ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಅಡಗಿ ಕುಳಿತ ಬಾಲಕನೊಬ್ಬ, ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದಿದ್ದಾನೆ. ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಾಗ, ಘಟನೆ ಬೆಳಕಿಗೆ ಬಂದಿದೆ. ಬಳಿಕ ಅದೇ ವಿಮಾನದಲ್ಲಿ ಬಾಲಕನನ್ನು ವಾಪಸ್ ಕಳಿಸಲಾಗಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ದಾಳಿ ವೇಳೆ ಹಲವರು, ಅಮೆರಿಕ ಯುದ್ಧ ವಿಮಾನದ ರೆಕ್ಕೆ ಮೇಲೆ ಸಿಕ್ಕ ಸಿಕ್ಕ ಕಡೆ ಕುಳಿತಿದ್ದರು. ವಿಮಾನ ಮೇಲಕ್ಕೆ ಹಾರುತ್ತಿದ್ದಂತೆ, ಎಲ್ಲರೂ ನೆಲಕ್ಕಪ್ಪಳಿಸಿದ್ದಾರೆ. ಆದ್ರೆ, ಆಫ್ಘಾನಿಸ್ತಾನದ 13 ವರ್ಷದ ಬಾಲಕನೊಬ್ಬ, ವಿಮಾನದ ಲ್ಯಾಡಿಂಗ್ ಗೇರ್ ಬಳಿ ಅಡಗಿ ಕುಳಿತು ದೆಹಲಿಗೆ ಬಂದಿಳಿದ್ದಾನೆ. 94 ನಿಮಿಷಗಳ ಪ್ರಯಾಣದಲ್ಲಿ, ಬಾಲಕ ಬದುಕುಳಿದಿದ್ದೇ ಪವಾಡ. ಪೈಜಾಮ ತೊಟ್ಟಿದ್ದ ಬಾಲಕ, ಲ್ಯಾಂಡಿಂಗ್ ಗೇರ್ ಬಳಿ ಅಡಗಿ ಕುಳಿತಿರುವುದನ್ನು ಸಿಬ್ಬಂದಿ ಗಮನಿಸಿದ್ದಾರೆ. ತಕ್ಷಣವೇ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ.
ಇನ್ನು, ಆಫ್ಘಾನಿಸ್ತಾನದಿಂದ ಇರಾನ್‌ಗೆ ತೆರಳಲು ಬಾಲಕ ಪ್ಲಾನ್ ಮಾಡಿದ್ದನಂತೆ. ಇದಕ್ಕಾಗಿ ಕಾಬೂಲ್ ವಿಮಾನ ನಿಲ್ದಾಣಕ್ಕೆ ಬಂದಿದ್ದ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ನಡುವೆ ನಿಂತು, ಯಾರಿಗೂ ಕಾಣದಂತೆ ಭದ್ರತಾ ತಪಾಸಣೆ ಕಣ್ತಪ್ಪಿಸಿ ಎಂಟ್ರಿಯಾಗಿದ್ದ. ಎಲ್ಲರ ಕಣ್ತಪ್ಪಿಸಿ ಬಾಲಕ ಎದುರಿಗಿದ್ದ ವಿಮಾನದ ಲ್ಯಾಂಡಿಂಗ್ ಗೇರ್ ಬಳಿ ಅಡಗಿ ಕುಳಿತಿದ್ದಾನೆ. ಆದರೆ, ಬಾಲಕ ಅಡಗಿ ಕುಳಿತ ವಿಮಾನ ದೆಹಲಿಗೆ ಹೊರಟ್ಟಿತ್ತು. ದೆಹಲಿಯಲ್ಲಿ ಬಾಲಕನನ್ನು ವಶಕ್ಕೆ ಪಡೆದ ಪೊಲೀಸರು, ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ, ವಾಪಸ್ ಕಳಿಸಿದ್ದಾರೆ. ಅಪ್ರಾಪ್ತನಾಗಿರುವ ಕಾರಣ ಕಾನೂನು ಪ್ರಕ್ರಿಯೆಗಳಿಂದ ಕೆಲವು ವಿನಾಯಿತಿ ನೀಡಲಾಗಿದೆ.