ಧರ್ಮಸ್ಥಳ ನಿಗೂಢ ಸಾವಿನ ಪ್ರಕರಣದ SIT ತನಿಖೆ ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇವತ್ತು 9ನೇ ಪಾಯಿಂಟ್‌ನ ಶೋಧ ಕಾರ್ಯ ನಡೆಯುತ್ತಿದೆ. ಇದಾದ ಮೇಲೆ 13ನೇ ಪಾಯಿಂಟ್‌ನ ಉತ್ಖನನದ ಬಳಿಕ, ಕಲ್ಲೇರಿ ರಹಸ್ಯ ಭೇದಿಸೋಕೆ ಎಸ್‌ಐಟಿ ಮುಂದಾಗಿದೆ. ಕಲ್ಲೇರಿಯಲ್ಲಿ ಹದಿಹರೆಯದ ಬಾಲಕಿಯ ಶವವನ್ನು ಕಂಡಿದ್ದಾಗಿ, ವಿಚಾರಣೆ ವೇಳೆ ಅನಾಮಿಕ ಹೇಳಿದ್ದಾನೆ.
ನಾನು ನೋಡಿದಾಗ, ಬಾಲಕಿ ಶಾಲಾ ಸಮವಸ್ತ್ರದ ಶರ್ಟ್ ಧರಿಸಿದ್ದಳು. ಶವದ ಮೇಲೆ ಸ್ಕರ್ಟ್, ಒಳಉಡುಪುಗಳು ಇರಲಿಲ್ಲ. ಆಕೆಯ ಮೇಲೆ ಲೈಂಗಿಕ ಆಕ್ರಮಣದ ಸ್ಪಷ್ಟ ಲಕ್ಷಣಗಳು ಇದ್ದವು. ಕತ್ತು ಹಿಸುಕಿರುವ ಗುರುತುಗಳೂ ಇದ್ದವು. ಗುಂಡಿ ಅಗೆಯಲು ಮತ್ತು ಶಾಲಾ ಬ್ಯಾಗ್‌ನೊಂದಿಗೆ ಹೂಳಲು ನನಗೆ ನಿರ್ದೇಶಿಸಿದ್ದರು. ಆ ಸನ್ನಿವೇಶ ಇಂದಿಗೂ ನನ್ನಲ್ಲಿ ಮಾಸಿಲ್ಲ. ಆ ಬಾಲಕಿಯ ವಯಸ್ಸು 12ರಿಂದ 15 ವರ್ಷ ಇರಬಹುದು. ಹೀಗಂತ ಅನಾಮಿಕ ನಿಖರವಾಗಿ ಹೇಳಿದ್ದಾನೆ.
ನೇತ್ರಾವತಿ ಸ್ನಾನಘಟ್ಟದಿಂದ ಸುಮಾರು ಮೂರ್ನಾಲ್ಕು ಕಿಲೋ ಮೀಟರ್ ದೂರದಲ್ಲಿ, ಕಲ್ಲೇರಿ ಜಾಗ ಇದೆ. ಸಂರಕ್ಷಿತ ಅರಣ್ಯ ಪ್ರದೇಶದಲ್ಲೂ ಹಲವಾರು ಶವಗಳನ್ನು ಹೂತಿದ್ದಾಗಿ, ದೂರುದಾರ ಹೇಳಿದ್ದಾನೆ.
ಇದೊಂದು ಅತಿ ಗಂಭೀರ, ಸೂಕ್ಷ್ಮ ಘಟನೆಯಾಗಿದೆ. ಸ್ವಲ್ಪ ನಿರ್ಲಕ್ಷ್ಯ ಮಾಡಿದ್ರೂ, ಎಸ್‌ಐಟಿ ಗಂಭೀರ ಆರೋಪಗಳನ್ನು ಎದುರಿಸಬೇಕಾಗುತ್ತೆ. ಇಡೀ ತನಿಖೆ ಮೇಲೆ, ಅನುಮಾನ ಶುರುವಾಗುವ ಸಂಭವ ಕೂಡ ಹೆಚ್ಚು. ಹೀಗಾಗಿ ಅತ್ಯಂತ ಜಾಗರೂಕತೆಯಿಂದ ಕಲ್ಲೇರಿ ರಹಸ್ಯ ಭೇದಿಸೋಕೆ, ಎಸ್‌ಐಟಿ ಪ್ಲಾನ್ ಮಾಡಿದೆ.
ಈಗಾಗಲೇ ಎಸ್‌ಐಟಿ ಒಂದು ತಂಡ ರಾಜ್ಯಾದ್ಯಂತ ನಾಪತ್ತೆ ಅಥವಾ ಮೃತಪಟ್ಟಿರುವವರ ಲಿಸ್ಟ್ ಕಲೆಕ್ಟ್ ಮಾಡ್ತಿದೆ. 2010ರಲ್ಲಿ ಕಲ್ಲೇರಿ ಸುತ್ತಮುತ್ತಲ ಪ್ರದೇಶದಲ್ಲಿ, ಯಾರಾದರೂ ಶಾಲಾ ಬಾಲಕಿಯರು ನಾಪತ್ತೆಯಾಗಿದ್ದಾರಾ? ಅನ್ನೋ ಮಾಹಿತಿಯನ್ನು ಸಂಗ್ರಹಿಸಲು ಮುಂದಾಗಿದ್ದಾರೆ. ಧರ್ಮಸ್ಥಳ, ಬೆಳ್ತಂಗಡಿ ಸುತ್ತಮುತ್ತ ಇರುವ ಸ್ಥಳೀಯ ಶಿಕ್ಷಣ ಸಂಸ್ಥೆಗಳಲ್ಲಿ, ಮಾಹಿತಿ ಕಲೆ ಹಾಕಲಾಗುತ್ತಿದೆ.
ಧರ್ಮಸ್ಥಳದ ಪ್ರಕರಣದಲ್ಲಿ ಕ್ಲಿಯರ್ ಕಟ್ ಆಗಿ, ಎಸ್‌ಐಟಿ ತನಿಖೆ ಮಾಡ್ತಿದೆ. ಪ್ರತಿಯೊಂದು ದಾಖಲೆಗಳನ್ನು ಸಂಗ್ರಹಿಸುತ್ತಾ, ಪ್ರತಿಯೊಂದು ಆಯಾಮದಲ್ಲೂ ತನಿಖೆ ನಡೆಯುತ್ತಿದೆ.