ಕಾಲೇಜಿನಲ್ಲಿ ಎಲ್ಲರೆದುರು ಮುಸ್ಲಿಂ ವಿದ್ಯಾರ್ಥಿಯನ್ನು ಭಯೋತ್ಪಾದಕ ಎಂದು ಅವಮಾನಿಸಿದ ಶಿಕ್ಷಕ

Viral News: ಓರ್ವ ಶಿಕ್ಷಕ ಕ್ಲಾಸಿನಲ್ಲಿಯೇ ಎಲ್ಲರೆದುರು ಮುಸ್ಲಿಂ ವಿದ್ಯಾರ್ಥಿಯನ್ನು ಟೆರರಿಸ್ಟ್ ಎಂದು ಅವಮಾನಿಸಿದ ಘಟನೆ ನಡೆದಿದೆ.

ಬೆಂಗಳೂರಿನಲ್ಲೇ ಈ ಘಟನೆ ನಡೆದಿದ್ದು. ಡಾ.ಮುರಳಿಧರ್ ದೇಶಪಾಂಡೆ ಎಂಬ ಶಿಕ್ಷಕರು ಕ್ಯಾಂಪಸ್‌ನಲ್ಲಿ ರುವಾಗ ಎಲ್ಲರ ಎದುರು ವಿದ್ಯಾರ್ಥಿಗೆ ಈ ರೀತಿ ಅವಮಾನಿಸಿದ್ದು, ವೀಡಿಯೋ ವೈರಲ್ ಆಗಿದೆ.

ಅಫಾನ್ ಎಂಬ ವಿದ್ಯಾರ್ಥಿಯನ್ನು 13ಕ್ಕೂ ಹೆಚ್ಚು ಬಾರಿ ಈ ರೀತಿ ಅವಮಾನಿಸಿದ್ದಲ್ಲದೇ, ಪದೇ ಪದೇ ಭಯೋತ್ಪಾದಕ ಎಂದು ಹೀಯಾಳಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಆತ ಕ್ಲಾಸ್ ನಡಿಯುವಾಗ ಮಾತನಾಡಿದ್ದಕ್ಕೆ ಈ ರೀತಿ ಬೈಯ್ದಿದ್ದಾರೆನ್ನಲಾಗಿದೆ.

ನಿನ್ನಂಥ ಜನರಿಂದಲೇ ಇರಾನ್‌ನಲ್ಲಿ ಯುದ್ಧ ನಡಿತೀರೋದು. ಟ್ರಂಪ್ ನಿಮಗೆಲ್ಲ ಸರಿಯಾಗಿ ಬುದ್ಧಿ ಕಲಿಸುತ್ತಾನೆ. ನೀವೆಲ್ಲ ಮೂರ್ಖರು. ನರಕಕ್ಕೆ ಹೋಗಿ ಎಂದು ಮುರಳಿಧರ್ ಬೈಯ್ದಿದ್ದಾರೆನನ್ನಲಾಗಿದೆ.

ಕ್ಲಾಸಿನಲ್ಲಿ ಕುಳಿತಿದ್ದ ಓರ್ವ ವಿದ್ಯಾರ್ಥಿ ಇವರ ಮಾತನ್ನು ರೆಕಾರ್ಡ್ ಮಾಡಿ ವೈರಲ್ ಮಾಡಿದ್ದಾನೆ. ಇದೀಗ ಕಾಲೇಜಿನಿಂದ ಮುರಳಿಧರ್ ಅವರನ್ನು ಅಮಾನತು ಮಾಡಲಾಗಿದ್ದು, ದೂರು ಕೂಡ ದಾಖಲಿಸಲಾಗಿದೆ.

About The Author