Tumakuru: ತುಮಕೂರು: ತುಮಕೂರಿನಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಕೇಂದ್ರ ಸಚಿವ ವಿ.ಸೋಮಣ್ಣ,ರಾಹುಲ್ ಗಾಂಧಿ ವಿದೇಶದಲ್ಲಿ ಸರ್ಕಾರ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.
ರಾಹುಲ್ ಗಾಂಧಿಗೆ ಬೇರೆ ಇನ್ನೇನು ಕೆಲಸ ಇದೆ..? ದೇಶನೇ ಗೊತ್ತಿಲ್ಲದೆ ಇರೋ ವ್ತಕ್ತಿ ಎಲ್ಲೋ ಹೋಗಿ, ದೇಶಕ್ಕೆ ಇರತಕ್ಕಂತಹ ಗಾಂಭೀರ್ಯವನ್ನು ಅರ್ಥಮಾಡಿಕೊಳ್ಳದೆ ಮಾತನಾಡುವಂತಹ ಅಂತಹ ವ್ಯಕ್ತಿ. ಪಾರ್ಲಿಮೆಂಟ್ ನಡಿಬೇಕಾದ್ರೆ ಒಂದು ಗಂಟೆ ಇರುವುದಿಲ್ಲ. ಇವರಿಗೆಲ್ಲಾ ಟೈಂಪಾಸ್ ಮಾಡಲಿಕ್ಕೆ ಅವಕಾಶ ಮಾಡಿಕೊಳ್ಳುತ್ತಾರೆ. ಅದರಿಂದ ದೇಶಕ್ಕೆ ಆಗುತ್ತಿರುವಂತಹ ಗಂಡಾಂತರವನ್ನು ಅರ್ಥ ಮಾಡಿಕೊಳ್ಳದೆ ಇದ್ರೆ. ಈ ದೇಶ ನಮ್ಮದು ಅಂತ ಹೇಳ್ಕೊಳ್ಳಿಕ್ಕೆ ನೈತಿಕತೆ ಕಳ್ಕೊಳ್ಳುತ್ತಾರೆ ಎಂದು ವಿ.ಸೋಮಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಿಯಾಂಕ ಗಾಂಧಿ ಮುಂದಿನ ಪ್ರಧಾನಿ ಅಭ್ಯರ್ಥಿ ಆಗ್ಬೇಕು ಅನ್ನೋ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ವಿ.ಸೋಮಣ್ಣ, ರಾಹುಲ್ ಗಾಂಧಿ ಮುಗಿತಾ ಅಂತ ಅರ್ಥ. ಅಲ್ಲಿಗೆ ರಾಹುಲ್ ಗಾಂಧಿ ಮುಗಿದಿದೆ ಇನ್ಯಾರ್ ಗಾಂಧಿ ತರ್ತಾರೊ ಅಂತ ಗೊತ್ತಿಲ್ಲ. ಈ ಗಾಂಧಿ ಟೋಪಿ ಬೇರೆಯವರಿಗೆ ಅನ್ಯಾಯ ಆಗುತ್ತೆ ಅನ್ನೋದ್ಕಿಂತ. ಗಾಂಧೀಜಿಯವರು ನಮ್ಮ ದೇಶದ ಬಾಪು. ರಾಹುಲ್ ಗಾಂಧಿ ಮುಗಿತಾ ಅಂತ. ಅವರೆ ತಾನೆ ವಿರೋಧ ಪಕ್ಷದ ನಾಯಕರು, ಬದುಕಿದ್ದಾರೆ ತಾನೆ..? ಕಾಂಗ್ರೆಸ್ ನಲ್ಲಿ ಯಾವ ರೀತಿಯಾದ ಲೀಡರ್ಶಿಪ್ ಇದೆ, ಒಡಂಬಡಿಕೆ ಇದೆ. ದೇಶದ ಬಗ್ಗೆ ಅವರಲ್ಲಿ ಇರುವಂತಹದನ್ನ ಅರ್ಥ ಮಾಡ್ಕೊಳ್ಳಿ ಎಂದು ಕೇಂದ್ರ ಸಚಿವರು ಉಚ್ಛರಿಸಿದ್ದಾರೆ.
