Wednesday, May 29, 2024

Latest Posts

ಕರ್ನಾಟಕದಲ್ಲಿ ತಾಲಿಬಾನ್ ಆಡಳಿತ‌ನಡೀತಿದೆಯಾ? ಜನಪರ ಸರ್ಕಾರ‌ ಇದೆಯಾ?: ಪಿ.ರಾಜೀವ್

- Advertisement -

Political News: ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಿ. ರಾಜೀವ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ರಾಜ್ಯದಲ್ಲಿ‌ ಕಾನೂನು ಸುವ್ಯವಸ್ಥೆ ಇದೆಯಾ? ಎಂದು ಪ್ರಶ್ನಿಸಿದ್ದಾರೆ.

ಘಟನೆಯ ಪ್ರಾಥಮಿಕ ಮಾಹಿತಿ ‌ಇಲ್ಲದೇ ಉತ್ತರಿಸುವ ಪೊಲೀಸ್, ಮಂತ್ರಿ. ಮಹಿಳೆಯರಿಗೆ ಸುರಕ್ಷತೆ ಇಲ್ಲಾ. ಪೋಷಕರ ಸಮ್ಮುಖದಲ್ಲಿ ‌ಓರ್ವ ದಲಿತ ಯುವಕನನ್ನ‌ ಮರ್ಮಾಂಗಕ್ಕೆ ಒದ್ದು‌ಕತ್ತು ಹಿಸುಕಿ ಕೊಲೆ ಮಾಡಿದಾರೆ. ಕರ್ನಾಟಕದಲ್ಲಿ ತಾಲಿಬಾನ್ ಆಡಳಿತ‌ನಡೀತಿದೆಯಾ? ಜನಪರ ಸರ್ಕಾರ‌ ಇದೆಯಾ? ಎಂದು ರಾಜೀವ್ ಪ್ರಶ್ನಿಸಿದ್ದಾರೆ.

ಭಯೋತ್ಪಾದಕ ಚಟುವಟಿಕೆಗಳು ಜಾಸ್ತಿಯಾಗ್ತಿವೆ. ಯಾಕಂದ್ರೆ ಡಿಕೆಶಿ ಅವರ ಬ್ರದರ್ಸ್‌ಗೆ ಗೊತ್ತು. ನಾವು ಏನೇ ಮಾಡಿದರೂ‌‌ ನಮ್ಮ ರಕ್ಷಣೆಗೆ ಪೊಲೀಸರು ನಿಲ್ಲುತ್ತಾರೆ ಎಂಬ ಭಾವನೆ‌ ಇದೆ. ಈ‌ ಭಾವನೆಗಳಿಂದ ರಾಜ್ಯದಲ್ಲಿ ಕೃತ್ಯಗಳು ನಡೀತಿವೆ. ನಿನ್ನೆ ಯಾದಗಿರಿಯಲ್ಲಿ ದಲಿತ ಯುವಕನ ಪ್ರಕರಣ ಗೊತ್ತಾಯ್ತು. ಈ‌ ಘಟನೆ ನಡೆದಿರೋದು ಹಿಂದಿನ ರಾತ್ರಿ. ಮರ್ಡರ್ ಕೇಸ್‌‌ ಮುಚ್ಚಿ‌ ಹಾಕುವ ಕೆಲಸ‌ ನಡೆದಿದೆ. ಓರ್ವ ದಲಿತನ ಹತ್ಯೆ ಆದ್ರೆ‌ 14 ಗಂಟೆಗಳಾದರೂ ಎಫ್ ಐಆರ್ ಮಾಡಲು ಸಾಧ್ಯವಾಗಿಲ್ಲ. ಯಾವ ಮುಖ‌ ಇಟ್ಕೊಙಡು ದಲಿತ ಸಮುದಾಯದಿಂದ ಬಂದ ಗೃಹ ಸಚಿವರು ಮುಖ‌ ತೋರಿಸ್ತಾರೆ? ಮಾನ‌ ಮರ್ಯಾದೆ ಇದ್ರೆ.. ಪರಮೇಶ್ವರ್ ರಾಜೀನಾಮೆ ನೀಡಬೇಕು. ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲು ಆಗಲಿಲ್ಲ ಎಂದು ರಾಜೀನಾಮೆ ಕೊಡಲಿ ಎಂದು ರಾಜೀವ್ ಆಗ್ರಹಿಸಿದ್ದಾರೆ.

