- Advertisement -
ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ದಂಪತಿಯನ್ನು ಟೀಂ ಇಂಡಿಯಾದ ಲೀಡಿಂಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ ನಿನ್ನೆ ಭೇಟಿಯಾಗಿದ್ದಾರೆ. ಸ್ಟಾರ್ ಜೋಡಿಗಳ ಅಪರೂಪದ ಭೇಟಿ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಮದುವೆ ಬಳಿಕ ಪತ್ನಿ ಧನ್ಯಶ್ರೀ ಜೊತೆ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿರುವ ಚಹಲ್ ಜೋಡಿ ಯಶ್ ಹಾಗೂ ರಾಧಿಕಾರನ್ನು ಭೇಟಿಯಾಗಿ ಕೆಲಸ ಸಮಯ ಮಾತುಕತೆ ನಡೆಸಿದ್ದಾರೆ.
ಅಂದಹಾಗೆ ಚಹಲ್ ಕಳೆದ ವರ್ಷ ಡಿಸೆಂಬರ್ ನಲ್ಲಿ ಬಹುಕಾಲದ ಗೆಳತಿ ಧನಶ್ರೀ ವರ್ಮ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

- Advertisement -