Tech News: ಬೈಕ್, ಕಾರ್‌ಗಾಗಿ ಈ ರೀತಿಯ ರಕ್ಷಣಾ ಕವಚ ಬಳಸಿ..

Tech News: ಬೈಕಲ್ಲಿ ಹೋಗುವಾಗ ಜೋರು ಮಳೆ ಬಂದ್ರೆ, ರೇನ್ ಕೋಟ್ ಹಾಕಿಕ“ಂಡಿದ್ದರೂ ನಾವು ಮಳೆಗೆ ನೆನೆಯುತ್ತೇವೆ. ಆದರೆ ನೀವು ರೇನ್‌ಕೋಟ್ ಧರಿಸಿ, ಛತ್ರಿಯೂ ಹಿಡಿದು ಬೈಕ್ ಓಡಿಸಬಹುದು. ನಿಮ್ಮ ಬಳಿ ಕಾರಿದ್ರೆ, ಆ ಕಾರಿಗೂ ಬಿಸಿಲು ತಾಗದಂತೆ ಛತ್ರಿ ಬಳಸಬಹುದು.

ಇದನ್ನು ಬೈಕ್ ಶೀಲ್ಡ್ ಅಥವಾ ಕಾರ್ ಶೀಲ್ಡ್ ಎನ್ನುತ್ತಾರೆ. ಬಿಸಿಲು ಅಥವಾ ಮಳೆ ಬಂದಾಗ ನೀವು ಈ ಶೀಲ್ಜ್ ಬಳಸಿ ನಿಮ್ಮ ಬೈಕ್ ಮತ್ತು ಕಾರ್ ಅಲ್ಲದೇ ಅದರ ಮೇಲೆ ಸವಾರಿ ಮಾಡುತ್ತ ನಿಮ್ಮನ್ನು ನೀವು ಬಿಸಿಲು ಅಥವಾ ಮಳೆಯಿಂದ ರಕ್ಷಿಸಿಕ“ಳ್ಳಬಹುದು.

ಅಲ್ಲದೇ,  ಹೈಟ್‌ಗೆ ತಕ್ಕಂತೆ ಇದನ್ನು ನೀವು ಅಡ್ಜಸ್ಟ್ ಮಾಡಿಕ“ಳ್ಳಬಹುದು. ಹಿಂದೆಯೂ ಬೈಕ್ ಸವಾರರಿದ್ದರೆ ಅವರಿಗೂ ರಕ್ಷಣೆ ಸಿಗುವಂತೆ ಅಡ್ಜಸ್ಟ್ ಮಾಡಬಹುದು.

ಇನ್ನು ಕಾರ್ ಶೀಲ್ಡ್‌ನ್ನು ಆಟೋಮ್ಯಾಟಿಕ್ ಆಗಿ ಬಳಸಬಹುದು. ಆದರೆ ಇದರ ಬೆಲೆ ಸ್ವಲ್ಪ ಹೆಚ್ಚಾಗಿರುತ್ತದೆ. ಇದರ ಜತೆ 1 ಬಟನ್ ಸಿಗುತ್ತದೆ. ಅದರಿಂದಲೇ ನೀವು ಶೀಲ್ಡ್ ಅಡ್ಜಸ್ಟ್‌ಮೆಂಟ್ ಮಾಡಬಹುದು. 40 ದಿನ ಚಾರ್ಜ್ ಮಾಡದೇ ಇದನ್ನು ಬಳಸಬುಹುದು. ಪ್ರತಿದಿನ ಕಾರ್, ಬೈಕ್ ಬಳಸುವ ನಿಮ್ಮ ಪ್ರೀತಿಪಾತ್ರರಿಗೆ ನೀವು ಈ ಶೀಲ್ಡ್‌ನ್ನು ಗಿಫ್ಟ್ ಆಗಿ ನೀಡಬಹುದು.

About The Author