ಸಚಿವರ ವಿಶ್ವಾಸ ಗಳಿಸಲು ಸಿಎಂ ಸಿದ್ದರಾಮಯ್ಯ ಹೊಸ ತಂತ್ರಕ್ಕೆ ಮುಂದಾಗಿದ್ದಾರೆ. ಅಕ್ಟೋಬರ್ 13ರಂದು ಸಂಪುಟ ಸಹೋದ್ಯೋಗಿಗಳಿಗಾಗಿ ಔತಣಕೂಟ ಏರ್ಪಡಿಸಿದ್ರು. ಇದೀಗ ಮತ್ತೆ ಡಿನ್ನರ್‌ಗೆ ಆಹ್ವಾನ ನೀಡಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಭೆ ಬಳಸಿಕೊಂಡು, ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಈ ಮೂಲಕ ನಾಯಕತ್ವ ಬದಲಾವಣೆ ಇಲ್ಲ ಎಂಬ ಸಂದೇಶ ರವಾನಿಸುವ ಉದ್ದೇಶ ಇಟ್ಟುಕೊಂಡಂತೆ ಕಾಣಿಸ್ತಿದೆ.
ಸದ್ಯಕ್ಕಂತೂ ನಾಯಕತ್ವ ಬದಲಾವಣೆ ಇಲ್ಲ. ಯಾಕಂದ್ರೆ ಈ ಬಗ್ಗೆ ಹೈಕಮಾಂಡ್ ಏನನ್ನೂ ಹೇಳಿಲ್ಲ. ದಿಢೀರ್ ಆಗಿ ಸೂಚನೆ ಕೊಡುವುದಿಲ್ಲ. ಹೀಗಾಗಿಯೇ ಸಂಪುಟ ಪುನಾರಚನೆ ಮೇಲೆ, ಮಾತ್ರ ಗಮನ ಹರಿಸಲು ಸಿದ್ದು ಮುಂದಾಗಿದ್ದಾರೆ. ಅಕ್ಟೋಬರ್ 28ರಂದು ಸಚಿವರು ಮತ್ತು ಶಾಸಕರ ಅನೌಪಚಾರಿಕ ಸಭೆ ಕರೆದಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ನೆಪದಲ್ಲಿ ಮುಂದಿನ ತಂತ್ರಗಾರಿಕೆಯ ಬಗ್ಗೆ ಚರ್ಚಿಸುವ ಉದ್ದೇಶ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.
ಕೇವಲ ಸಂಪುಟ ಪುನಾರಚನೆ ಮೇಲೆ ಫೋಕಸ್ ಮಾಡಿರುವ ಸಿದ್ದರಾಮಯ್ಯ, ರಾಜ್ಯೋತ್ಸವ ಪ್ರಶಸ್ತಿ ಹೆಸರಲ್ಲಿ ನಾಳೆ ಸಭೆ ಕರೆದಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆಗಳು ಆಗ್ತಿದ್ರೂ ಹೈಕಮಾಂಡ್‌ನಿಂದ ಯಾವುದೇ ಸೂಚನೆ ಬಂದಿಲ್ಲ. ಆದರೂ ನಾಯಕತ್ವದ ವಿಚಾರದಲ್ಲಿ ಸಿದ್ದರಾಮಯ್ಯ ವಿಶ್ವಾಸದಲ್ಲಿದ್ದು, ಸಂಪುಟ ಪುನಾರಚನೆಯತ್ತ ಮಾತ್ರ ಚಿತ್ತ ನೆಟ್ಟಿದ್ದಾರೆ. ಹೊಸ ತಂಡವನ್ನು ಕಟ್ಟಿಕೊಂಡು, ನಾಯಕತ್ವ ಬದಲಾವಣೆ ಇಲ್ಲ ಅನ್ನುವ ಸಂದೇಶ ರವಾನಿಸಲು ಹೊರಟಿದ್ದಾರೆ.
ಸಂಪುಟ ಪುನಾರಚನೆಗೆ ಹೈಕಮಾಂಡ್ ಗ್ರೀನ್‌ಸಿಗ್ನಲ್ ಕೊಡದಿದ್ರೆ, ನಾಯಕತ್ವ ಬದಲಾವಣೆ ಫಿಕ್ಸ್ ಅನ್ನೋದು ಖಚಿತವಾಗುತ್ತದೆ. ಹೀಗಾಗಿಯೇ ಬಹಳ ಮುತುವರ್ಜಿ ವಹಿಸಿ ಸಿದ್ದರಾಮಯ್ಯ ಎಚ್ಚರಿಕೆಯ ಹೆಜ್ಜೆ ಇಡ್ತಿದ್ದಾರೆ.
ಮತ್ತೊಂದೆಡೆ ನವೆಂಬರ್ 20ರ ವೇಳೆಗೆ ಸಿಎಂ ಬದಲಾವಣೆ ವಿಚಾರ, ಮುನ್ನೆಲೆಗೆ ಬರುತ್ತದೆ ಅನ್ನೋ ವಿಶ್ವಾಸದಲ್ಲಿ ಡಿಕೆಶಿ ಇದ್ದಾರೆ.
ಒಟ್ನಲ್ಲಿ ನಾಯಕರ ಅಂದಾಜಿಗೂ ಮೀರಿ ಹೈಕಮಾಂಡ್ ಯಾವ ಕ್ರಮ ಕೈಗೊಳ್ಳಲಿದೆ, ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ. ಜೊತೆಗೆ ರಾಜ್ಯ ಕಾಂಗ್ರೆಸ್‌ನಲ್ಲಿನ ಎಲ್ಲಾ ಗೊಂದಲಗಳಿದೆ ದೆಹಲಿ ಅಂಗಳಲ್ಲೇ ಉತ್ತರ ಸಿಗುವ ಸಾಧ್ಯತೆ ಹೆಚ್ಚಿದೆ.

