Monday, April 14, 2025

Latest Posts

ಭಾರತ- ಇಂಗ್ಲೆಂಡ್ 5ನೇ ಟೆಸ್ಟ್ : ಬುಮ್ರಾ ಪರಾಕ್ರಮಕ್ಕೆ ಬೆಚ್ಚಿಬಿದ್ದ ಆಂಗ್ಲರು 

- Advertisement -

ಎಡ್ಜ್‍ಬಾಸ್ಟನ್: ನಾಯಕ ಬುಮ್ರಾ ವಿಶ್ವ ದಾಖಲೆ ಹಾಗೂ ರವೀಂದ್ರ ಜಡೇಜಾ ಅವರ  ಶತಕದ ನೆರೆವಿನಿಂದ ಭಾರತ ತಂಡ ಎರಡನೆ ದಿನವೂ ಮೇಲುಗೈ ಸಾಧಿಸಿದೆ.

ಬರ್ಮಿಂಗ್‍ಹ್ಯಾಮ್ ಮೈದಾನದಲ್ಲಿ ನಡೆದ ಎರಡನೆ ದಿನದಾಟದ ಪಂದ್ಯ ಮಳೆಯ ಕಣ್ಣಾಮುಚ್ಚಾಲೆಯಲ್ಲಿ  ನಡೆಯಿತು. ಭಾರತ ಮೊದಲ ಇನ್ನಿಂಗ್ಸ್‍ನಲ್ಲಿ 416 ರನ್ ಗಳಿಗೆ ಸರ್ವ ಪತನ ಕಂಡಿತು. ಆತಿಥೇಯ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‍ನಲ್ಲಿ 84 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟ ಸ್ಥಿತಿಯಲ್ಲಿದೆ.

ಮೊದಲ ಇನ್ನಿಂಗ್ಸ್ ಮುಂದುವರೆಸಿದ  ಆಲ್ರೌಂಡರ್ ರವೀಂದ್ರ ಜಡೇಜಾ ಆಕರ್ಷಕ ಶತಕ ಸಿಡಿಸಿದರು. ಜಡೇಜಾ 269 ಎಸೆತ ಎದುರಿಸಿ 13 ಬೌಂಡರಿಗಳೊಂದಿಗೆ ಒಟ್ಟು  104 ರನ್ ಗಳಿಸಿ ವೇಗಿ ಆ್ಯಂಡರ್ಸನ್‍ಗೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಟೆಸ್ಟ್‍ನಲ್ಲಿ ರವೀಂದ್ರ ಜಡೇಜಾ ಮೂರನೆ  ಶತಕ ಸಿಡಿಸಿದರು.

ಮೊಹ್ಮದ್ ಶಮಿ 16 ರನ್,  ಮೊಹ್ಮದ್ ಸಿರಾಜ್ 2 ರನ್ ಗಳಿಸಿದರು. ಸ್ಪೋಟಕ ಬ್ಯಾಟಿಂಗ್ ಮಾಡಿದ ನಾಯಕ ಬುಮ್ರಾ ಕೇವಲ 16 ಎಸೆತದಲ್ಲಿ  4 ಬೌಂಡರಿ 2 ಸಿಕ್ಸರ್ ಸಿಡಿಸಿ ಅಜೇಯ 31 ರನ್ ಕಲೆ ಹಾಕಿದರು.   ಇಂಗ್ಲೆಂಡ್ ಪರ  ಜೇಮ್ಸ್ ಆ್ಯಂಡರ್ಸನ್ 60ಕ್ಕೆ 5 ವಿಕೆಟ್, ಮ್ಯಾಥೀವ್ ಪಾಟ್ಸ್ 105ಕ್ಕೆ 2 ವಿಕೆಟ್. ಸ್ಟುವರ್ಟ್ ಬ್ರಾಡ್, ನಾಯಕ ಬೆನ್ ಸ್ಟೋಕ್ಸ್ ಹಾಗೂ ಜೋ ರೂಟ್ ತಲಾ 1 ವಿಕೆಟ್ ಪಡೆದರು.

ಆಂಗ್ಲರಿಗೆ  ಆಘಾತ

ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಂಗ್ಲರಿಗೆ ನಾಯಕ ಬುಮ್ರಾ ಆಘಾತ ನೀಡಿದರು. ಇಂಗ್ಲೆಂಡ್ ಪರ ಆರಂಭಿಕರಾಗಿ ಕಣಕ್ಕಿಳಿದ ಆ್ಯಲೆಕ್ಸ್ ಲೀಸ್ ಹಾಗೂ ಜಾಕ್ ಕ್ರೌವ್ಲಿ ಒಳ್ಳೆಯ ಆರಂಭ ಕೊಡುವಲ್ಲಿ ಎಡವಿದರು.

ಆ್ಯಲೆಕ್ಸ್ ಲೀಸ್ (6 ರನ್) ಬುಮ್ರಾ ಎಸೆತದಲ್ಲಿ ಬೌಲ್ಡ್ ಆದರು. ಜಾಕ ಕ್ರೌವ್ಲಿ  9 ಮತ್ತು ಒಲಿ ಪೋಲಿಪ್ 10 ರನ್ ಗಳಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು.  ಜೋ ರೂಟ್ 31 ರನ್ ಗಳಿಸಿ ಮೊಹ್ಮದ್ ಸಿರಾಜ್ಗೆ ವಿಕೆಟ್ ಒಪ್ಪಿಸಿದರು, ಜಾನಿ ಬೈರ್ ಸ್ಟೋ 6 ರನ್ ಗಳಿಸಿದ್ದಾರೆ.  ಜಾಕ್ ಲೀಚ್ ಶೂನ್ಯಕ್ಕೆ ಔಟಾಗಿ ಸಿರಾಜ್ ಗೆ ವಿಕೆಟ್ ಒಪ್ಪಿಸಿದರು.

- Advertisement -

Latest Posts

Don't Miss