Thursday, May 30, 2024

Latest Posts

ನಮ್ಮ ಪರವಾದ ಸರ್ಕಾರ ಎಂಬ ಮನೋಭಾವ ಅಪರಾಧಿಗಳಿಗೆ ಬಂದಿದೆ: ಪ್ರಹ್ಲಾದ್ ಜೋಶಿ

- Advertisement -

Dharwad News: ಧಾರವಾಡ : ಕಾಂಗ್ರೆಸ್ ಅಧಿಕಾರಕ್ಕೆ ಬಂದ್ ಮೇಲೆ ಹಿಂದೂ ಸಮಾಜದ ಮೇಲೆ ಹಲ್ಲೆ ಮಾಡೋದು ಸಹಜವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜೋಶಿ, ಜೈ ಶ್ರೀರಾಮ ಅನ್ನೋರ ಮೇಲೆ‌ ಹಲ್ಲೆ ಆಯ್ತು. ಹನುಮಾನ ಚಾಲೀಸ್ ಹಾಕಿದ್ದಕ್ಕೆ ಹಲ್ಲೆ ಆಯ್ತು. ಹಲ್ಲೆಯಾದವರ ಮೇಲೆ‌ ಕೇಸ್ ಆಗೊಲ್ಲ. ಹಲ್ಲೆ ಮಾಡಿಸಿಕೊಂಡವರ ಮೇಲೆಯೇ ಬೇಗ ಹಲ್ಲೆ ಆಗುತ್ತದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ಪಿಎಫ್‌ಐ, ಎಸ್‌ಡಿಪಿಐ ಜೊತೆಗೂಡಿ ಗಲಾಟೆ ಮಾಡಿದ್ದರು. ದಂಗೆಯಲ್ಲಿ ಬಂಧನಕ್ಕೊಳದವರು ಬಿಡುಗಡೆ ಮಾಡಿಸಲು ನಿಂತಿದ್ದರು. ಅಖಂಡ ಶ್ರೀನಿವಾಸ ಮನೆ ಮೇಲೆ ದಾಳಿ ಆಗಿತ್ತು. ಅವರೊಬ್ಬ ದಲಿತ ಸಮುದಾಯಕ್ಕೆ ಸೇರಿದವರು. ಅಲ್ಲಿನ ಆರೋಪಿಗಳದ್ದು ಬಿಡುಗಡೆ ಮಾಡಿಸಿದರು.

ಪಾಕ್ ಪರ ಜಿಂದಾಬಾದ್ ಅಂದಾಗಲೂ ಅಂದಿಲ್ಲ ಎಂದಿದ್ದರು. ಕೊನೆಗೆ ಒಬ್ಬರನ್ನು ಅರೆಸ್ಟ್ ಮಾಡಿದರು. ರಾಮೇಶ್ವರ ಕೆಫೆ ದಾಳಿ ಪ್ರಕರಣದಲ್ಲಿಯೂ ಹಾಗೆಯೇ ಮಾಡಿದರು. ನೇಹಾ ಹಿರೇಮಠರನ್ನು ಮತಾಂಧ ಕೊಲೆ ಮಾಡಿದ್ದಾನೆ. ಇಸ್ಲಾಂ ಮತಾಂತರಕ್ಕೆ ಆತ ಒತ್ತಡ ಹಾಕಿದ್ದ. ಒಪ್ಪದ್ದಾಗ ಬರ್ಭರ ಹತ್ಯೆ ಮಾಡಿದ್ದಾನೆ. ಇದರ ಬಗ್ಗೆ ನೇಹಾ ತಂದೆಯೇ ಹೇಳಿದ್ದಾರೆ ಎಂದು ಜೋಶಿ ವಾಗ್ದಾಳಿ ನಡೆಸಿದ್ದಾರೆ..

ನಿನ್ನೆ ಯಾದಗಿರಿಯಲ್ಲಿ ದಲಿತ ಯುವಕನ ಮೇಲೆ ಫಯಾಜ್ ಎಂಬಾತ ಹಲ್ಲೆ ಮಾಡಿದ್ದಾನೆ. ನಮ್ಮ ಪರವಾದ ಸರ್ಕಾರ ಎಂಬ ಮನೋಭಾವ ಅಪರಾಧಿಗಳಿಗೆ ಬಂದಿದೆ. ಈ ರೀತಿಯ ಪ್ರವೃತ್ತಿ ನಮ್ಮ ಸಂಸ್ಕೃತಿ ಮೇಲೆ ಪ್ರಹಾರ ನಡೆದಿದೆ. ತಮ್ಮ ಚಿಹ್ನೆಯ ಧ್ವಜದಲ್ಲಿ ಕೇಸರಿ ಇದೆ ಅಂತಾ ರಾಹುಲ್ ಗಾಂಧಿ ಅದನ್ನು ಬಿಟ್ಟಿದ್ದಾರೆ. ತಮ್ಮ ಧ್ವಜ ಬಿಟ್ಟು, ಮುಸ್ಲಿಂ ಲೀಗ್‌ನ ಹಸಿರು ಧ್ವಜ ಹಿಡಿದು ನಾಮಪತ್ರ ಸಲ್ಲಿಸೋಕೆ ಹೋಗಿದ್ದಾರೆ. ತಮ್ಮ ಧ್ವಜ, ಚಿಹ್ನೆಯನ್ನೇ ಕೈಬಿಟ್ಟಿದ್ದರು. ಎಂತಹ ದುರಂತ ಇದು..? ಭಯೋತ್ಪಾದನೆ ಮತ್ತು ಕೋಮುವಾದ ಒಂದೇ ನಾಣ್ಯದ ಎರಡೂ ಮುಖ. ಇದನ್ನು ಬೇರು ಸಹಿತ ಕಿತ್ತು ಹಾಕುವ ಪ್ರಯತ್ನ ಮೋದಿ ಮಾಡುತ್ತಿದ್ದಾರೆ. ಇದನ್ನು ಪ್ರೋತ್ಸಾಹಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಪೊಲೀಸ್ ಠಾಣೆಗಳು ಸೆಟ್ಲಮೆಂಟ್ ಸೆಂಟರ್ ಆಗಿವೆ: ಬಸವರಾಜ್ ಬೊಮ್ಮಾಯಿ ವಾಗ್ದಾಳಿ

ಕರ್ನಾಟಕದಲ್ಲಿ ತಾಲಿಬಾನ್ ಆಡಳಿತ‌ನಡೀತಿದೆಯಾ? ಜನಪರ ಸರ್ಕಾರ‌ ಇದೆಯಾ?: ಪಿ.ರಾಜೀವ್

ಲೋಕಸಭೆ ಚುನಾವಣೆ ಸಮೀಪಿಸುತ್ತಲೇ ಬಿಜೆಪಿಗೆ ಶಾಕ್: ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ..

- Advertisement -

Latest Posts

Don't Miss