Sunday, May 18, 2025

Latest Posts

ಶಾಲೆ ಮಕ್ಕಳ ಹಾಲಿನ ಪುಡಿ ಗೋಲ್ಮಾಲ್ ಮಾಡಿದ ಗುತ್ತಿಗೆದಾರ

- Advertisement -

ರಾಯಚೂರು : ಸರ್ಕಾರಿ ಶಾಲೆಗೆ ಬರುವ ಮಕ್ಕಳಲ್ಲಿನ ಅಪೌಷ್ಟಿಕತೆಯನ್ನ ಕಡಿಮೆ ಮಾಡಲು ಸರ್ಕಾರ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದೆ. ಯೋಜನೆಯಂತೆ ಶಾಲೆಗೆ ಬರುವ ಬಡ ಮಕ್ಕಳಿಗೆ ಕೆ.ಎಂ.ಎಫ್ ನೀಡುವ ಕೆನೆಭರಿತ ಹಾಲು ವಿತರಣೆ ಮಾಡುತ್ತಾರೆ. ಮಕ್ಕಳ ಹಾಲಿನ ಪುಡಿಯೇ ಬಂಡವಾಳ ಮಾಡಿಕೊಂಡ ಗುತ್ತಿಗೆದಾರ ಆಕಾಶ್ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಮಲ್ಲಪುರ ಶಾಲೆಯ 420 ಕೆಜಿ ಹಾಲಿನ ಪುಡಿ, ಜಾಗೀರ ಜಾಡಲದಿನ್ನಿ ಶಾಲೆಯ 326 ಕೆಜಿ, ಜಾಲಹಳ್ಳಿಯ ಜೆ.ಜೆ ಪ್ರೌಢ ಶಾಲೆಯ 274 ಕೆಜಿ ಹಾಲಿನ ಸೇರಿ ಒಟ್ಟು 14 ಶಾಲೆಗಳಿಗೆ ವಿತರಣೆ ಮಾಡಬೇಕಾದ ಹಾಲಿನ ಪುಡಿ ಗುಳಂ ಮಾಡಿದ್ದಾನೆ. ಸುಮಾರು 5 ಲಕ್ಷ 10 ಸಾವಿರದ 510 ರೂ. ಮೌಲ್ಯದ ಹಾಲಿನ ಪುಡಿ ನುಂಗಿದ ಗುತ್ತಿಗೆದಾರ ಆಕಾಶ್ ಎಂ.ಗಾಣಗಿ. ಶಾಲೆಗಳ ನಕಲಿ ಮೊಹರ ಮತ್ತು 14 ಶಾಲೆಗಳ ಮುಖ್ಯಗುರುಗಳ ನಕಲಿ ಸಹಿ ಮಾಡಿ ಹಾಲಿನ ಪುಡಿ ವಿತರಣೆ ಮಾಡಿರುವುದಾಗಿ ಶಿಕ್ಷಣ ಇಲಾಖೆಗೆ ಹಾಗೂ ಕೆ.ಎಂ.ಎಫ್ ಗೆ ದಾಖಲೆಗಳು ಕೂಡ ಸಲ್ಲಿಕೆ ಮಾಡಿದ್ದಾನೆ.

ಇತ್ತ ಗುತ್ತಿಗೆದಾರನ ನಡೆ ಬಗ್ಗೆ ಅನುಮಾನ ಬಂದ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗಳಿಗೆ ಹಾಲಿನ ಪುಡಿ ಬಗ್ಗೆ ವಿಚಾರಣೆ ಮಾಡಿದ್ದಾಗ ಗುತ್ತಿಗೆದಾರ ಆಕಾಶ.ಎಂ.ಗಾಣಗಿಯ ನಿಜಬಣ್ಣ ಬಯಲಾಗಿದೆ. ತಕ್ಷಣವೇ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಕೆ.ಎಂ.ಎಫ್ ಗುತ್ತಿಗೆದಾರನ ಟೆಂಡರ್ ರದ್ದು ಮಾಡಿ ಗುತ್ತಿಗೆದಾರ ಆಕಾಶ್ ವಿರುದ್ಧ ರಾಯಚೂರು ಸೈಬರ್ ಠಾಣೆಯಲ್ಲಿ ದಾಖಲೆಗಳ ಸಮೇತ ಎಫ್.ಐ.ಆರ್ ದಾಖಲು ಮಾಡಿದ್ದಾರೆ. ಇನ್ನು ಪ್ರಕರಣ ದಾಖಲಾದ ಬಳಿಕ ಪೊಲೀಸರು ಶಾಲೆಗಳಿಗೆ ಸೇರಬೇಕಾದ ಹಾಲಿನ ಪುಡಿ ಎಲ್ಲಿ ಹೋಗಿದೆ ಎಂದು ತನಿಖೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿ 2 ತಿಂಗಳು ಕಳೆಯುತ್ತಿದೆ ಆದ್ರೂ ಹಾಲಿನ ಪುಡಿಯ ಸುಳಿವು ಸಹ ಸಿಗುತ್ತಿಲ್ಲ. ಹೀಗಾಗಿ ಪೊಲೀಸರು ಕೆ.ಎಂ.ಎಫ್ ವಿತರಣೆ ಮಾಡಿದ ಹಾಲಿನ ಫಾಕೇಟ್ನ ಬ್ಯಾಚ್ ನಂಬರ್ಗಳನ್ನ ನೀಡಲು ತಿಳಿಸಿದ್ದೇವೆ ಎಂದ ರಾಯಚೂರು ಎಸ್ಪಿ. ನಿಖಿಲ್, ಬಿ. ಹೇಳಿದ್ದಾರೆ.

- Advertisement -

Latest Posts

Don't Miss