Wednesday, December 3, 2025

Latest Posts

ಈ ಗೂಢಾಚಾರಿ ಆ್ಯಪ್ ಮೂಲಕ ಜನ ಖಾಸಗಿತನದ ಮೇಲೆ ಕೇಂದ್ರ ಕಣ್ಣಿಡಲಿದೆ: ಗುಂಡೂರಾವ್ ಆರೋಪ

- Advertisement -

Political News: ದೇಶದಲ್ಲಿ ಸಂಚಾರಿ ಸಾಥಿ ಆ್ಯಪ್‌ನ್ನು ಎಲ್ಲರೂ ಡೌನ್‌ಲೋಡ್ ಮಾಡಬೇಕು ಎಂದು ಹೇಳಲಾಗಿದೆ. ಆದರೆ ಇದು ಹೆಚ್ಚಾಗಿ ಸುದ್ದಿಯಾಗಲಿಲ್ಲ. ಸದ್ದು ಮಾಡಲಿಲ್ಲ. ಮುಂದೆ ಕಡ್ಡಾಯವಾಗುವ ಲಕ್ಷಣಗಳಿದೆ. ಆದರೆ ಈ ಆ್ಯಪ್‌ ಪ್ರತಿಯ“ಬ್ಬರೂ ಡೌನ್‌ಲೋಡ್ ಮಾಡಲೇಬೇಕು ಎಂದು ಹೇಳುವುದರ ಹಿಂದೆ ಯಾವುದೋ ಷಡ್ಯಂತ್ರವಿದೆ ಅಂತಾ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಮೊಬೈಲ್‌ಗಳಲ್ಲಿ ‘ಸಂಚಾರಿ ಸಾಥಿ’ ಆ್ಯಪ್ ಅಳವಡಿಕೆ ಕಡ್ಡಾಯಗೊಳಿಸಿರುವ ಕೇಂದ್ರದ ನಿರ್ಧಾರ ಆತಂಕಕಾರಿ ಹಾಗೂ ಸರ್ವಾಧಿಕಾರಿ‌ ನಡೆ. ಇದೊಂದು ಖಂಡಿತವಾಗಿಯೂ ಗೂಢಾಚಾರಿ ಆ್ಯಪ್ ಆಗಿದ್ದು ಈ ಆ್ಯಪ್ ಮೂಲಕ ಸಾರ್ವಜನಿಕರ ಖಾಸಗಿತನದ ಮೇಲೆ ಕಣ್ಗಾವಲು ಇಡಲು‌ ಕೇಂದ್ರ ನಡೆಸಿರುವ ವ್ಯವಸ್ಥಿತ ಷಡ್ಯಂತ್ರ ನಡೆಸಿದೆ ಎಂದು ಆರೋಪಿಸಿದ್ದಾರೆ.

ಈ ಹಿಂದೆ ಕೇಂದ್ರ ಸರ್ಕಾರ ತನ್ನ ರಾಜಕೀಯ ವಿರೋಧಿಗಳ ಮೇಲೆ ಕಣ್ಗಾವಲು ಇಡಲು ಇಸ್ರೇಲ್‌ನ ‘ಪೆಗಾಸಸ್’ ಮತ್ತು ಉ.ಕೊರಿಯಾದ ‘ರೆಡ್‌ಫ್ಲ್ಯಾಗ್’ ಅಪ್ಲಿಕೇಶನ್ ಬಳಸಿ ಕಳ್ಳತನದ ಗೂಢಾಚಾರಿಕೆ ನಡೆಸಿತ್ತು. ಈಗ ಬಹಿರಂಗವಾಗಿಯೇ ಸಂಚಾರ ಸಾಥಿ ಅಪ್ಲಿಕೇಶನ್ ಮೂಲಕ ಸಾರ್ವಜನಿಕರ ಮೇಲೆ ಗೂಢಾಚಾರಿಕೆ ನಡೆಸಲು ಹೊರಟಿದೆ. ಇದು ಜನರ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸಾರ್ವಜನಿಕರ ಮೇಲೆ‌ ಕಣ್ಗಾವಲು‌ ಇಡಲು ಕೇಂದ್ರಕ್ಕೆ ಬಂದಿರುವ ರೋಗವಾದರೂ ಏನು.? ತನ್ನದೇ ಜನರ ಮೇಲೆ ಗೂಢಾಚಾರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಏನನ್ನು ಸಾಧಿಸಲು ಹೊರಟಿದೆ.? ಕೇಂದ್ರದ ನಡೆ ಅನೇಕ ಅನುಮಾನ ಮೂಡಿಸುತ್ತಿದೆ‌. ಯಾವುದೇ ಸರ್ಕಾರ ಜನರ ಖಾಸಗಿತನ ರಕ್ಷಣೆ ಮಾಡಬೇಕು. ಖಾಸಗಿತನ ಜನರಿಗೆ ಸಂವಿಧಾನ ನೀಡಿರುವ ಹಕ್ಕಾಗಿದೆ. ಇದನ್ನು ಉಲ್ಲಂಘಿಸುವುದು ಸಂವಿಧಾನದ ಆಶಯಕ್ಕೆ ಧಕ್ಕೆ ತಂದಂತೆ ಎಂದು ಸಚಿವರು ಹೇಳಿದ್ದಾರೆ.

- Advertisement -

Latest Posts

Don't Miss