Monday, September 9, 2024

Latest Posts

ಬುಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಕೋಪಗೊಂಡು ಗಲಾಟೆ ಮಾಡಿದ ಆಟೋ ಚಾಲಕ

- Advertisement -

Bengaluru News: ಬೆಂಗಳೂರಿನಲ್ಲಿ ಬುಕ್ ಮಾಡಿದ ಆಟೋ ಕ್ಯಾನ್ಸಲ್ ಮಾಡಿದ್ದಕ್ಕೆ ಆಟೋ ಚಾಲಕ, ಯುವತಿಯರ ವಿರುದ್ಧ ಅಸಭ್ಯವಾಗಿ ಮಾತನಾಡಿದ್ದಲ್ಲದೇ, ವೀಡಿಯೋ ಮಾಡುತ್ತಿದ್ದ ಮೊಬೈಲ್ ಶೇಕ್ ಮಾಡಿದ್ದಾನೆ. ಈ ಘಟನೆಯಲ್ಲಿ ಚಾಲಕ ಯುವತಿಯ ಮೇಲೆ ಕೈ ಮಾಡಿದ್ದಾನೆ ಅಂತಾ ಹೇಳಲಾಗಿದೆ.

ಈ ವೀಡಿಯೋದಲ್ಲಿ ನನ್ನ ಆಟೋ ಬುಕ್ ಮಾಡಿ ಯಾಕೆ ಕ್ಯಾನ್ಸಲ್ ಮಾಡಿದ್ದು..? ಗ್ಯಾಸ್ ಯಾರು ನಿನ್ನ ಅಪ್ಪ ಕೊಡ್ತಾನಾ..? ಪೊಲೀಸರಿಗೆ ಕಂಪ್ಲೆಂಟ್ ಕೊಡೋದಾದ್ರೆ, ಕೋಡೋಣ ಇಳಿದು ಬಾ.. ಎಂದು ಆಟೋ ಚಾಲಕ ಜೋರು ಜೋರಾಗಿ ಮಾತನಾಡಿದ್ದಾನೆ.

ಇದಕ್ಕೆ ಪ್ರತಿಕ್ರಿಯಿಸಿರುವ ಯುವತಿ, ಯಾಕೆ ನೀವು ನಮ್ಮ ರೈಡ್‌ಗಳನ್ನು ಕ್ಯಾನ್ಸಲ್ ಮಾಡುವುದಿಲ್ಲವೇ..? ನಿಮಗೂ ಕಾರಣಗಳಿರುವುದಿಲ್ಲವೇ..? ಅದೇ ರೀತಿ ನಮಗೂ ಕೆಲವು ಕಾರಣಗಳಿರುತ್ತದೆ. ಹಾಗಾಗಿ ನಾವು ಆಟೋ ಬುಕಿಂಗ್ ಕ್ಯಾನ್ಸಲ್ ಮಾಡಿದ್ದೇವೆ.

ಈ ಘಟನೆಯನ್ನು ತನ್ನ ಮೊಬೈಲ್‌ನಲ್ಲಿ ವೀಡಿಯೋ ಮಾಡಿರುವ ಯುವತಿ, ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ನಿನ್ನೆ ಬೆಂಗಳೂರಿನಲ್ಲಿ ಆಟೋ ಕ್ಯಾನ್ಸಲ್ ಮಾಡಿದ ಸಣ್ಣ ಕಾರಣಕ್ಕೆ, ಆಟೋ ಚಾಲಕ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾನೆ. ಇಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss