Devotional:
ಅಕ್ಟೋಬರ್ನಲ್ಲಿ, ಭಾರತದ ಹಿಂದೂಗಳು ಬೆಳಕಿನ ಹಬ್ಬ ದೀಪಾವಳಿಯನ್ನು ವರ್ಣರಂಜಿತವಾಗಿ ಆಚರಿಸುತ್ತಾರೆ, ಭಾರತದಲ್ಲಿ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ ವಿಭಿನ್ನವಾಗಿ ಅವರದ್ದೇ ಆದ ಸಂಪ್ರದಾಯಗಳಲ್ಲಿ ದೀಪಾವಳಿಯನ್ನು ಆಚರಿಸುತ್ತಾರೆ .ವೈವಿಧ್ಯಮಯ ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ಹೊಂದಿರುವ ಭಾರತದಲ್ಲಿ ದೀಪಾವಳಿಯನ್ನು ಹೇಗೆ ಆಚರಿಸಲಾಗುತ್ತದೆ..? ಭಾರತದಲ್ಲಿನ ವಿವಿಧ ಸಮುದಾಯಗಳ ದೀಪಾವಳಿ ಆಚರಣೆಯ ಬಗ್ಗೆ ತಿಳಿದುಕೊಳ್ಳೋಣ…
ಸಾಮಾನ್ಯವಾಗಿ ದೀಪಾವಳಿಯ ಅಮವಾಸ್ಯೆಯಂದು ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ. ಆದರೆ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಒರಿಸ್ಸಾದಂತಹ ರಾಜ್ಯಗಳಲ್ಲಿ ಜನರು ಕಾರ್ತಿಕ ಮಾಸದ ಅಮಾವಾಸ್ಯೆಯಂದು ಕಾಳಿ ದೇವಿಯನ್ನು ಪೂಜಿಸುತ್ತಾರೆ. ಈ ಪೂಜೆಯನ್ನು ಶ್ಯಾಮ ಪೂಜೆ ಎಂದೂ ಕರೆಯುತ್ತಾರೆ .ದುಷ್ಟ ಶಕ್ತಿಗಳಿಂದ ಕಾಳಿ ದೇವಿಯ ಆಶೀರ್ವಾದವನ್ನು ಪಡೆಯಲು, ರಾತ್ರಿ ವೇಳೆ ಪೂಜೆಯನ್ನು ಮಾಡುತ್ತಾರೆ. ಪಶ್ಚಿಮ ಬಂಗಾಳದಲ್ಲಿ, ಪುರೋಹಿತರು ಹಾಗೂ ತಂತ್ರಿಗಳಾದ ಆಗಂಬಗೀಶರರು ಪೂಜೆಯ ಭಾಗವಾಗಿ ಶವಾಗಾರಗಳಲ್ಲಿ ಧ್ಯಾನ ಮಾಡುತ್ತಾರೆ. ಇಂತಹ ಆಚರಣೆಗಳು ಪಶ್ಚಿಮ ಬಂಗಾಳದ ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷವಾಗಿ ಹೂಗ್ಲಿ, ಹೌರಾ ಮತ್ತು ಮಿಡ್ನಾಪುರದಂತಹ ಸ್ಥಳಗಳಲ್ಲಿ ಮಾಡಲಾಗುತ್ತದೆ .
