- Advertisement -
ಬಮಿರ್ಂಗ್‍ಹ್ಯಾಮ್:ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದ ಹೈಜಂಪ್ ಸ್ಪರ್ಧೆಯಲ್ಲಿ ತೇಜಸ್ವಿನ್ ಶಂಕರ್ ಪದಕ ಗೆದ್ದಿದ್ದಾರೆ. ಇದರೊಂದಿಗೆ ಕಾಮನ್‍ವೆಲ್ತ್‍ನ ಹೈಜಂಪ್‍ನಲ್ಲಿ ಭಾರತ ಮೊದಲ ಬಾರಿಗೆ ಪದಕ ಗೆದ್ದಿದೆ.
ಹೈಜಂಪ್ ಸ್ಪರ್ಧೆಯ ಫೈನಲ್‍ನಲ್ಲಿ ತೇಜಸ್ವಿನ್ 2.22 ಮೀ.ಎತ್ತರಕ್ಕೆ ಜಿಗಿದು ಪದಕ ಗೆದ್ದರು.
1970ರಲ್ಲಿ ನಡೆದಿದ್ದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಭೀಮ್ ಸಿಂಗ್ 2.06 ಮೀ. ಎತ್ತರ ಜಿಗಿದಿದ್ದು ಈವರೆಗಿನ ಸಾಧನೆ ಆಗಿತ್ತು.
ನ್ಯೂಜಿಲೆಂಡ್‍ನ ಹಮಿಶ್ ಕೇರ್ ಚಿನ್ನ ಗೆದ್ದರೆ, ಆಸ್ಟ್ರೇಲಿಯಾದ ಬ್ರಾಂಡನ್ ಸ್ಟಾರ್ಕ್ ಬೆಳ್ಳಿ ಗೆದ್ದುಕೊಂಡರು.
- Advertisement -