Monday, July 22, 2024

Latest Posts

Ind vs Zim: ಜಿಂಬಾಬ್ವೆ ವಿರುದ್ಧ ಯಂಗ್ ಟೀಂ ಇಂಡಿಯಾಗೆ ಭರ್ಜರಿ ಗೆಲುವು

- Advertisement -

ಐದು ಪಂದ್ಯಗಳ ಸರಣಿಯ ಮೂರನೇ ಟಿ20 ಪಂದ್ಯದಲ್ಲಿ ಭಾರತ ಜಿಂಬಾಬ್ವೆಯನ್ನು ಸೋಲಿಸಿ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ನಾಯಕ ಶುಭಮನ್ ಗಿಲ್ 49ಎಸೆತಗಳಲ್ಲಿ 66 ರನ್ ಗಳಿಸಿ ತಂಡದ ಪರವಾಗಿ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡರು. ಅದ್ಭುತ ಪ್ರದರ್ಶನ ನೀಡಿದ ಯಂಗ್ ಇಂಡಿಯಾ, ಆತಿಥೇಯ ಜಿಂಬಾಬ್ವೆ ತಂಡವನ್ನು 23 ರನ್​ಗಳಿಂದ ಮಣಿಸಿದೆ. ಎರಡನೇ ಟಿ20 ಪಂದ್ಯದಲ್ಲಿ 100 ರನ್​ಗಳ ಅಂತರದಲ್ಲಿ ಜಯಗಳಿಸಿದ್ದ ಟೀಂ ಇಂಡಿಯಾ ತನ್ನ ಅದ್ಭುತ ಆಟವನ್ನು ಮತ್ತೊಮ್ಮೆ ಪ್ರದರ್ಶಿಸಿ ಈ ಸರಣಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ.

 

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಬುಧವಾರ, ಜುಲೈ 10 ರಂದು ಜಿಂಬಾಬ್ವೆ ವಿರುದ್ಧದ ಮೂರನೇ T20Iನಲ್ಲಿ ಭಾರತವು ಭರ್ಜರಿ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ, ನಾಯಕ ಶುಭಮನ್ ಗಿಲ್ (66ರನ್) ಅವರ ಅದ್ಭುತ ಅರ್ಧಶತಕ ಹಾಗೂ ರುತುರಾಜ್ ಗಾಯಕ್ವಾಡ್ 28 ಎಸೆತಗಳಲ್ಲಿ 49 ರನ್ ಗಳಿಸುವ ಮೂಲಕ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 182/4 ಉತ್ತಮ ಸ್ಕೋರ್ ಗಳಿಸಿತು. ಇದಕ್ಕೆ ಉತ್ತರವಾಗಿ ಜಿಂಬಾಬ್ವೆ ತನ್ನ 20 ಓವರ್‌ಗಳಲ್ಲಿ 159/6 ಗಳಿಸಲಷ್ಟೇ ಶಕ್ತವಾಯಿತು. ಆವೇಶ್ ಖಾನ್ 39ರನ್ ಗಳಿಗೆ 2ವಿಕೆಟ್ ಕಬಳಿಸಿದರು. ವಾಷಿಂಗ್ಟನ್ ಸುಂದರ್ 4 ಓವರ್‌ಗಳಲ್ಲಿ ಕೇವಲ 15 ರನ್ ನೀಡಿ 3 ವಿಕೆಟ್ ಪಡೆದರು. ಈ ಮೂಲಕ ಗಿಲ್ ಜೊತೆಗೂಡಿ ಸುಂದರ್ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದರು.

 

183ರನ್ ಗಳ ಗುರಿ ಬೆನ್ನತ್ತಿದ ಜಿಂಬಾಬ್ವೆ ತಂಡ ಆರಂಭದಲ್ಲೇ ಆಘಾತ ಎದುರಿಸಿತು. ತಂಡದ ಅರ್ಧದಷ್ಟು ಆಟಗಾರರು ಕೇವಲ 7 ಓವರ್‌ಗಳು ಆಗುವಷ್ಟರಲ್ಲೇ ಪೆವಿಲಿಯನ್ ಸೇರಿಕೊಂಡಿದ್ದರು. 39ಕ್ಕೆ5 ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡಿದ್ದರೂ ಉತ್ತಮ ಹೋರಾಟ ನಡೆಸಿತು. ಡಿಯೋನ್ ಮೈಯರ್ಸ್ ಮತ್ತು ಕ್ಲೈಬ್ ಮದಾಂಡೆ ನಡುವಿನ ಅದ್ಭುತ 77 ರನ್ ಜೊತೆಯಾಟವು ಜಿಂಬಾಬ್ವೆ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರೂ ಪಂದ್ಯ ಅದಾಗಲೇ ಕೈ ತಪ್ಪಿತ್ತು. ಅಂತಿಮವಾಗಿ ಡಿಯೋನ್ ಮೈಯರ್ಸ್ 49 ಎಸೆತಗಳಲ್ಲಿ 65ರನ್ ಗಳು ಮತ್ತು ಕ್ಲೈಬ್ ಮದಾಂಡೆ 26 ಎಸೆತಗಳಲ್ಲಿ 37ರನ್ ಗಳ ಕಾಣಿಕೆ ನೀಡಿದರೆ ಜಿಂಬಾಬ್ವೆ 159 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಬೌಲಿಂಗ್ ನಲ್ಲಿ ಅದ್ಭುತ ಪ್ರದರ್ಶನ ತೋರಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ವಾಷಿಂಗ್ಟನ್ ಸುಂದರ್ ಪಂದ್ಯ ಪುರುಷ ಪ್ರಶಸ್ತಿ ಪಡೆದುಕೊಂಡರು.

- Advertisement -

Latest Posts

Don't Miss