ಗುಜರಾತಿನಲ್ಲಿ ಜನರು ತುಪ್ಪದ ದೀಪವನ್ನು ರಾತ್ರಿಯಿಡೀ ಹಚ್ಚಿಡುತ್ತಾರೆ. ದೀಪದಲ್ಲಿ ಬರುವ ಮಸಿಯನ್ನು ಕಾಜಲ್ ಮಾಡಲು ಬಳಸಲಾಗುತ್ತದೆ, ಇದನ್ನು ಮಹಿಳೆಯರು ತಮ್ಮ ಕಣ್ಣುಗಳಿಗೆ ಹಚ್ಚಿಕೊಳ್ಳುತ್ತಾರೆ .ಇದು ತುಂಬಾ ಮಂಗಳಕರ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಅವರು ಭಾವಿಸುತ್ತಾರೆ. ಗುಜರಾತ್ನ ಬರೂಚ್ ಮತ್ತು ನರ್ಮದಾ ಜಿಲ್ಲೆಗಳಲ್ಲಿ, ವಾಸಿಸುವ ಬುಡಕಟ್ಟು ನಿವಾಸಿಗಳಿಗೆ, ದೀಪಾವಳಿಯು ಉತ್ತಮ ಆರೋಗ್ಯದೊಂದಿಗೆ ಸಂಬಂಧ ಹೊಂದಿದೆ. ಇಲ್ಲಿ 15 ದಿನಗಳ ಹಬ್ಬವಾಗಿದೆ, ಮತ್ತು ಅವರು ಆಚರಣೆಗಳ ಭಾಗವಾಗಿ ಮರವನ್ನು ಸುಡುತ್ತಾರೆ.ಈ ಮರದಿಂದ ಉತ್ಪತ್ತಿಯಾಗುವ ಹೊಗೆ ಅವರನ್ನು ಆರೋಗ್ಯವಾಗಿರಿಸುತ್ತದೆ ಎಂದು ನಂಬುತ್ತಾರೆ.ದೀಪಾವಳಿಯ ಮರುದಿನ ಉಜ್ಜಯಿನಿ ಜಿಲ್ಲೆಯ ಬಿಡವಾಡ ಗ್ರಾಮದಲ್ಲಿ ಗೋವರ್ಧನ ಹಬ್ಬ ನಡೆಯುತ್ತದೆ. ಈ ದಿನ ಗ್ರಾಮಸ್ಥರು ತಮ್ಮ ಹಸು ಮತ್ತು ಕರುಗಳನ್ನು ಹೂವಿನಿಂದ ಅಲಂಕರಿಸಿ, ಅವರು ನೆಲದ ಮೇಲೆ ಮಲಗುತ್ತಾರೆ ನಂತರ ಅಲಂಕಾರಗೊಂಡ ಹಸುಗಳು ಅವರನ್ನು ತುಳಿದುಕೊಂಡು ಹೋಗುತ್ತದೆ. ಈ ಆಚರಣೆಯು ದೇವರು ಭಕ್ತರ ಪ್ರಾರ್ಥನೆಗಳಿಗೆ ಸ್ಪಂದಿಸುವಂತೆ ಮಾಡುತ್ತದೆ ಎನ್ನುವ ನಂಬಿಕೆಯಿದೆ.
ದೀಪಾವಳಿಯ ನಂತರ ಹಿಮಾಚಲ ಪ್ರದೇಶದ ಧಾಮಿಯಲ್ಲಿ ಕಲ್ಲು ತೂರಾಟ ಸಮಾರಂಭವನ್ನು ಕೈಗೊಳ್ಳುತ್ತಾರೆ. ಹಬ್ಬದ ಸಮಯದಲ್ಲಿ ಕಲ್ಲುಗಳಿಂದ ಹೊಡೆದವರನ್ನು ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಎರಡು ಗುಂಪುಗಳಾಗಿ ವಿಂಗಡಣೆಯಾಗಿ ಪರಸ್ಪರ ಒಬ್ಬರಮೇಲೊಬ್ಬರು ಕಲ್ಲು ಎಸೆದುಕೊಳ್ಳಲು ಪ್ರಾರಂಭಿಸುತ್ತಾರೆ. ಗಾಯಗೊಂಡವರ ರಕ್ತವನ್ನು ಕಾಳಿ ದೇವಿಯ ವಿಗ್ರಹಕ್ಕೆ ತಿಲಕವನ್ನು ಅನ್ವಯಿಸಲು ಬಳಸುತ್ತಾರೆ. ಪ್ರಾಚೀನ ಕಾಲದಲ್ಲಿ, ಕಾಳಿಗೆ ಧಾಮಿಯಲ್ಲಿ ನರಬಲಿ ನೀಡಲಾಗುತ್ತಿತ್ತು. ಆದರೆ ಸ್ಥಳೀಯ ರಾಜಪ್ರಭುತ್ವದ ರಾಣಿ ಈ ಆಚರಣೆಯನ್ನು ನಿಷೇಧಿಸಿದಳು. ಮಾನವ ತ್ಯಾಗದ ಬದಲಿಗೆ, ಜನರು ಪರ್ಯಾಯವಾಗಿ ಕಲ್ಲು ತೂರಾಟದ ಆಚರಣೆಯನ್ನು ಪ್ರಾರಂಭಿಸಿದರು ಅದು ಇನ್ನೂ ಮುಂದುವರೆದುಕೊಂಡು ಬಂದಿದೆ.
