Hubli News: ಹುಬ್ಬಳ್ಳಿ: ಪ್ರಧಾನಿ ಮೋದಿ ಅವರಿಗೆ 75 ನೇ ಜನ್ಮದಿನದ ಶುಭಾಶಯಗಳು. ಅವರ ನಾಯಕತ್ವದಲ್ಲಿ ದೇಶದಲ್ಲಿ ದೊಡ್ಡ ಮಟ್ಟದ ಅಭಿವೃದ್ದಿಯಾಗುತ್ತಿದೆ. ಇನ್ನು ದೇಶ ಅಭಿವೃದ್ಧಿ ಮೋದಿ ಅವರು ಅಧಿಕಾರಕ್ಕೆ ಬಂದಮೇಲೆ ಚಲ್ತಾ ಹೈ ಅಟಿಟ್ಯೂಡ್ ಗೆ ಅವಕಾಶ ಇಲ್ಲಾ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಪಡಿತರ ಕಾರ್ಡ್ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ಅನರ್ಹರು ಪಡಿತರ ಕಾರ್ಡ್ ಹೊಂದಿರೋರು ಬಹಳಷ್ಟು ಕಡೆ ಇದ್ದಾರೆ. ಹೀಗಾಗಿ ಪರಿಶೀಲನೆ ಮಾಡುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಕೇಂದ್ರ ದಿಂದ ಸೂಚನೆ ನೀಡಲಾಗಿದೆ. ಆದ್ರೆ ಸರಿಯಾಗಿ ಪರಿಶೀಲನೆ ಮಾಡಿ ತಗೆಯಬೇಕು ಎಂದರು.
ಟೆಕ್ನಾಲಜಿ ಬಳಸಿ ಅನರ್ಹ ಪಡಿತರದಾರರನ್ನು ತಗೆಯಬೇಕು.ಯಾರಿಗೋ ಅಧಿಕಾರ ಕೊಟ್ಟರೆ ಅವರು ಜನರಿಗೆ ತೊಂದರೆ ನೀಡ್ತಾರೆ. ಕಾರ್ಡ್ ರದ್ದು ಮಾಡುವಾಗ ತಾರತಮ್ಯ ಮಾಡಬಾರದು. ನಾನು ಕಾರ್ಡ್ ರದ್ದು ಮಾಡೋದನ್ನು ಸಾರಾಸಗಟಾಗಿ ವಿರೋಧ ಮಾಡ್ತಿಲ್ಲಾ. ಕೆಲ ಅರ್ಹರು ಇದ್ದವರನ್ನು ತಗೆಯಬಾರದು. ಅನರ್ಹರನ್ನು ತಗೆಯೋ ಮಾನದಂಡವನ್ನು ನಾವು ನಿರ್ಧಾರ ಮಾಡಲ್ಲಾ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರ ನಿರ್ಧಾರ ಮಾಡಲ್ಲಾ. ನಿಯಮಗಳನ್ನು ರೂಪಿಸೋದು ರಾಜ್ಯ ಸರ್ಕಾರಗಳು. ಐ ಟಿ ರಿಟರ್ನ್ ಮಾಡಿದವರನ್ನು ಕೈ ಬಿಡಬೇಕು ಅಂತ ನಾವು ಹೇಳಿಲ್ಲಾ. ಆದ್ರೆ ಇನಕಮ್ ಟ್ಯಾಕ್ಸ್ ಕಟ್ಟೋವರನ್ನು ತಗೆಯುತ್ತಿದ್ದಾರೆ. ಅದರ ತೀರ್ಮಾನ ಮಾಡೋದು ರಾಜ್ಯ ಸರ್ಕಾರ. ಐದು ವರ್ಷಕ್ಕೊಮ್ಮ ಪರಿಶೀಲನೆ ಮಾಡಬೇಕು ಅನ್ನೋದು ನಿಯಮ. ನಾವು ರಾಜ್ಯ ಸರ್ಕಾರಗಳಿಗೆ ಪರಿಶೀಲನೆ ಮಾಡಲು ಮಾತ್ರ ಹೇಳಿದ್ದೇವೆ ಎಂದು ಪ್ರಹ್ಲಾದ ಜೋಶಿ ಹೇಳಿದರು.




