- Advertisement -
ಕರ್ನಾಟಕ ಟಿವಿ : ಬಹುತೇಕ ರಾಜ್ಯಗಳು ವಲಸಿಗರನ್ನ ತಮ್ಮರಾಜ್ಯಗಳಿಗೆ ವಾಪಸ್ ಕಳುಹಿಸುತ್ತಿವೆ. ಪ ಬಂಗಾಳ, ಒಡಿಶಾ ರಾಜ್ಯಗಳು ತಮ್ಮವರನ್ನೇ ಮನೆಗೆ ಸೇರಿಸಿಕೊಳ್ತಿಲ್ಲ.. ಇಂಥಹ ಸಂದರ್ಭದಲ್ಲಿ ತೆಲಂಗಾಣ ಸರ್ಕಾರ ಶ್ರಮಿಕ್ ಸ್ಪೆಷಲ್ ರೈಲಿಗೆ ಹಣ ನೀಡಿ ಬಿಹಾರದಿಂದ 225 ಕಾರ್ಮಿಕರನ್ನ ಕರೆಸಿಕೊಂಡಿದೆ. ರೈಸ್ ಮಿಲ್ ಗಳಲ್ಲಿ ಕೆಲಸ ಮಾಡಲು ಕಾರ್ಮಿಕರ ಕೊರತೆಯಾಗಿತ್ತು. ಬಿಹಾರದಿಂದ 225 ಕಾರ್ಮಿಕರಿಗೆ ರೈಲ್ವೆ ಸ್ಟೇಷನ್ ನಲ್ಲಿ ಸರ್ಕಾರದ ಪ್ರತಿನಿಧಿಗಳು ರೋಸ್ ನೀಡಿ ಸ್ವಾಗತ ಕೋರಿದ್ರು. ಇದಷ್ಟೆ ಅಲ್ಲ ದಿನಕ್ಕೆ 300 ರೂಪಾಯಿ ಬದಲಾಗಿ 1200 ಹಣವನ್ನ ಕಾರ್ಮಿಕರಿಗೆ ನೀಡುವಂತೆ ಮಿಲ್ ಮಾಲೀಜರಿಗೆ ತೆಲಂಗಾಣ ಸರ್ಕಾರ ಸೂಚಿಸಿದೆ.. ತೆಲಂಗಾಣ ಸಿಎಂ ಚಂದ್ರ ಶೇಖರ್ ರಾವ್ ಸರ್ಕಾರದ ಈ ಕೆಲಸ ಇತರರಿಗೂ ಮಾದರಿಯಾಗಲಿ.
- Advertisement -