ಅತ್ಯಂತ ಅಸಮರ್ಥ ಮುಖ್ಯಮಂತ್ರಿ. ತೆರಿಗೆ ರೂಪದಲ್ಲಿ 2.38 ಲಕ್ಷ ತೆರಿಗೆ ಸಂಗ್ರಹಿಸುತ್ತೇನೆ ಎಂದಿದ್ರು. ಆದ್ರೆ ಗುರಿ ತಲುಪಿಲ್ಲ. ಆಡಿಟರ್ ಜನರಲ್ ರಿಪೋರ್ಟ ಬಂದಿದೆ. 2ಲಕ್ಷದ 5 ಕೋಟಿ ಮಾತ್ರ ಸಂಗ್ರಹ ಆಗಿದೆ. ಇದಕ್ಕೆ ಕೇಂದ್ರ ಸರ್ಕಾರಕ್ಕೆ ಏನು ಸಂಬಂಧ? ಇದನ್ನ ಮುಚ್ಷಿಕೊಳ್ಳಲು ವಿಧಾನಸೌಧದಲ್ಲಿ ಪ್ರತಿಭಟನೆ ಮಾಡ್ತಿದಾರೆ. ಡಿಕೆಶಿ ಅವರು ನೀತಿಸಂಹಿತೆ ಇದ್ದಾಗ ಪಕ್ಷ ಸೇರ್ಪಡೆ ಮಾಡಿಕೊಳ್ತಾರೆ. ಕಾಂಗ್ರೆಸ್ ಶಾಸಕರ ದಂಡು ಪ್ರತಿಭಟನೆ ಮಾಡ್ತಿದೆ. ಚೀಫ್ ಸೆಕ್ರೆಟರಿ ಅವರಿಗೆ ಎರಡು ಪತ್ರ‌ ಕೊಟ್ಡಿದ್ವಿ. ನೀತಿ ಸಂಹಿತೆ‌ ಉಲ್ಲಂಘಿಸಿದ್ರೂ ಕ್ರಮ ತೆಗೆದುಕೊಂಡಿಲ್ಲ. ಚುನಾವಣಾ ಆಯೋಗಕ್ಕೆ ಕಣ್ಣು,‌ಕಿವಿ, ಬಾಯಿ‌ಇದೆಯಾ? ವಿಧಾನಸೌಧದಲ್ಲಿ ಪ್ರತಿಭಟನೆಗೆ ಅವಕಾಶ ಕೊಟ್ಟಿರೋದಕ್ಕೆ ಕೂಡಲೇ ಸಿಎಸ್‌ ವಿರುದ್ಧ ಕ್ರಮ ಕೈಗೊಳ್ಳಬೇಕು. ತನಗೆ‌ ಮಾಡಲು ಆಗದೇ ಇರೋದನ್ನ ಮುಚ್ಷಿಕೊಳ್ಳಲು ಪ್ರಯತ್ನ. ಕೈಲಾಗದವನು‌ ಕಟ್ಟಕಡೆಯದಾಗಿ ಬಳಸುವ ಅಸ್ತ್ರ ಅಪಪ್ರಚಾರ. ಸಿಎಂ ಅವರೇ ಅಪಪ್ರಚಾರದಲ್ಲಿ ತೊಡಗಿದ್ದಾರೆ. ರಾಜ್ಯವನ್ನು ದಿವಾಳಿ‌ಮಾಡಿದ್ದಾರೆ. ಮುಖ್ಯಮಂತ್ರಿ ಸಂಪೂರ್ಣ ವಿಫಲ ಆಗಿದ್ದಾರೆ ಎಂದು ಪಿ.ರಾಜೀವ್ ಆರೋಪಿಸಿದ್ದಾರೆ..

