www.karnatakatv.net: ಬೆಳಗಾವಿ: ಜಿಲ್ಲೆಯಲ್ಲಿ ಲಸಿಕಾ ಅಭಿಮಾನ ಇಂದು ಆರಂಭವಾಗಿದ್ದು 3 ಲಕ್ಷ ಜನರಿಗೆ ಲಸಿಕೆ ನೀಡುವ ಟಾರ್ಗೆಟ್ ನೀಡಲಾಗಿದೆ.1200 ಲಸಿಕಾ ಕೇಂದ್ರದಲ್ಲಿ ಅಭಿಯಾನ ಆರಂಭವಾಗಿದ್ದು, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅಂಜುಮಾನ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಲಸಿಕೆ ಪಡೆಯಲು ಜನರು ಲಸಿಕಾ ಕೇಂದ್ರದತ್ತ ಮುಖ ಮಾಡುತ್ತಿದ್ದಾರೆ ಈವರೆಗೂ ಶೇ.72 ರಷ್ಟು ಲಸಿಕೆ ನೀಡಲಾಗಿದ್ದು.ಇನ್ನೂ 10 ಜನರಿಗೆ ಲಸಿಕೆ ನೀಡಬೇಕಿದೆ ಇದರಲ್ಲಿ ಇವತ್ತು 3 ಲಕ್ಷ ಜನರಿಗೆ ಲಸಿಕೆ ನೀಡಾಗುತ್ತಿದೆ.
ಬೆಳಗಾವಿ ಗಡಿ ಭಾಗ ಆಗಿರುವುದರಿಂದ ಕೋವಿಡ ನಿಯಮಗಳನ್ನ ಕಟ್ಟು ನಿಟ್ಟಿನಲ್ಲಿ ಪಾಲಿಸಲು ಸರ್ಕಾರ ಆದೇಶವನ್ನ ಸಹ ನೀಡಿದ್ದು.ಈ ಬಾರಿ ಮೂರನೇ ಅಲೆ ಬರುತ್ತಿರುವುದರಿಂದ ಮಕ್ಕಳ ಮೇಲೆ ಬರುತ್ತಿರುವ ಹಿನ್ನಲೆಯಲ್ಲಿ ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಉದ್ದೇಶದಿಂದ ಇವತ್ತು ಅಭಿಯಾನವನ್ನು ನಡೆಸಲಾಗುತ್ತಿದೆ ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಅವರು ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಲಾಗಿದೆ. ಹಾಗೇಯೆ ಈ ಸಂದರ್ಭದಲ್ಲಿ ಫಸ್ಟ್ ಡೋಸ್, ಸೆಕೆಂಡ್ ಡೋಸ್ ಎರಡು ಲಸಿಕೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ತಿಳಿಸಿದರು.
ನಾಗೇಶ್ ಕುಂಬಳಿ, ಕರ್ನಾಟಕ ಟಿವಿ- ಬೆಳಗಾವಿ