Friday, August 29, 2025

Latest Posts

ಸರ್ಕಾರಿ ಶಾಲೆಗಳಿಗೆ ಬಂದೊದಗಿರುವ ಸ್ಥಿತಿ ಅತ್ಯಂತ ಶೋಚನೀಯ: ಕಾಂಗ್ರೆಸ್ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

- Advertisement -

Political News: ಬೆಂಗಳೂರಿನಲ್ಲಿ ಸರ್ಕಾರಿ ಶಾಲೆ ಉಳಿವಿಗಾಗಿ 50 ಲಕ್ಷ ಸಂಗ್ರಹಿಸಿ ಅಭಿಯಾನ ಮಾಡಲಾಗುತ್ತಿದೆ. ಹೀಗಾಗಿ ಮಾಜಿ ಶಾಸಕ ಸಿ.ಟಿ.ರವಿ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರವು ಬಡ ಮಕ್ಕಳ ಭವಿಷ್ಯವನ್ನು ಪಣಕ್ಕಿಟ್ಟು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು ದುರದೃಷ್ಟಕರ. ಶಾಲೆಗಳ ಉಳಿವಿಗಾಗಿ ಸಹಿ ಸಂಗ್ರಸಹಿಸುವ ಅಭಿಯಾನ ನಡೆಸುವ ಹಂತಕ್ಕೆ ಸರ್ಕಾರಿ ಶಾಲೆಗಳಿಗೆ ಬಂದೊದಗಿರುವ ಸ್ಥಿತಿ ಅತ್ಯಂತ ಶೋಚನೀಯ ಎಂದಿದ್ದಾರೆ.

“ಹಬ್ ಅಂಡ್ ಸ್ಪೋಕ್ ಮಾಡೆಲ್ ಸ್ಕೂಲ್” ಯೋಜನೆಯಡಿ 4,200 ಶಾಲೆಗಳನ್ನು ಮುಚ್ಚಲು ಪ್ರಸ್ತಾಪಿಸುತ್ತಿದ್ದು, 6,000 ಏಕ-ಶಿಕ್ಷಕ ಶಾಲೆಗಳಿವೆ, 3,500 ಕ್ಕೂ ಹೆಚ್ಚು ಶಾಲೆಗಳಲ್ಲಿ ಬಳಸಲು ಯೋಗ್ಯವಾದ ಶೌಚಾಲಯಗಳಿಲ್ಲ, ಮತ್ತು 59,000 ಬೋಧಕ ಹುದ್ದೆಗಳು ಖಾಲಿಯಾಗಿವೆ. ಸರಿಯಾದ ಮೂಲಸೌಕರ್ಯ ಮತ್ತು ಸಿಬ್ಬಂದಿ ಇಲ್ಲದಿರುವುದು ಸರ್ಕಾರಿ ಶಾಲೆಗಳ ದಯನೀಯ ಸ್ಥಿತಿಯನ್ನು ಎತ್ತಿ ತೋರಿಸುತ್ತಿವೆ ಎಂದು ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮಾನ್ಯ ಶಿಕ್ಷಣ ಸಚಿವರು ವಿಶೇಷ ಮುತುವರ್ಜಿ ವಹಿಸಿ, ಈಗಾಗಲೇ ಖಾಸಗಿ ಶಾಲೆಗಳಲ್ಲಿ ನೀಡಲಾಗುತ್ತಿರುವ ಮೂಲಭೂತ ಸೌಲಭ್ಯಗಳನ್ನು ಸರ್ಕಾರಿ ಶಾಲೆಗಳಲ್ಲಿಯೂ ಒದಗಿಸಿ ಮಕ್ಕಳು ಪ್ರತಿನಿತ್ಯ ಪರದಾಡುವ ಸ್ಥಿತಿಯಿಂದ ಮುಕ್ತಿಗೊಳಿಸಿ, ದಾಖಲಾತಿ ಹೆಚ್ಚಿಸಿಕೊಳ್ಳುವುದರ ಜೊತೆಗೆ ಬಡಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಜವಾಬ್ದಾರಿ ನಿರ್ವಹಿಸಬೇಕಿದೆ ಎಂದು ರವಿ ಹೇಳಿದ್ದಾರೆ.

ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರಿ ಶಾಲೆಗಳೇ ಜೀವಾಳ. ಉತ್ತಮ ಸವಲತ್ತು, ಉತ್ತಮ ಪರಿಸರದಿಂದ ಕೂಡಿರುವ ಆವರಣವು ಮಕ್ಕಳು ಉತ್ಸಾಹ ಭರಿತರಾಗಿ ಕಲಿಕೆಯಲ್ಲಿ ಪಾಲ್ಗೊಳ್ಳಲು ಸಹಕರಿಸುತ್ತವೆ. ಆದ್ದರಿಂದ ಅಂತಹ ವ್ಯವಸ್ಥೆ ನಿರ್ಮಾಣ ಮಾಡಬೇಕಾಗಿರುವುದು ಆಡಳಿತದಲ್ಲಿರುವ ರಾಜ್ಯ ಸರ್ಕಾರದ ಹೊಣೆ ಮತ್ತು ಕರ್ತವ್ಯ ಎಂದು ಮಾಜಿ ಶಾಸಕ ರವಿ ಹೇಳಿದ್ದಾರೆ.

- Advertisement -

Latest Posts

Don't Miss