Tech News: ಯಾರ ಬಳಿ ಕಾರ್ ಇರುತ್ತದೆಯೋ, ಅವರಿಗೆ ಮಾತ್ರ ಆ ಕಾರ್ ಹೇಗೆ ಮೇಂಟೇನ್ ಮಾಡುತ್ತಿದ್ದಾರೆಂದು ತಿಳಿದಿರುತ್ತದೆ. ಏಕೆಂದರೆ, ಕಾರ್ ಖರೀದಿಸಿದರೆ ಸಾಲದು. ಅದೇ ರೀತಿ ಅದಕ್ಕೆ ಇನ್ಶುರೆನ್ಸ್, ಸರ್ವಿಸ್ ಎಲ್ಲವನ್ನೂ ಕಾಲ ಕಾಲಕ್ಕೆ ಮಾಡುತ್ತಿರಬೇಕು. ಕಾರ್ ಬಿಸಿಯಾಗದಂತೆ ನೋಡಿಕ“ಳ್ಳಬೇಕು. ಹಾಗಾಗಿ ನಾವಿಂದು ಕಾರ್ ಚೆಂದವಾಗಿರಿಸಲು ಬೇಕಿರುವ ಕೆಲ ವಸ್ತುಗಳ ಬಗ್ಗೆ ಹೇಳಲಿದ್ದೇವೆ.
ಕಾರ್ ಡೆಂಟ್ ಪುಲ್ಲರ್: ಕಾರನ್ನು ಎಷ್ಟೇ ಸಂಭಾಳಿಸಿದರೂ, ಕಾರ್ ಕೆಲವು ಸಾರಿ ಚಪ್ಪಟೆಯಾಗಬಹುದು. ಹಾಗೆ ಚಪ್ಪಟೆಯಾದ ಭಾಗವನ್ನು ಸರಿ ಮಾಡುವ ವಸ್ತುವೇ, ಈ ಕಾರ್ ಡೆಂಟ್ ಪುಲ್ಲರ್. ಇದನ್ನು ಚಪ್ಪಟೆಯಾದ ಕಡೆ ಹಾಕಿ ಗಟ್ಟಿಯಾಗಿ ಎಳೆದರೆ, ಕಾರ್ ಮುಂಚಿನ ರೀತಿ ಸರಿಯಾಗುತ್ತದೆ.
ವೆಂಟಿಲೇಟೇಡ್ ಸೀಟ್ ಕವರ್: ಬಿಸಿಲಿದ್ದಾಗ, ಕಾರ್‌ನ ಸೀಟ್ ಕಾದ ಹೆಂಚಿನಂತಾಗಿರುತ್ತದೆ. ಆದರೆ ನಿಮಗೆ ಕೂತಾಗ ಕೂಲ್ ಕೂಲ್ ಆಗುವ ಅನುಭವ ಬೇಕಿದ್ದಲ್ಲಿ, ನೀವು ವೆಂಟಿಲೇಟೇಡ್ ಸೀಟ್ ಕವರ್ ಹಾಕಿ, ಚಾರ್ಜ್ ಮಾಡಿದರೆ, ತಂಪಾದ ಸೀಟ್ ನಿಮ್ಮ ಪಾಾಲಾಗುತ್ತದೆ.
ಈಸಿ ಕಾರ್ ಕವರ್: ಇದು ಬಾಲ್ ರೀತಿಯ ಶೇಫ್‌ನಲ್ಲಿರುವ ಕವರ್ ಆಗಿದ್ದು, ನೀವು ಈಸಿಯಾಗಿ ನಿಮ್ಮ ಕಾರ್‌ನ್ನು ಮಳೆ,. ಬಿಸಿಲು, ಕಾಗೆ, ಧೂಳು ಎಲ್ಲದರಿಂದಲೂ ರಕ್ಷಿಸಬಹುದು. ಕಾರ್‌ಗೆ ಸಿಕ್ಕಿಸಿ, ಕವರ್ ಮಾಡಿ, ಬಾಲ್‌ನ್ನು ಡಿಕ್ಕಿಯಲ್ಲಿ ಹಾಕಿದ್ರೆ ಆಯ್ತು. ಈಸಿಯಾಗಿ ಕಾರ್ ಕವರ್ ಮಾಡಬಹುದು. ಈಸಿಯಾಗಿ ಕಾರ್ ಕವರ್ ಓಪನ್ ಮಾಡಬಹುದು.