Tech News: ನೀವು ನಾರ್ಮಲ್ ಆಗಿರುವ Table, ಮರದ Table ನೋಡಿರಬಹುದು. ಆದರೆ ನಿಮ್ಮ Mobile Charge ಮಾಡುವ Table ನೋಡಿದ್ದೀರಾ..? ಹೌದು.. ಅಂಥ Table ಕೂಡ ಈಗ ಮಾರುಕಟ್ಟೆಗೆ ಬಂದಿದೆ. ಹಾಗಾದ್ರೆ ಆ ಟೇಬಲ್ ವಿಶೇಷತೆಗಳೇನು..? ಅದಕ್ಕೆಷ್ಟು ಬೆಲೆ ಇತ್ಯಾದಿ ತಿಳಿಯೋಣ ಬನ್ನಿ..
ಈ ಸ್ಮಾರ್ಟ್ ಟೇಬಲ್‌ನ್ನು ನೀವು ನಿಮ್ಮ ಬೆಡ್ ಪಕ್ಕ ಇರಿಸಬೇಕು. ರಾತ್ರಿ ನಿಮಗೆ ರೂಮ್‌ನಲ್ಲಿ ಡಿಮ್ ಲೈಟ್ ಬೇಕು ಅಂದ್ರೆ, ಇದೇ ಟೇಬಲ್‌ನಲ್ಲಿ ಲ್ಯಾಂಪ್ ಇದೆ. ಬೇಕಾದ ಹಾಗೆ ಲೈಟ್ ಸೆಟ್ ಮಾಡಬಹುದು.
ಇನ್ನು ಇತ್ತ Mobileನಲ್ಲಿ ಚಾರ್ಜ್ ಕಡಿಮೆ ಇದೆ. ಅತ್ತ ನಿಮಗೆ ನಿದ್ದೆ ಬರುತ್ತಿದೆ ಎಂದಲ್ಲಿ, ನೀವು ಈ ಟೇಬಲ್ ಮೇಲೆ ನಿಮ್ಮ Mobile ಇರಿಸಿದರೆ ತನ್ನಿಂದ ತಾನೇ ನಿಮ್ಮ ಸೆಲ್ ಫೋನ್ ಚಾರ್ಜ್ ಆಗುತ್ತದೆ. ಏಕೆಂದರೆ ಇದರಲ್ಲಿ ವೈರ್‌ಲೆಸ್ ಚಾರ್ಜರ್ ಕೂಡ ಇದೆ.
ಇದರಲ್ಲಿ ಸ್ಪೀಕರ್ ಇದ್ದು, ಈ ಸ್ಪೀಕರ್‌ಗಳನ್ನು ನೀವು ಟಿವಿ ಜತೆ ಕನೆಕ್ಟ್ ಮಾಡಬಹುದು. ಅಲ್ಲದೇ ಇದರಲ್ಲಿ ನೀವು ನಿಮಗೆ ಬೇಕಾದ ಅತ್ಯಮೂಲ್ಯ ವಸ್ತುಗಳನ್ನು ಇರಿಸಬಹುದು. ಏಕೆಂದರೆ, ನಿಮ್ಮ ಬೆರಳಚ್ಚು ಬೀಳುವ ತನಕ ಇದರ ಲಾಕ್ ಓಪನ್ ಆಗುವುದಿಲ್ಲ. ಇನ್ನು ಇದರ ಬೆಲೆ ಎಷ್ಟು ಅಂತಾ ನೀವು ಕೇಳಿದರೆ, ಇದರ ಬೆಲೆ 20 ಸಾವಿರದಿಂದ ಶುರುವಾಗುತ್ತದೆ.