Tech News: ಈ ಪ್ರಪಂಚದಲ್ಲಿ ಹಲವು ದೇಶಗಳು ಭಾರತಕ್ಕಿಂತಲೂ ತಂತ್ರಜ್ಞಾನದಲ್ಲಿ ಮುಂದಿದೆ. ಅಂಥ ದೇಶಗಳು ತಮ್ಮ ಸೇನಾಾಬಲ ಹೆಚ್ಚಿಸಲು, ಕೆಲವು ಗ್ಯಾಜೇಟ್ ಬಳಸುತ್ತದೆ. ಅಂಥ ಗ್ಯಾಜೇಟ್‌ಗಳಲ್ಲಿ ರೋಬೋಟ್ ಡಾಗ್ ಕೂಡ 1. ಹಾಗಾದ್ರೆ ರೋಬೋಟ್ ಡಾಗ್ ಏಕೆ ಬಳಸುತ್ತಾರೆ..? ಭಾವನೆ ಇಲ್ಲದ ನಾಯಿ ಹೇಗೆ ಬಳಕೆಯಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ರೋಬೋಟ್ ಡಾಗ್‌ಗಳು ಜೀವವಿರುವ ನಾಯಿಯ ರೀತಿಯೇ ಬಿಹೇವ್ ಮಾಡುತ್ತದೆ. ಜಂಪ್ ಮಾಡುತ್ತದೆ. ಡಾನ್ಸ್ ಮಾಡುತ್ತದೆ. ನಾಯಿ ನಿಮಗೆ ಶೇಕ್ ಹ್ಯಾಂಡ್ ನೀಡುವ ರೀತಿ, ಇದು ಕೂಡ ಶೇಕ್ ಹ್ಯಾಂಡ್ ನೀಡುತ್ತದೆ. ನಮಸ್ಕಾರವೂ ಮಾಡುತ್ತದೆ.
ನೀವು ಈ ನಾಯಿಯನ್ನು ಮೆಟ್ಟಿಲ ಬಳಿ ಅಥವಾ ಯಾವುದೇ ಅಡ್ಡವಿರುವ ವಸ್ತುವಿನ ಬಳಿ ಬಿಟ್ಟರೆ, ಅದು ತನ್ನ ಮುಂದಿರುವ ಕ್ಯಾಮೇರಾ ಮೂಲಕ, ಮುಂದಿನ ವಸ್ತುವನ್ನು ಕಂಡುಹಿಡಿದು, ಅದಕ್ಕೆ ತಕ್ಕಂತೆ, ಚಲಿಸುತ್ತದೆ.
ಇನ್ನು ಈ ನಾಯಿಯ ಉಪಯೋಗವೇನು ಅಂತಾ ನೋಡೋದಾದ್ರೆ, ಯುಎಸ್ ಮತ್ತು ಚೈನಾದಲ್ಲಿ ಈ ನಾಯಿಯನ್ನು ಸೇನೆಯಲ್ಲಿ ಬಳಸಲಾಗುತ್ತದೆ. ಪೋಲೀಸ್ ನಾಯಿ ಎಲ್ಲೆಲ್ಲಿ ಹೋಗಲು ಸಾಧ್ಯವಿಲ್ಲವೋ, ಅಂಥ ಕಡೆ ಈ ರೋಬೋಟ್ ಡಾಗ್ ಹೋಗುತ್ತದೆ.
ಇದು ತನ್ನ ಮೇಲೆ ವಸ್ತುಗಳನ್ನು ಇರಿಸಿಕ“ಳ್ಳುವ ಸಾಮರ್ಥ್ಯ ಹೊಂದಿದೆ. ಅಲ್ಲದೇ, ಇದರ ಮೂಲಕ ಬೆಂಕಿ ಬಿದ್ದ ಜಾಗದಲ್ಲಿ ನೀರು ಹಾಕಿ , ಬೆಂಕಿ ನಂದಿಸಬಹುದು. ಕೆಲವು ಕಡೆ ಇದನ್ನು ಡಿಲೆವರಿ ಬಾಯ್ ಆಗಿ ಕೆಲಸ ಮಾಡಿಸಲಾಗುತ್ತಿದೆ. ಫುಡ್ ಡಿಲೆವರಿಯನ್ನು ಈ ನಾಯಿಯ ಮೂಲಕ ಮಾಡಿಸಲಾಗುತ್ತದೆ. ಕೆಲವು ಕಡೆ ಪ್ರವಾಸಿ ತಾಣಗಳಲ್ಲಿ ಲಗೇಜ್ ಕೂಡ ಇದರ ಮೂಲಕವೇ ಮೂವ್ ಮಾಡಲಾಗುತ್ತದೆ. ಇದರ ಬೆಲೆ ಶುರುವಾಗೋದು 3 ಲಕ್ಷದಿಂದ.