ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದಾಗಿ ಹೇಳಿದ್ದ ಮಾಸ್ಕ್‌ಮ್ಯಾನ್ ನಾಟಕ, ಕೊನೆಗೂ ಬಯಲಾಗಿದೆ. ಹೆಚ್ಚಿನ ವಿಚಾರಣೆ ಅಗತ್ಯ ಹಿನ್ನೆಲೆ ಚಿನ್ನಯ್ಯನನ್ನ, SIT ಅಧಿಕಾರಿಗಳು ಬಂಧಿಸಿದ್ರು. 10 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಿ, ಬೆಳ್ತಂಗಡಿ ನ್ಯಾಯಾಲಯ ಆದೇಶಿಸಿದೆ.
ಈ ಬೆನ್ನಲ್ಲೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು, ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಜನರ ಪ್ರೀತಿ ಕ್ಷೇತ್ರದ ಮೇಲೆ ಹೀಗೆಯೇ ಇರಲಿ. ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು ಅಂತಾ ಹೇಳಿದ್ದಾರೆ.
ಇದು ಶ್ರೀಕ್ಷೇತ್ರ ಧರ್ಮಸ್ಥಳದ ಮೇಲೆ ನಡೆಯುತ್ತಿರುವ ವ್ಯವಸ್ಥಿತ ಪಿತೂರಿ ಎಂದು ನಾನು ಹಿಂದೆಯೇ ಹೇಳಿದ್ದೆ. ಹಿಂದೆ, ಸಿಬಿಐ ತನಿಖೆ ನಡೆಸಲು ಒತ್ತಾಯಿಸಿದ್ದು ನಾನೇ. ಈಗಲೂ, ಎಸ್ಐಟಿ ತನಿಖೆಯನ್ನು ನಾನು ಸ್ವಾಗತಿಸಿದ್ದೆ.
ಹಿಂದೂ ಧರ್ಮ, ಆಚರಣೆ ಮತ್ತು ಸಂಪ್ರದಾಯದ ಬಗ್ಗೆ ಪಿತೂರಿಗಳು ನಡೆಯುತ್ತಲೇ ಬರುತ್ತಿದೆ. ಧರ್ಮಸ್ಥಳ ಕ್ಷೇತ್ರದ ಮೇಲೆ ಕೇಳಿ ಬರುತ್ತಿರುವ ಆರೋಪಗಳು, ಅಪಪ್ರಚಾರಗಳು ಇದರದ್ದೇ ಮುಂದುವರಿದ ಭಾಗವಾಗಿದೆ.
ಶ್ರೀಕ್ಷೇತ್ರದ ಮೇಲೆ ಕೇಳಿ ಬರುತ್ತಿರುವ ಆರೋಪಕ್ಕೆ ಯಾವುದೇ ಆಧಾರಗಳಿಲ್ಲ, ಸಾಕ್ಷ್ಯಗಳಿಲ್ಲ. ವ್ಯವಸ್ಥಿತ ಪಿತೂರಿಯ ಭಾಗವಾಗಿ, ಇದನ್ನು ಕಪೋಕಲ್ಪಿತವಾಗಿ ಸುದ್ದಿ ಮಾಡಲಾಗುತ್ತಿದೆ. ಕ್ಷೇತ್ರಕ್ಕೆ ಮತ್ತು ವೈಯಕ್ತಿಕವಾಗಿ ನನ್ನ ಕುಟುಂಬಕ್ಕೆ ಮಸಿ ಬಳೆಯುವ ಪ್ರಯತ್ನ ಇದು.
ಎಲ್ಲರಿಗೂ ಗೊತ್ತಿರುವ ವಿಚಾರ, ಹದಿಮೂರು ಜಾಗದಲ್ಲಿ ಶವ ಹೂತಿದ್ದೇನೆ ಎಂದು ಅನಾಮಿಕ ಹೇಳಿದ್ದ. ಅಷ್ಟಕ್ಕೂ ಮುಗಿಯದೇ ಹದಿನೇಳು ಕಡೆ ಅಗೆಯಲಾಯಿತು. ಅಲ್ಲಿ ಏನೂ ಕಂಡು ಬಂದಿಲ್ಲ. ಇದು ನಮ್ಮನ್ನು ಧರ್ಮವನ್ನು ದುರ್ಬಲಗೊಳಿಸುವ ಕೆಲಸವಾಗಿದೆ. ಹಿಂದೂಗಳು ಜಾಗರೂಕರಾಗಬೇಕಾದ ಸಮಯವಿದು ಎಂದು, ಹಿಂದೂಗಳಲ್ಲಿ ವೀರೇಂದ್ರ ಹೆಗ್ಗಡೆ ಮನವಿ ಮಾಡಿದ್ದಾರೆ.