ಬಸ್ತಾರ್ ಪ್ರದೇಶದಲ್ಲಿ ಬುಡಕಟ್ಟು ಸಮುದಾಯದವರು ಹಬ್ಬವನ್ನು ಬೆಳೆಗಳ ವಿಧ್ಯುಕ್ತ ವಿವಾಹದೊಂದಿಗೆ ಪ್ರಾರಂಭಿಸುತ್ತಾರೆ.ಇದು ವಿಷ್ಣುವಿನ ವಿಗ್ರಹದ ಮುಂದೆ ಹೊಲಗಳಲ್ಲಿ ನಡೆಯುತ್ತದೆ. ಮೊದಲ ದಿನ, ಬಸ್ತಾರ್ನಲ್ಲಿ ಜಾನುವಾರುಗಳನ್ನು ಹೊಂದಿರುವವರಿಗೆ ಮದ್ಯವನ್ನು ನೀಡಲಾಗುತ್ತದೆ. 3 ದಿನಗಳ ದೀಪಾವಳಿ ಹಬ್ಬದ ಸಂದರ್ಭದಲ್ಲಿ, ಬುಡಕಟ್ಟು ಜನಾಂಗದವರು ತಮ್ಮ ಜಾನುವಾರುಗಳನ್ನು ಹೂವುಗಳಿಂದ ಅಲಂಕರಿಸುತ್ತಾರೆ. ಅವರು ಲಕ್ಷ್ಮಿ ದೇವಿಯ ಸಂಕೇತವಾಗಿ ಬೆಳೆಯನ್ನು ಪೂಜಿಸುತ್ತಾರೆ.
ದೀಪಾವಳಿಯ ಭಾಗವಾಗಿ, ಒರಿಸ್ಸಾದಲ್ಲಿ ಜನರು ಕೌರಿಯಾ ಕಥಿ ಹಬ್ಬವನ್ನು ಆಚರಿಸುತ್ತಾರೆ. ಇದು ಪೂರ್ವಜರನ್ನು ಗೌರವಿಸುವ ಆಚರಣೆಯಾಗಿದೆ.ಅವರು ಬೆಂಕಿಯನ್ನು ಉತ್ಪಾದಿಸಲು ಸೆಣಬಿನ ಬೇರುಗಳನ್ನು ಸುಡುತ್ತಾರೆ. ಇದು ಪೂರ್ವಜರನ್ನು ಕರೆಯುವ ಸಂಕೇತವಾಗಿದೆ. ಮಹಾರಾಷ್ಟ್ರದಲ್ಲಿ, ಮಹಿಳೆಯರು ಕುಟುಂಬದ ಪ್ರತಿಯೊಬ್ಬ ಪುರುಷ ಸದಸ್ಯರ ಹೆಸರಿನಲ್ಲಿ ದೀಪಗಳನ್ನು ಖರೀದಿಸುತ್ತಾರೆ ಮತ್ತು ಯಮನಿಗೆ ಗೌರವವನ್ನು ಸೂಚಿಸುವ ಸಲುವಾಗಿ ಅವರಿಗೆ ದೀರ್ಘಯುಷ್ಯ ಮತ್ತು ಸಮೃದ್ಧ ಜೀವನವನ್ನು ಕರುಣಿಸುವಂತೆ ಪ್ರಾರ್ಥನೆ ಮಾಡುತ್ತಾರೆ. ಈ ದಿನ ಅವರು ಹಿಟ್ಟಿನ ದೀಪವನ್ನು ಬೆಳಗಿಸುತ್ತಾರೆ.
ಗೋವಾದಲ್ಲಿ ಜನರು ದೀಪಾವಳಿಯ ಸಮಯದಲ್ಲಿ ನರಕಾಸುರ ಚತುರ್ದಶಿಯನ್ನು ಆಚರಿಸುತ್ತಾರೆ. ಇಲ್ಲಿನ ಸ್ಥಳೀಯರು ಎಸೆದ ಕಾಗದ, ಹುಲ್ಲು ಇತ್ಯಾದಿಗಳನ್ನು ಬಳಸಿ ನರಕಾಸುರನ ಪ್ರತಿಮೆಗಳನ್ನು ತಯಾರಿಸಿ, ಅದರಲ್ಲಿ ಪಟಾಕಿಗಳನ್ನು ತುಂಬುತ್ತಾರೆ. ಗೋವಾದ ಬೀದಿಗಳಲ್ಲಿ ಪ್ರತಿಕೃತಿಗಳನ್ನು ಮೆರವಣಿಗೆ ಮಾಡಿದ ನಂತರ, ಅವರು ದೀಪಾವಳಿಯ ದಿನದಂದು ಅವುಗಳನ್ನು ಸುಡುತ್ತಾರೆ.
ದೀಪಾವಳಿಯ ದಿನ ಈ ಮೂರು ಕೆಲಸ ಮಾಡಿ ಸಂಪತ್ತು ಮತ್ತು ಸಮೃದ್ಧಿ ಖಂಡಿತ ವೃದ್ಧಿಯಾಗುತ್ತದೆ….!