Hubli News: ಹುಬ್ಬಳ್ಳಿ: ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಯನ್ನು ಉತ್ತರ ಕರ್ನಾಟಕದ ಸಂಜೀವಿನಿ ಎಂದು ಸುಮ್ನೆ ಹೇಳಲ್ಲಾ. ಕೆಎಂಸಿ ಆಸ್ಪತ್ರೆಯ ವೈದ್ಯರ ಸಾಧನೆ ನೋಡಿದ್ರೆ ಎಲ್ಲರು ಒಂದು ಸಾರಿ ಬೆರಗಾಗುವುದು ಮಾತ್ರ ನಿಶ್ಚಿತ. ಅಪಘಾತದಲ್ಲಿ ಒಬ್ಬ ವ್ಯಕ್ತಿಗೆ ಎದೆಯ ಎಡಭಾಗದ ಒಳಗೆ ಪೈಪ್ ರಾಡ್ ಒಳಗೆ ಹೊಕ್ಕಿದ್ದು, ಅದನ್ನು ಶಸ್ತ್ರ ಚಿಕಿತ್ಸೆ ಮಾಡುವುದರ ಮೂಲಕ, ಸಾವು ಬದುಕಿನ ನಡುವೆ ಹೋರಾಟದಲ್ಲಿದ್ದವನನ್ನು ಕೆಎಂಸಿ ಆಸ್ಪತ್ರೆ ವೈದ್ಯರು ಜೀವನ ಉಳಿಸಿದ್ದಾರೆ.
ಶಿರಸಿ ತಾಲೂಕಿನ ಜವಳಮಕ್ಕಿ ಗ್ರಾಮದ ದಯಾನಂದ ಶಂಕರಬಡಗಿ ಎಂಬ ಯುವಕನೇ ಮರುಜನ್ಮ ಪಡೆದ ಯುವಕ. ಅದೊಂದು ಭಯಾನಕ ಅಪಘಾತ. ಬೇರೆ ಅಂತಹ ಹೇಳಿಕೊಳ್ಳುವ ವಾಹನ ಗುಜ್ಜು ನುಜ್ಜು ಆಗಿಲ್ಲ. ಆದ್ರೆ ಏನಾಯಿತು ಗೊತ್ತಾ.? ಲಾರಿ ಕ್ಲೀನರ್ ಎದೆ ಸೀಳಿದ್ದ 98ಸೆಂ.ಮೀ. ಪೈಪ್, ಆ ಪೈಪ್ ಎದೆಗೆ ಹೋದ ದೃಶ್ಯ ಎಂತವರನ್ನ ಸಹ ಬೆರಗಾಗಿಸುತ್ತದೆ.
ಇಂತಹ ಪೈಪ್ ನ್ನ ಅತ್ಯಂತ ಯಶಸ್ವಿಯಾಗಿ ಹೊರ ತೆಗೆಯುವಲ್ಲಿ ಹುಬ್ಬಳ್ಳಿಯ ಕೆಎಂಸಿಆರ್‌ಐ ವೈದ್ಯರು ಯಶಸ್ವಿಯಾಗಿದ್ದಾರೆ. ಹಾವೇರಿ ಜಿಲ್ಲೆಯರಾಣೆಬೆನ್ನೂರಿನ ಹೂಲಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇದೆ ಅಕ್ಟೊಬರ್ 2ರಂದು ಬೆಳಗ್ಗೆ 4ಗಂಟೆಗೆ ಲಾರಿ ಮುಗುಚಿ ಬಿದ್ದು, ಕ್ಲೀನರ್ ಅಗಿದ್ದ ದಯಾನಂದ ಶಂಕರಬಡಗಿ ಅವರ ಎದೆ ಸೀಳಿ ಸರ್ವಿಸ್ ರಸ್ತೆಯ ಕಬ್ಬಿಣದ ಪೈಪ್ ಹೊರ ಬಂದಿತ್ತು. ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಲ್ಲವೆಂದು ಹುಬ್ಬಳ್ಳಿಯ ಕೆಎಂಸಿಆರ್‌ಐನ ತುರ್ತು ಚಿಕಿತ್ಸಾ ಘಟಕಕ್ಕೆ ಕರೆ ತರಲಾಗಿತ್ತು. ಈ ಘಟಕದ ಮುಖ್ಯಸ್ಥ ಡಾ. ನಾಗರಾಜ ಚಾಂದಿ ಅವರು ಅಪಾಯವರಿತು ತುರ್ತು ಚಿಕಿತ್ಸೆ ನೀಡಿ ಹಿರಿಯ ವೈದ್ಯರ ಗಮನಕ್ಕೆ ತಂದರು. ಶೀಘ್ರವೇ ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು. ಈ ಕುರಿತು ಶಸ್ತ್ರ ಚಿಕಿತ್ಸಾ ವಿಭಾಗದ ಸಿ ಯುನಿಟ್ ಮುಖ್ಯಸ್ಥ ಡಾ. ರಮೇಶ ಹೊಸಮನಿ ಹಾಗೂ ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ. ಕಮ್ಮಾರ ಯಾವ ರೀತಿ ಚಿಕಿತ್ಸೆ ನೀಡಲಾಯಿತು ಅಂತಾ ಮಾಹಿತಿ ನೀಡಿದ್ದಾರೆ.
ಇನ್ನು ವೈದ್ಯರು ಈ ಶಸ್ತ್ರ ಚಿಕಿತ್ಸೆಯನ್ನು ಮಧ್ಯಾಹ್ನ 2ರಿಂದ 4.30ರವರೆಗೆ ಶಸ್ತ್ರ ಚಿಕಿತ್ಸೆ ಪ್ರಕ್ರಿಯೆ ನಡೆಸಿದರು. ಎದೆ ಮೂಳೆ ಕೆಲವೆಡೆ ಮುರಿದಿತ್ತು. ಶ್ವಾಸಕೋಶ ಹಾನಿಯಾಗಿತ್ತು. ಎದೆ ಹಿಂಭಾಗದಿಂದ ಹೊರಬಂದಿರುವ ಪೈಪ್‌ನೊಂದಿಗೆ ಸಣ್ಣ ಕೊಂಡಿಯೂ ಇತ್ತು. ಹೃದಯದ ಸನಿಹವೇ ಪೈಪ್ ಹಾದು ಹೋಗಿತ್ತು. ಇದೆಲ್ಲವನ್ನೂ ಬಹಳ ಎಚ್ಚರಿಕೆಯಿಂದ ನಿಭಾಯಿಸಿ 98 ಸೆಂ.ಮೀ. ಪೈಪ್ ಎದೆಯಿಂದ ಹೊರ ತೆಗೆದಿದ್ದಾರೆ. ಹಿಂದೆಂದೂ ಕಂಡರಿಯದ ಅಪರೂಪದ ಶಸ್ತ್ರ ಚಿಕಿತ್ಸೆಯಲ್ಲಿ ಯಶಸ್ವಿಯಾದ ಕಿಮ್ಸ್ ಆಸ್ಪತ್ರೆ ವೈದ್ಯರು. ಕಿಮ್ಸ್ ಆಸ್ಪತ್ರೆಯ ಈ ವೈದ್ಯರ ಅಪರೂಪದ ಶಸ್ತ್ರ ಚಿಕಿತ್ಸೆಯ ಸಾಧನೆಗೆ ಎಲ್ಲೆಡೆ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ಕಿಮ್ಸ್ ವೈದ್ಯರ ಈ ಧೈರ್ಯ ಮೆಚ್ಚುವಂತಹ ಕಾರ್ಯಕ್ಕೆ ಸೆಲ್ಯೂಟ್ ಹೇಳಲೇಬೇಕು.