- Advertisement -
ಬೆಂಗಳೂರು: ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕನಿಂದ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಶಿಕ್ಷಕ ಅಂಜಿನಪ್ಪ ಎಂಬುವರಿಂದ ಶಾಲೆಯ 13 ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಹೆಬ್ಬಾಳ ಪೊಲೀಸರು ದೈಹಿಕ ಶಿಕ್ಷಕನನ್ನು ಬಂಧಿಸಿದ್ದಾರೆ.
ವಿದ್ಯಾರ್ಥಿ ಪಾಸ್ ಎಲ್ಲಾ ಸಮಯದಲ್ಲೂ ಉಪಯೋಗಿಸಬಹುದು : ಬಿಎಂಟಿಸಿ ಆದೇಶ
ಪಾಠ ಹೇಳಿಕೊಡುವ ನೆಪದಲ್ಲಿ ಶಿಕ್ಷಕ ಅಂಜಿನಪ್ಪ ಕೆಲವು ತಿಂಗಳಿಂದ ವಿದ್ಯಾರ್ಥಿಗಳಿಗೆ ಎಲ್ಲಂದರಲ್ಲಿ ಮುಟ್ಟುವುದು, ಬಾಲಕಿಯರಿಗೆ ಮುತ್ತು ಕೊಡುವುದು ಮಾಡಿದ್ದಾನೆ. ಬಾಲಕಿಯರು ನೀಡಿದ ಮಾಹಿತಿ ಆಧರಿಸಿ ಶಾಲೆಯ ಮುಖ್ಯ ಶಿಕ್ಷಕರೇ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಅಂಜಿನಪ್ಪ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
- Advertisement -

