Friday, December 27, 2024

Latest Posts

Praneeth Hanumanthu: ತೆಲಂಗಾಣ ಮೂಲದ ಯೂಟ್ಯೂಬರ್ ಪ್ರಣೀತ್ ಬಂಧನ

- Advertisement -

ಯೂಟ್ಯೂಬ್ ವೀಡಿಯೋದಲ್ಲಿ ಪುರುಷ ಮತ್ತು ಮಗಳ ನಡುವಿನ ಸಂಬಂಧದ ಬಗ್ಗೆ ಅಶ್ಲೀಲ ಸಂಭಾಷಣೆ ಮಾಡಿದ ಮಾಡಿದ ಕಾರಣ ಯೂಟ್ಯೂಬರ್ ಪ್ರಣೀತ್ ಹನುಮಂತುನನ್ನು ತೆಲಂಗಾಣ ಸೈಬರ್ ಸೆಕ್ಯುರಿಟಿ ಬ್ಯೂರೋ ಬೆಂಗಳೂರಿನಲ್ಲಿ ಬಂಧಿಸಿದೆ.

ಪ್ರಣೀತ್​ನನ್ನು ಬಂಧಿಸಿದ ನಂತರ, ಬೆಂಗಳೂರಿನ ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ. ಬಳಿಕ ಟಿಜಿಸಿಎಸ್‌ಬಿ ಅಧಿಕಾರಿಗಳು ಆತನನ್ನು ಟ್ರಾನ್ಸಿಟ್ ವಾರಂಟ್ ಮೇಲೆ ಹೈದರಾಬಾದ್‌ಗೆ ಕರೆದೊಯ್ದಿದ್ದಾರೆ. ಹಿರಿಯ ಐಎಎಸ್ ಅಧಿಕಾರಿಯೊಬ್ಬರ ಪುತ್ರನಾಗಿರುವ 29 ವರ್ಷದ ಪ್ರಣೀತ್, ಹೈದರಾಬಾದ್‌ನ ಪ್ರಕಾಶ್ ನಗರದ ನಿವಾಸಿಯಾಗಿದ್ದಾರೆ. ಇತ್ತೀಚಿಗೆ ಪ್ರಣೀತ್ ಅವರು ಇತರ ಮೂವರು ವ್ಯಕ್ತಿಗಳ ಜೊತೆ ಪಾಡ್‌ಕ್ಯಾಸ್ಟ್ ನಡೆಸಿದ್ದರು. ಹಾಸ್ಯದ ನೆಪದಲ್ಲಿ ಆರೋಪಿಗಳು ಹೆಣ್ಣು ಮಗುವಿನ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ವಿಷಯ ಬೆಳಕಿಗೆ ಬಂದ ದಿನದಿಂದ ಪ್ರಣೀತ್ ತಲೆಮರೆಸಿಕೊಂಡಿದ್ದಾನೆ ಎಂದು ಟಿಜಿಸಿಎಸ್‌ಬಿ ನಿರ್ದೇಶಕಿ ಶಿಕಾ ಗೋಯೆಲ್ ಹೇಳಿದ್ದಾರೆ. ಇದೀಗ ಆತನನ್ನು ಪತ್ತೆಹಚ್ಚಿ ಬಂಧಿಸಲಾಗಿದ್ದು, ಉಳಿದ ಆರೋಪಿಗಳನ್ನು ಬಂಧಿಸುವ ಪ್ರಯತ್ನ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಬಂಧನಕ್ಕೆ ಕಾರಣವಾಗಿರೋ ವೀಡಿಯೊದ ಕೆಲವು ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆದ ನಂತರ, ನಟ ಸಾಯಿ ಧರಂ ತೇಜಾ ಸೇರಿದಂತೆ ಅನೇಕ ಇಂಟರ್ನೆಟ್ ಬಳಕೆದಾರರು ಸಾಮಾಜಿಕ ಜಾಲತಾಣ Xನಲ್ಲಿ ವೀಡಿಯೊವನ್ನು ಖಂಡಿಸಿದ್ದಾರೆ. ತಕ್ಷಣವೇ ತೆಲಂಗಾಣ ಪೊಲೀಸರು ಎಲ್ಲಾ ನಾಲ್ವರು ಆರೋಪಿಗಳ ವಿರುದ್ಧ ಐಟಿ ಕಾಯ್ದೆ, ಬಿಎನ್‌ಎಸ್ ಮತ್ತು ಪೋಕ್ಸೊ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಯೂಟ್ಯೂಬರ್‌ ಪ್ರಣೀತ್ ವೀಡಿಯೊ ಆನ್‌ಲೈನ್‌ನಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಯಿತು. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮತ್ತು ಡಿಜಿಪಿ ರವಿ ಗುಪ್ತಾ Xನಲ್ಲಿ ಪೋಸ್ಟ್ ಮಾಡಿ ಮಕ್ಕಳ ಸುರಕ್ಷತೆಯು ಪೊಲೀಸರಿಗೆ ಮತ್ತು ಸರ್ಕಾರಕ್ಕೆ ಅತ್ಯಂತ ಮಹತ್ವದ್ದಾಗಿದೆ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ.

- Advertisement -

Latest Posts

Don't Miss