Sunday, June 1, 2025

Latest Posts

Mandya: ವಿದ್ಯಾರ್ಥಿನಿಯರ ‘ಚಿತ್ರ’ ಕ್ಲಿಕ್ಕಿಸಿ ಕಿರುಕುಳ ‘; ವಿಕೃತ ಕಾಮಿ’ ಅರೆಸ್ಟ್..!

- Advertisement -

ಇಂತಹದೊಂದು ಹೀನ ಘಟನೆ ನಮ್ಮ ರಾಜ್ಯದಲ್ಲಿ ನಡೆದಿದೆ ಅಂತಾ ಹೇಳಿಕೊಳ್ಳೋಕೆ ನಮಗೆ ನಾಚಿಕೆ ಆಗುತ್ತಿದೆ. ಈತ ಒಬ್ಬರಲ್ಲ.. ಇಬ್ಬರಲ್ಲ.. ಬರೋಬ್ಬರಿ ಹತ್ತು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೋಡಿದ್ದಾನೆ. ತಾನು ಶಾಲೆಯ ಹಳೆ ವಿದ್ಯಾರ್ಥಿ ಎಂದು ಶಾಲೆಗೆ ಬಂದು ಕಿರಾತಕ ತನ್ನ ಅಸಲಿ ಮುಖ ಅನಾವರಣ ಮಾಡಿದ್ದಾನೆ. ಈ ದುಷ್ಟನ ಕೃತ್ಯಕ್ಕೆ ಚಿಕ್ಕ ಮಕ್ಕಳು ಜೀವನ ಬಲಿಯಾಗಿದೆ. ಶಾಲಾ ಹೆಣ್ಮಕ್ಕಳ ಬೆತ್ತಲೆ ಫೋಟೋ ಕ್ಲಿಕ್ಕಿಸಿ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ಹಾಗಾದ್ರೆ ಆ ಪಾಪಿ ಯಾರು? ಆತ ಮಾಡಿದ್ದಾದ್ರು ಎನು? ಈತನ ನೀಚ ಕೃತ್ಯ ಬಯಲಾಗಿದ್ದು ಹೇಗೆ? ಎನ್ನುವುದರ ಅಸಲಿ ಕಥೆ

 

ಆರೋಪಿಯ ಹೆಸರು ಯೋಗಿ ಅಂತಾ.. ಈತ ನಿಜಕ್ಕೂ ವಿಕೃತಕಾಮಿ ಅಂದರೆ ತಪ್ಪಿಲ್ಲ. ಪ್ರೌಢಶಾಲೆಯೊಂದಕ್ಕೆ ಭೇಟಿ ನೀಡಿದ್ದ ಯೋಗಿ, ನಾನು ಇದೇ ಶಾಲೆಯ ಹಳೆ ವಿದ್ಯಾರ್ಥಿ ಎಂದು ಪರಿಚಯ ಮಾಡಿಕೊಂಡು ಅಲ್ಲಿಯೇ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ತಾನು ಚಿತ್ರಕಲೆ, ಕ್ರೀಡೆಯನ್ನು ಹೇಳಿಕೊಡುವುದಾಗಿ ಹೇಳುತ್ತಾನೆ. ಏನೋ ಶಾಲೆಯ ಹಳೆ ವಿದ್ಯಾರ್ಥಿ ಎನ್ನುವ ಕಾರಣಕ್ಕೆ ಆತನ ಬಗ್ಗೆ ಹಿಂದೆ ಮುಂದೆ ವಿಚಾರಣೆ ಮಾಡದೇ, ಆತನಿಗೆ ಕೆಲಸ ಕೊಡುತ್ತೆ. ಈದಾದ ನಂತರ ಯೋಗಿ ತನ್ನ ಅಸಲಿ ಮುಖವನ್ನು ತೋರಿಸಲು ಆರಂಭಮಾಡುತ್ತಾನೆ. ಈತ ತನ್ನ ಬಳಿ ಕ್ರೀಡೆ ಹಾಗೂ ಚಿತ್ರಕಲೆ ಕಲಿಯಲು ಬರುತ್ತದ್ದ ವಿದ್ಯಾರ್ಥಿನಿಯರ ಬೆತ್ತಲೆ ಫೋಟೋ ಕ್ಲಿಕ್ಕಿಸಿ ಬ್ಲ್ಯಾಕ್‍ಮೇಲ್ ಮಾಡಲು ಮುಂದಾಗಿದ್ದ.

