Political News: ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಜಟಾಪಟಿ ನಡಿತಿದೆ. ಈ ಕಾರಣಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್, ಮುಖ್ಯಮಂತ್ರಿ ಬದಲಾವಣೆಯ ಮಾತುಕತೆ ಪ್ರೀತಿಯಿಂದ ನಡೆಯುವುದಿಲ್ಲ; ಶಾಸಕರು ವಿಶ್ವಾಸ ಕಳೆದುಕೊಂಡಾಗ ಅದು ನಡೆಯುತ್ತದೆ ಎಂದಿದ್ದಾರೆ.
ಕರ್ನಾಟಕದ ಜನರು ಕಾಂಗ್ರೆಸ್‌ಗೆ ಬಲವಾದ ಜನಾದೇಶವನ್ನು ನೀಡಿದರು ಕೂಡ ತಮ್ಮದೇ ಆದ ಮುಖ್ಯಮಂತ್ರಿಯನ್ನು ನಂಬಲು ಸಾಧ್ಯವಾಗದ ಪರಿಸ್ಥಿತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬಂದು ನಿಂತಿದೆ. ಮುಖ್ಯಮಂತ್ರಿ ಬದಲಾವಣೆಯ ಮಾತುಕತೆ ಪ್ರೀತಿಯಿಂದ ನಡೆಯುವುದಿಲ್ಲ; ಶಾಸಕರು ವಿಶ್ವಾಸ ಕಳೆದುಕೊಂಡಾಗ ಅದು ನೆಡೆಯುತ್ತದೆ. ಮತ್ತು ಶಾಸಕರು ವಿಶ್ವಾಸ ಕಳೆದುಕೊಂಡರೆ, ಸಿಎಂ ವಿಫಲರಾಗಿದ್ದಾರೆ, ಸರ್ಕಾರ ಕುಸಿದಿದೆ ಮತ್ತು ಪಕ್ಷವು ಈಗಾಗಲೇ ಐಸಿಯುನಲ್ಲಿದೆ ಎಂದರ್ಥ ಎಂದು ನಿಖಿಲ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮದೇ ಮುಖ್ಯಮಂತ್ರಿಯನ್ನು ಬದಲಾಯಿಸಲು ಕಾಂಗ್ರೆಸ್ ಶಾಸಕರು ದೆಹಲಿಯ ಹೋಟೆಲ್‌ಗಳಲ್ಲಿ ಸಾಲುಗಟ್ಟಿ ನಿಂತಿರುವುದು ಯಾವುದೇ ಸರ್ಕಾರ ಪಡೆಯಬಹುದಾದ ದೊಡ್ಡ ವೈಫಲ್ಯದ ಪ್ರಮಾಣ ಪತ್ರವಾಗಿದೆ. ಮುಖ್ಯಮಂತ್ರಿ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ, ಸರ್ಕಾರ ದಿಕ್ಕನ್ನು ಕಳೆದುಕೊಂಡಿದೆ ಮತ್ತು ಕರ್ನಾಟಕವು 2.5 ವರ್ಷಗಳನ್ನು ಕಳೆದುಕೊಂಡಿದೆ ಎಂದು ನಿಖಿಲ್ ಹೇಳಿದ್ದಾರೆ.
ಕರ್ನಾಟಕದ ಜನರು ಕಾಂಗ್ರೆಸ್‌ಗೆ ಬಲವಾದ ಜನಾದೇಶವನ್ನು ನೀಡಿದರು ಕೂಡ ತಮ್ಮದೇ ಆದ ಮುಖ್ಯಮಂತ್ರಿಯನ್ನು ನಂಬಲು ಸಾಧ್ಯವಾಗದ ಪರಿಸ್ಥಿತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬಂದು ನಿಂತಿದೆ.
ಮುಖ್ಯಮಂತ್ರಿ ಬದಲಾವಣೆಯ ಮಾತುಕತೆ ಪ್ರೀತಿಯಿಂದ ನಡೆಯುವುದಿಲ್ಲ; ಶಾಸಕರು ವಿಶ್ವಾಸ ಕಳೆದುಕೊಂಡಾಗ ಅದು ನೆಡೆಯುತ್ತದೆ. ಮತ್ತು ಶಾಸಕರು ವಿಶ್ವಾಸ…
— Nikhil Kumar (@Nikhil_Kumar_k) November 26, 2025