ಒಂದಂತೂ ಸತ್ಯ ದೇಶಕ್ಕೆ ಭವಿಷ್ಯ ಇದೆ. ರಾಷ್ಟ್ರದ ಪ್ರಧಾನಿ ಮೋದಿಯವ್ರು, 11 ವರ್ಷದಲ್ಲಿ 50 ವರ್ಷ ಏನೋ ಮಾಡಬಹುದಿತ್ತೊ ಆ ಕೆಲಸ ಮಾಡಿದ್ದಾರೆ. ದೇಶಕ್ಕೆ ಹಾಗೂ ಬಿಜೆಪಿಗೆ ನರೇಂದ್ರ ಮೋದಿಯವರು ಅನಿವಾರ್ಯ ಅವಶ್ಯಕತೆ ಇದೆ ಎಂದು ವಿ.ಸೋಮಣ್ಣ ಹೇಳಿದ್ದಾರೆ.
ನರೇಗಾ ಯೋಜನೆಯ ಹೆಸರು ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ವಿ.ಸೋಮಣ್ಣ, ಅವರಿಗೆ ಬೇರೆ ಇಶ್ಯೂ ಇಲ್ಲ, ಗಾಂಧಿಯವರ ಹೆಸರು ಕಂಡು, ರಾಹುಲ್ ಗಾಂಧಿ ಬಿಟ್ರು. ಈಗ ಪ್ರಿಯಾಂಕ ಗಾಂಧಿ ಹತ್ತಿರ ಹೋಗುತ್ತಿದ್ದಾರೆ. ನರೇಗಾದಲ್ಲಿ ಏನೇನಾಗಿದೆ ಅಂತ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲೂ ಮಾಹಿತಿಯನ್ನು ಕೊಡ್ತೀವಿ.
ಗಾಂಧೀಜಿ ಅವರಿಗೆ ಪ್ರಿಯವಾದ ಹೆಸರು ಜೈ ಶ್ರೀ ರಾಮ್, ರಾಮನ ಹೆಸರನ್ನ ಯೋಜನೆಗೆ ಇಟ್ಟಿದ್ದೇವೆ. 125 ದಿನ ಕೆಲಸ ಕೊಡಲೇಬೇಕು ಅಂತ ಭಾರತ ಸರ್ಕಾರ ಬದಲಾವಣೆ ತಂದಿದೆ. ಅದನ್ನ ಅನುಸರಿಸಿ ಕೆಲಸ ಮಾಡಿದ್ರೆ ಬಾಕಿ ನೋಡೋಣ. ನಾವು ಕೊಟ್ಟಿರೋದ್ನಲ್ಲ ನೀವೇ ಬಳಸ್ಕೊಂತಿದಿರ ಅಂತ ಗೊತ್ತಿದೆ. ಕಾರ್ಯರೂಪಕ್ಕೆ ಬರುವಂತಹ ಸಂದರ್ಭದಲ್ಲಿ ಅವರ ನಡವಳಿಕೆ ಹೇಗಿರುತ್ತೆ ಅಂತ ನೋಡೊಣ.
ಇನ್ನು ದ್ವೇಷ ಭಾಷಣ ಮಸೂದೆ ವಿಚಾರದ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವರು, ಅದು ಮಸೂದೆನೇ ಅಲ್ಲ, ಪೊಲೀಸ್ರಿಗೆ ಕೊಟ್ಟಿರುವ ಒಳ್ಳೆ ಆಯುಧ ಇದು. ನಮಗೇನು ಲಾಸ್ ಇಲ್ಲ, ಯಾರ್ ಜಾರಿ ತಂದಿದ್ದಾರಾ ಅದರ ಪಾಪದ ಕೊಡ, ಅವರಿಗೆ ಸುತ್ಕೊಳುತ್ತೆ ಎಂದು ವಿ.ಸೋಮಣ್ಣ ಹೇಳಿದ್ದಾರೆ.