ಎಲ್ಲಕ್ಕೂ ಮಿಗಿಲಾಗಿ, ಅಣ್ಣನಂತೆ ನಂಬಿಸಿ ಅಪ್ರಾಪ್ತ ವಿದ್ಯಾರ್ಥಿನಿಯರ ನಗ್ನ ಚಿತ್ರ ಫೋಟೊ ತೆಗೆದು ಅವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಾ ಪದೇ ಪದೇ ಅವರನ್ನು ತನ್ನ ಲೈಂಗಿಕ ತೃಷೆಗಾಗಿ ಬಳಸಿಕೊಳ್ಳುತ್ತಿದ್ದ. ಕ್ರೀಡೆಯಲ್ಲಿ ಆಸಕ್ತಿ ಇದ್ದ ಬಾಲಕಿಯರನ್ನೇ ಆರೋಪಿ ಯೋಗಿ ಟಾರ್ಗೆಟ್ ಮಾಡುತ್ತಿದ್ದ. ವಿದ್ಯಾರ್ಥಿನಿಯರಿಗೆ ಡ್ರಾಪ್ ಕೊಡುವ ನೆಪದಲ್ಲಿ, ಕ್ರೀಡೆ ಹೇಳಿಕೊಡುವ ನೆಪದಲ್ಲಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವಾಗ ನಗ್ನ ಫೋಟೋ ತೆಗೆದು ಅವುಗಳನ್ನ ಹೆತ್ತವರಿಗೆ ಕಳುಹಿಸುವುದಾಗಿ ಬೆದರಿಸಿ ದೌರ್ಜನ್ಯ ಎಸಗುತ್ತಿದ್ದ. ಏನೂ ಅರಿಯದ ಮಕ್ಕಳು ಭಯಗೊಂಡಿದ್ದರು. ಹಿಂದೊಮ್ಮೆ ಗ್ರಾಮದ ವಿದ್ಯಾರ್ಥಿನಿಗೆ ಐಸ್‍ಕ್ರೀಮ್ ನೀಡಿ ಪ್ರಜ್ಞೆ ತಪ್ಪಿಸಿ ಬೆತ್ತಲೆ ಫೋಟೋ ತೆಗೆದು ನನ್ನೊಂದಿಗೆ ಮಲಗಲು ಹೇಳಿದ್ದ ಈ ಪಾಪಿ..

ದಿನೇದಿನೆ ಇವನ ಪೈಶಾಚಿಕತನ ಹೆಚ್ಚಾಗಿದ್ದು, ಭಾದಿತರಾದ ವಿದ್ಯಾರ್ಥಿನಿಯರು ಧೈರ್ಯಮಾಡಿ ಜಿಲ್ಲಾ ಮಕ್ಕಳ ರಕ್ಷಾಣಾ ಘಟಕಕ್ಕೆ ಪತ್ರ ಬರೆದು ಅಳಲು ತೋಡಿಕೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಅಧಿಕಾರಿಯು ಶಾಲೆಗೆ ತೆರಳಿ ವಿದ್ಯಾರ್ಥಿನಿಯರನ್ನು ಭೇಟಿ ಮಾಡಿ, ವಿಚಾರಿದಾಗ ಈ ಘೋರ ಕೃತ್ಯ ಬೆಳಕಿಗೆ ಬಂದಿದೆ. ಈ ಸಂಬಂಧ ನಾಲ್ವರು ವಿದ್ಯಾರ್ಥಿನಿಯರು ನೀಡಿದ ಹೇಳಿಕೆಯನ್ನು ಆಧರಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಎಸ್.ಎಂ.ಶೈಲಜಾ ನೀಡಿದ ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿಯರು 15-17 ವರ್ಷದವರಾಗಿದ್ದು, ಅಪ್ರಾಪ್ತಯರಾಗಿದ್ದಾರೆ. ಫೋಕ್ಸೋ ಜೊತೆಗೆ ಐಪಿಸಿ ಸೆಕ್ಸನ್ 354, 354 ಆ, 509 ಅಡಿಯಲ್ಲಿ ಯೋಗಿ ವಿರುದ್ಧ ಕೇಸ್ ದಾಖಲಿಸಿರುವ ಪೊಲೀಸರು, ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ವೀಕ್ಷಕರೇ ಈ ಘಟನೆ ನಡೆದಿರುವುದು ಉತ್ತರ ಪ್ರದೇಸದಲ್ಲೋ.. ಬಿಹಾರದಲ್ಲೋ ಅಲ್ಲ.. ಬದಲಾಗಿ ಸಕ್ಕರೆ ನಾಡು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಜಕ್ಕನಹಳ್ಳಿಯಲ್ಲಿ.

- Advertisement -

Latest Posts

Don't Miss