Thursday, July 25, 2024

Latest Posts

ಬೆಂಗಳೂರಿಗೆ ಬಂದಿಳಿದ ಟೀಮ್ ಇಂಡಿಯಾ

- Advertisement -

ಬೆಂಗಳೂರು: ದ,ಆಫ್ರಿಕಾ ವಿರುದ್ಧ ಅಂತಿಮ ಪಂದ್ಯವನ್ನಾಡಲು ಟೀಮ್ ಇಂಡಿಯಾ ಬೆಂಗಳೂರಿಗೆ ಬಂದಿಳಿದಿದೆ.

ರಿಷಬ್ ಪಂತ್ ನೇತೃಥ್ವದ ಭಾರತ ತಂಡ ದ.ಆಫ್ರಿಕಾ ವಿರುದ್ಧ 2-2 ಅಂಕಗಳಿಂದ ಸರಣಿ ಸಮಗೊಳಿಸಿದೆ.

ಚಿನ್ನಸ್ವಾಮಿ ಅಂಗಳದಲ್ಲಿ ಜಿದ್ದಾಜಿದ್ದಿನ ಕದನ ನಿರೀಕ್ಷಿಸಲಾಗಿದ್ದು ಈ ಪಂದ್ಯ ನಾಯಕ ರಿಷಭ್ ಪಂತ್ಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

ಭಾರತ ತಂಡ ಯುವ ಆಟಗಾರರಿಂದ ಕೂಡಿದ್ದರೂಅನುಭವಿ ಆಟಗಾರರನ್ನು ನೆಚ್ಚಿಕೊಂಡಿದೆ.

ಇನ್ನು ದ.ಆಫ್ರಿಕಾ ತಂಡ ಮೊದಲೆರಡು ಪಂದ್ಯಗಳನ್ನು ಗೆದ್ದು ಆಘಾತ ನೀಡಿತ್ತು.ನಂತರ ಬ್ಯಾಟಿಂಗ್ ವೈಫಲ್ಯ ಅನುಭವಿಸಿ

2 ಪಂದ್ಯಗಳನ್ನು ಕೈಚೆಲ್ಲಿತು. ದ.ಆಫ್ರಿಕಾ ತಂಡದಲ್ಲಿ ಡೇವಿಡ್ ಮಿಲ್ಲರ್, ಹೆನ್ರಿಕ್ ಕ್ಲಾಸೆನ್, ರಾನ್ ವಾನ್ ಡೆರ್ ಡುಸೆನ್ ರಂತಹ ಸ್ಟಾರ್ ಬ್ಯಾಟರ್ಗಳಿದ್ದು ಪಂದ್ಯ ಗೆಲ್ಲಿಸುವ ತಾಕತ್ತು ಹೊಂದಿದ್ದಾರೆ.

- Advertisement -

Latest Posts

Don't Miss