Wednesday, September 11, 2024

Latest Posts

Hubballi : ಶಶಿಕುಮಾರ್ ಟೀಂ ಕಾರ್ಯಾಚರಣೆ : ಬಹುದೊಡ್ಡ ಕಳ್ಳತನ ಗ್ಯಾಂಗ್ ಲಾಕ್!

- Advertisement -

ಬಂಗಾರದ ಅಂಗಡಿಯಲ್ಲಿ ನಡೆದ ಬಹುದೊಡ್ಡ ಕಳ್ಳತನ ಪ್ರಕರಣಕ್ಕೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸರು ಭೇದಿಸಿದ್ದು, ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.ಜು.17 ರಂದು ಭುವನೇಶ್ವರಿ ನಗರದಲ್ಲಿರುವ ಭುವನೇಶ್ವರಿ ಜ್ಯುವೆಲರಿ ವರ್ಕ್ಸ್ ಎಂಬ ಅಂಗಡಿಯಲ್ಲಿ ಗ್ಯಾಸ್ ಕಟರ್ ಬಳಸಿ ಅಂಗಡಿ ಲಾಕ್ ಮುರಿದಿದ್ದ ಕಳ್ಳರು, ಲಕ್ಷಾಂತರ ರೂ ಮೌಲ್ಯದ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ಕಳ್ಳತನ ದೋಚಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ಕಮಿಷನರ್ ಶಶಿಕುಮಾರ್ ಅವರ ಮಾರ್ಗದರ್ಶನದಲ್ಲಿ ನಾಲ್ಕು ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆಗೆ ಇಳಿದಿತ್ತು. ಬಳಿಕ ಪ್ರಕರಣದ ಮುಖ್ಯ ಆರೋಪಿ ಹಾಗೂ ಅಂತರಾಜ್ಯ ಕಳ್ಳ ಫರಾನ್ ಶೇಖ್ ಎಂಬಾತನನ್ನು ಬಂಧಿಸಿ ತನಿಖೆ ಮುಂದುವರೆಸಿತ್ತು. ಇದೀಗ ಮಹಾರಾಷ್ಟ್ರ, ಗೋವಾ ಸೇರಿದಂತೆ ಮುತ್ತಿತ್ತರ ಕಡೆಗಳಲ್ಲಿ ಹುಡುಗಾಟ ನಡೆಸಿ ಮಹಾರಾಷ್ಟ್ರ ಮೂಲದ ಮುಖೇಶ್ ಅಲಿಯಾಸ್ ರಾಜು ಯಾದವ್, ಫಾತಿಮಾ ಶೇಖ್, ಅಲ್ತಾಬ್ ಅಹ್ಮದ್ ಶೇಖ್, ತಲತ್ ಶೇಖ್ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನೂ ಆರೋಪಿಗಳಿಂದ 55 ಲಕ್ಷ ರೂ ಮೌಲ್ಯದ 780 ಗ್ರಾಂ ತೂಕದ ಬಂಗಾರದ ಆಭರಣ, 17 ಲಕ್ಷ ರೂ ಮೌಲ್ಯದ 23 ಕೆಜಿ ಬೆಳ್ಳಿ, 10ಸಾವಿರ ನಗದು, ಹಾಗೂ ಕೃತ್ಯಕ್ಕೆ ಬಳಸಿದ ಒಂದು ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ಮತ್ತಷ್ಟು ಜನರ ಬಂಧನ ಸಾಧ್ಯತೆಗಳಿವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.ಈ ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ಶರಣ ದೇಸಾಯಿ, ಮಲ್ಲಿಕಾರ್ಜುನ ಹೆಬಸೂರು, ಮಂಜುನಾಥ, ಪುನೀತ್ ಕುಮಾರ್, ರವಿ ವಡ್ಡರ ಸೇರಿದಂತೆ ಹಲವು ಸಿಬ್ಬಂದಿಗಳು ಭಾಗವಹಿಸಿದ್ದರು.

- Advertisement -

Latest Posts

Don't Miss