.
ಪ್ರಸಾದ್, ಕರ್ನಾಟಕ ಟಿವಿ- ಚಾಮರಾಜನಗರ