ಶಕ್ತಿಯೋಜನೆ ನಿಶ್ಯಕ್ತಿಯಾಗಿ‌ ನಡೀತಿದೆ‌‌. ಇಪಿಎಫ್ 1600 ಕೋಟಿ ಬಾಕಿ‌ ಉಳಿಸಿಕೊಂಡಿದೆ. ಬಸ್ ಗೆ ಪಂಕ್ಚರ್ ಹಾಕೋಕೆ ದುಡ್ಡು ಕೊಟ್ಡಿಲ್ಲ. ಹಾಲು ಉತ್ಪಾದಕರಿಗೆ‌ ಬರುತ್ತಿದ್ದ 5 ರೂ. ಪ್ರೋತ್ಸಾಹ ಧನ ನಿಂತು ಹೋಗಿದೆ. ಎಲೆಕ್ಟ್ರಿಕ್ ಸಿಟಿ ಬಿಲ್ 4 ಪಟ್ಟು ಹೆಚ್ಚಿದೆ. ಕೊಟ್ಟಿದ್ದು ‌ ೨ ಸಾವಿರ ಹಾಗಿದ್ರೆ ಈ ಸರ್ಕಾರ‌ ಮಾಡಿದ ಘನಂದಾರಿ‌ ಕೆಲಸ ಏನು? 11 ನೇ ಸ್ಥಾನದಲ್ಲಿದ್ದ ಭಾರತವನ್ನ 5 ನೇ ಸ್ಥಾನಕ್ಕೆ ತಂದಿದ್ದಾರೆ ಮೋದಿ.. ಕೇವಲ 2 ಸಾವಿರ ಕೊಟ್ಟು‌ 25 ಸಾವಿರದ ಟಿಸಿ‌ 2.5 ಲಕ್ಷಕ್ಕೆ‌ ಏರಿಸಿದ್ದಾರೆ‌. ಭಾರತವನ್ನ ಅಧೋಗತಿಗೆ‌ ತಂದಿದ್ದಾರೆ. ನೇಹಾ ವಿಚಾರವಾಗಿ ಕನಿಷ್ಟ ಕ್ಷಮೆ ‌ಕೇಳಲು ಆಗದ ಸರ್ಕಾರ.ದಲಿತರ ರಕ್ಷಣೆ ಈ ಸರ್ಕಾರದಿಂದ ಆಗಲ್ಲ.  ಎಲ್ಲಾ ದಲಿತ ಸಂಘಟನೆಗಳಿಗೆ ವಿನಂತಿ ಮಾಡಿಕೊಳ್ತೇನೆ. ಪೋಷಕರ‌ ಎದುರೇ ಹತ್ಯೆ ‌ಮಾಡಲಾಗಿದೆ. ಕೇಸ್ ದಾಖಲಿಸುವಲ್ಲಿ ಈ ಸರ್ಕಾರ ವಿಫಲವಾಗಿದೆ. ಎಲ್ಲಾ ದಲಿತ ಸಂಘಟನೆಗಳು ಧ್ವನಿ ಎತ್ತಬೇಕು. ಹತ್ಯೆಯಾದ ಪೋಷಕರ ಜೊತೆ ನಿಲ್ಲಬೇಕು ಎಂದು ಪಿ.ರಾಜೀವ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಯುವತಿ ಮೇಲೆ ಅನ್ಯಕೋಮಿನ ಯುವಕನಿಂದ ಹಲ್ಲೆ ಆರೋಪ: ಬಂಧನ

ಲೋಕಸಭೆ ಚುನಾವಣೆ ಸಮೀಪಿಸುತ್ತಲೇ ಬಿಜೆಪಿಗೆ ಶಾಕ್: ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ..

ಪಕ್ಷೇತರವಾಗಿ ಸ್ಪರ್ಧೆ ಹಿನ್ನೆಲೆ, ಬಿಜೆಪಿಯಿಂದ 6 ವರ್ಷಗಳ ಕಾಲ ಈಶ್ವರಪ್ಪ ಉಚ್ಚಾಟನೆ.

- Advertisement -

Latest Posts

Don't Miss