ಡಬ್ಲಿನ್:ಆತಿಥೇಯ ಐರ್ಲೆಂಡ್ ವಿರುದ್ಧ ಎರಡು ಪಂದ್ಯಗಳ ಟಿ20 ಸರಣಿ ಆಡಲು ಟೀಮ್ ಇಂಡಿಯಾ ಡಬ್ಲಿನ್ ಗೆ ಬಂದಿಳಿದಿದೆ.
ಹಾರ್ದಿಕ್ ಪಾಂಡ್ಯ ನೇತೃಥ್ವದ ಟೀಮ್ ಇಂಡಿಯಾ ಜೂ.26 ಹಾಗೂ ಜೂ.28ರಂದು ಚುಟುಕು ಪಂದ್ಯಗಳನ್ನು ಆಡಲಿದೆ.
ಐಪಿಎಲ್ ಟ್ರೋಫಿ ಎತ್ತಿ ಹಿಡಿದ ನಾಯಕ ಹಾರ್ದಿಕ್ ಪಾಂಡ್ಯ ಇದೀಗ ಟಿ20 ಸರಣಿಯಲ್ಲೂ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ದ.ಆಫ್ರಿಕಾ ವಿರುದ್ಧ ತಂಡವನ್ನು ಮುನ್ನಡೆಸಿದ್ದ ರಿಷಬ್ ಪಂತ್ಗೆ ವಿಶ್ರಾಂತಿ ನೀಡಲಾಗಿದೆ.ಈ ಬಾರಿಯ ಐಪಿಎಲ್ ನಲ್ಲಿ ಸನ್ ರೈಸರ್ಸ್ ಪರ ಮಿಂಚಿದ್ದ ರಾಹುಲ್ ತ್ರಿಪಾಠಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.
ವೇಗಿಗಳಾದ ಉಮ್ರಾನ್ ಮಲ್ಲಿಕ್ ಹಾಗೂ ಆರ್ಷದೀಪ್ ಗೆ ಮೊನ್ನೆ ಮುಕ್ತಾಯವಾದ ಟಿ20 ಸರಣಿಯಲ್ಲಿ ಅವಕಾಶ ಸಿಕ್ಕಿಲ್ಲ. ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ.




