Tech News: ಅಮ್ಮಂದಿರಿಗೆ ನಾವು ಈ ರೀತಿಯ ಉಡುಗೊರೆಗಳನ್ನು ನೀಡಬಹುದು

Tech News: ಅಮ್ಮಂದಿರ ದಿನಕ್ಕೆ, ಅಥವಾ ಬರ್ತ್‌ಡೇ, ಆ್ಯನಿವರ್ಸರಿ ಈ ರೀತಿ ಇದ್ದಾಗ, ಅಮ್ಮನಿಗೆ ಏನಾದರೂ ಉಡುಗೊರೆ ನೀಡಬೇಕು ಅಂತಾ ಅನ್ನಿಸೋದು ಕಾಮನ್. ಹಾಗಿದ್ದಾಗ, ಬರೀ ಸೀರೆ, ಡ್ರೆಸ್, ಆಭರಣ, ಬ್ಯಾಗ್ ಇಂಥವೆ ನಮಗೆ ನೆನಪಿಗೆ ಬರೋದು. ಆದರೆ ನಾವು ಸ್ವಲ್ಪ ಬೇರೆ ರೀತಿ ಯೋಚನೆ ಮಾಡಿ, ಉಡುಗೊರೆ ನೀಡಬಹುದು.

ಕೂಲರ್: ನೀವು ಹೆಚ್ಚು ಹಣ ನೀಡಿ, ಕೂಲರ್ ಖರೀದಿಸಬೇಕಿಲ್ಲ. ಬದಲಾಗಿ ಕಡಿಮೆ ಬೆಲೆಗೆ ಸಣ್ಣ ಕೂಲರ್‌ನ್ನ ಅಮ್ಮನಿಗೆ ನೀಡಬಹುದು. ಅಡುಗೆ ಕೋಣೆಯಲ್ಲಿ ಕೆಲಸ ಮಾಡುವಾಗ, ಆ ಕೂಲರ್‌ನಲ್ಲಿ ನೀರು, ಐಸ್ ಹಾಕಿ, ಬಟನ್ ಪ್ರೆಸ್ ಮಾಡಿದ್ರೆ ಸಾಾಕು. ಕೂಲ್ ಕೂಲ್ ಆಗಿ ಕೆಲಸ ಮಾಡಬಹುದು.

ಫರ್ನಿಚರ್ ಮೂವಿಂಗ್ ಟೂಲ್: ಮನೆಯಲ್ಲಿ ಕಸ ಗುಡಿಸುವಾಗ, ನೆಲ ಕ್ಲೀನ್ ಮಾಡುವಾಗ, ವಾಶಿಂಗ್ ಮಷಿನ್, ಕಪಾಟನ್ನು ಸರಿಸುವಾಗ, ಕಷ್ಟವಾಗುತ್ತದೆ. ಹಾಗಾಾಗಿ ಫರ್ನಿಚರ್ ಮೂವಿಂಗ್ ಟೂಲ್ ಖರೀದಿಸಿದರೆ, ಅದರ ಸಹಾಯದಿಂದ ಸುಲಭವಾಾಗಿ, ವಸ್ತುಗಳನ್ನು ಆಚೆಯಿಂದ ಈಚೆ ಮೂವ್ ಮಾಡಬಹುದು.

ಇನ್ನು ನಿಮ್ಮ ಬಳಿ ಹೆಚ್ಚು ಹಣವಿದ್ದರೆ, ನೀವು ರೋಬೋಟ್ ವ್ಯಾಕ್ಯೂಮ್‌ ಕ್ಲೀನರ್ ಗಿಫ್ಟ್ ಆಗಿ ನೀಡಬಹುದು. ಇದು ತನ್ನಿಂದ ತಾನೇ ಮನೆಯಲ್ಲಿರುವ ಕಸಗಳನ್ನು ಕ್ಲೀನ್ ಮಾಡಿ, ತನ್ನ ಜಾಗಕ್ಕೆ ಹೋಗಿ ಕುಳಿತುಕ“ಳ್ಳುತ್ತದೆ.

About The Author