Monday, May 20, 2024

Latest Posts

ಟಾಟ ಕಂಪನಿಯ ಸುಮೋ ವಾಹನದ ಹೆಸರಿನ ಹಿಂದಿನ ರಹಸ್ಯ

- Advertisement -

 

ಟಾಟ ಸುಮೊ (TATA SUMO ) ವಾಹನ ಪ್ರತಿಯೊಬ್ಬ ವಾಹನ ಪ್ರಿಯನ ಹಾರ್ಟ ಫೆವರೇಟ್ ಆಗಿದ್ದ ವಾಹನ. ಯಾರಾದರೂ ಎಲ್ಲಿಗಾದರೂ ಕುಟುಂಬ ಸಮೇತ ಪ್ರವಾಸಕ್ಕೆ ಹೋಗಬೇಕೆಂದರೆ ಮೊದಲು ಆರಿಸಿಕೊಳ್ಳವುದೇ ಈ ವಾಹನವನ್ನು ಯಾಕೆಂದರೆ ಇದು ಹತ್ತು ಜನರನ್ನು ಹೊತ್ತೊಯ್ಯಬಲ್ಲ ವಾಹನ ಅಧಿಕ ಮೈಲೆಜ್ ಗಟ್ಟಿಮುಟ್ಟಾದ ಹಾಗೂ ಎಂತಹ ಕಠಿಣ ರಸ್ತೆ4ಯಲ್ಲಾದರೂ ಸುಲಭವಾಗಿ ಸಾಗಬಲ್ಲ ಹಾಗೂ ಕಡಿಮೆ ವೆಚ್ಚದ ಕೈಗೆಟುಗುವ ಬೆಲೆಯಲ್ಲಿ ಖರಿಧಿ ಮಾಡಬಲ್ಲ ವಾಹನ ಯಾವುದಾದರೂ ಇತ್ತಂದರೆ ಅದು ಟಾಟ ಸುಮೊ ಇಷ್ಟಲ್ಲ ಸೌಲಭವಿರಿವ ಈ ವಾಹನಕ್ಕೆ ಈ ಹೆಸರನ್ನು ಎಡಲು ಕಾರಣ ಜಪಾನ್ ನ ಕುಸ್ತಿಪಟುವಾಗಿರುವ ಹಾಗೂ ದೈತ್ಯ ದೇಹವನ್ನು ಹೊಂದಿರುವ ಸುಮೊ ಇನ್ನುವ ಕುಸ್ತಿಪಟುವಿನ ಹೆಸರನ್ಉ ಇದಕ್ಕೆ ಇಟ್ಟಿರಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು ಆದರೆ ಅದು ನಿಜ ಅಲ್ಲ ಎಂದು ಎಲ್ಲರಿಗೂ ತಿಳಿದಿರಲಿ ಹಾಗಿದ್ರೆ  ಈ ರೀತಿ ಹೆಸರು ಏಕೆ ಇಟ್ಟಿರಬಹುದು . ಎಂದು ಹೇಳುವುದಾದರೆ. ಇದು ಕುಸ್ತಿಪಟುವಿನ ಹೆಸರಲ್ಲ ಬದಲಲಿಗೆ ಇದು ಟಾಟ ಕಂಪನಿಯಲ್ಲಿ ಸಿ ಇ ಒ ಆಗಿ ಕೆಲಸ ಮಾಡಿದಂತಹ ಶ್ರೀ ಸುಮಂತ್ ಮೋಗಲಿಕರೆ( SIMANTH MOOGLIKAR )ಎನ್ನುವವರು ಹೆಸರು  ಹಾಗಿದ್ರೆ ಇವರ  ಹೆಸರನ್ನು  ಈ ಮಾಡೆಲ್ ಗೆ ಏಕಿಡಬೇಕು  ಎಂದು ನೀವು ಕೇಳುವುದಾದರೆಈ ಕಂಪನಿಗೆ ಇವರ ಕೊಡುಗೆ ಅಪಾರವಿದೆ ಈ ಕಂಪನಿ ಈ ಮಟ್ಟಕ್ಕೆ ಬೆಳೆಯಲು  ಕಾರಣವಾದರು ಎಂದು ಹೇಳಿದರೆ ತಪ್ಪಾಗಲಾರದು.

ಪ್ರತಿದಿನವು ಮದ್ಯಾನದ ಊಟದ ಸಮಯದಲ್ಲಿ ಎಲ್ಲಾ ಸಿಬ್ಬಂದಿಗಳು ಜೊತೆಯಲ್ಲಿ ಕುಳಿತು ಊಟ ಮಾಡುತ್ತಿರಬೇಕಾದರೆ ಇವರು ಮಾತ್ರ ಕಾಣಿಸಿಕೊಳ್ಳುತ್ತಿರಲ್ಲ. ಸಿಬ್ಬಂದಿಗಳು ಇವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದರು . ಹೀಗಿರಬೇಕಾದರೆ ಅವರಿಗೆ ಒಂದು ಅನುಮಾನ ಕಾಡಲು ಶುರುವಾಯಿತು ಇವರು ನಮ್ಮ ಜೊತೆ ಊಟ ಮಾಡದೆ ಡೀಲರ್ಸ ಗಳ ಜೊತೆ ಪಂಚತಾರ ಹೊಟೆಲ್ ನಲ್ಲಿ ಊಟ ಮಾಡವ ಸಲುವಾಗಿ ನಮ್ಮಿಂದ ತಪ್ಪಿಸಿಕೊಳ್ಳುತಿದ್ದಾರೆನೋ ಎಂದು ಅನುಮಾನಿಸಿ ಒಂದು ದಿನ ಅವರನ್ನು ಹಿಂಬಾಲಿಸಲು ಮುಂದಾದರು. ಅವರನ್ನು ಹಿಂಬಾಲಿಸಿದ ಮೆಲೆ ಅವರಿಗೆ ತಿಳಿದ ವಿಷಯ ತುಂಬಾ ಆಶ್ಚರ್ಯವಾಗಿತ್ತು. ಅವರು ಅಂದುಕೊಂಡಿದ್ದರು ಅವರು 5 ಸ್ಟಾರ್ ನಲ್ಲಿ ಊಟ ಮಾಡುತ್ತಾರೆ ಎಂದು ಆದರೆ ಅವರು ಊಟಮಾಡುತಿದ್ದದ್ದು ಬೇರೆ ಕಡೆ ಎಂದು ಅದು ಎಲ್ಲಿ ಎಂದರೆ ಹೈವೆ ರಸ್ತೆಯಲ್ಲಿರುವ ಡಾಬಾಗಳಲ್ಲಿ. ಅದೂ ಟ್ರಕ್  ವಾಹನ ಚಲಕರ ಜೊತೆ .

ಈ ರೀತಿ ಇವರು ಜೊತೆ ಊಟ ಮಾಡಲು ಕಾರಣವೆನೆಂದರೆ ಟ್ರಕ್ ಡ್ರೈವರ್ ಗಳ ಅಭಿಪ್ರಾಯವನ್ನು ತಿಳಿದುಕೊಳ್ಳಲು ಅವರು ಓಡಿಸುವಾಗ ವಾಹನದಲ್ಲಾಗುವ ತೊಂದರೆಗಳನ್ನು ತಿಳಿದು ತಮ್ಮ ಕಂಪನಿಯ ವಾಹನಗಳಲ್ಲಿ ಆಗಬೇಕಾಗಿರುವ ಬದಲಾವಣೆಗಳನ್ನು  ತಿಳಿದು ನಂತರ ಸಂಸ್ಥೆಗೆ ಬಂದು  ಸಿಬ್ಬಂದಿಗಳ ಜೊತೆ ಚರ್ಚಿಸಿ ವಾಹನಗಳಲ್ಲಿ ಸುದಾರಣೆ ಗಳನ್ನು ತರುತಿದ್ದರು. ಹೀಗಾಗಿ ಸುಧಾರಿಸಿದ ವಾಹನಗಳು ಮಾರುಕಟ್ಟೆಯಲ್ಲಿ ಅಧಿಕ ಮಟ್ಟದಲ್ಲಿ ಮಾರಾಟವಾಗುತಿದ್ದವು. ಇದೇ ರೀತಿ ಇವರು ಹಲವಾರು ಸಂಶೋಧನೆ ಮಾಡಿ ಮಾಡಿ ಕಂಪನಿಯ ಅಭಿವೃದ್ದಿಗೆ ಶರಮ ಪಟ್ಟಿದ್ದಾರೆ. ಇದರ ಪರಿಣಾಮವೇ ಇಂದು ಕಂಪನಿ ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದೆ ಎಂದು ಹೇಳಿದರೆ ತಪ್ಪಾಗಲಾರದು.

ಈ ರೀತಿ ಸುಲಭವಾಗಿ ನೀವು ತೂಕ ಇಳಿಸಿಕೊಳ್ಳಬಹುದು ನೋಡಿ..

ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಗೆ ಹೃದಯಾಘಾತ

ದೂರ್ವಾಸ ಮುನಿಗಳ ವಿಚಿತ್ರ ಬೇಡಿಕೆಯನ್ನ ಶ್ರೀರಾಮ ಹೇಗೆ ನೆರವೇರಿಸಿದ ಗೊತ್ತಾ..? ಭಾಗ 1

- Advertisement -

Latest Posts

Don't Miss