Monday, December 23, 2024

Latest Posts

ಶಿಪ್ಟಿಂಗ್ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕಿತ್ತು…!

- Advertisement -

www.karnatakatv.net :ಹುಬ್ಬಳ್ಳಿ: ಪಾಲಿಕೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಭೂತಪೂರ್ವ ಗೆಲವು ಸಾಧಿಸುತ್ತೇವೆ. 55-60 ಸ್ಥಾನಗಳಲ್ಲಿ‌ ಗೆಲುವು ನಿಶ್ಚಿತ. ಕೆಲವೊಂದು ಕಡೆಗಳಲ್ಲಿ ಮತದಾರರ ಹೆಸರು ಶಿಪ್ಟಿಂಗ್ ಆಗಿದೆ.ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕಾಗಿತ್ತು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಮತದಾನದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಈ ಕುರಿತು ಎಲ್ಲ ಮಾಹಿತಿ ಪಡೆದು ಚುನಾವಣೆ ಆಯೋಗದ ಜೊತೆ ಮಾತನಾಡುವೆ ಎಂದರು.

ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಹೋಗುವುದು ತಪ್ಪಲ್ಲ. ಅವರಿಗೆ ಇನ್ನೂ 18 ತಿಂಗಳ ಅಧಿಕಾರ ಇದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಚುನಾವಣೆ ಹೋಗುವುದು ಸಹಜ. ಅಮಿತ್ ಶಾ. ಶೋಚ್ ಸಮಜಕರ್ ಆಗಿಯೇ ಹೇಳಿದ್ದಾರೆ. ಅಮಿತ್ ಶಾ ಹೇಳಿದ ಮೇಲೆ ಅದು ಚರ್ಚೆಯ ವಿಷಯ ಅಲ್ಲ ಎಂದು ಅವರು ಹೇಳಿದರು.

ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಿದ‌ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಜಗದೀಶ್ ಶೆಟ್ಟರ್,ಬಿಎಸ್ ವೈರನ್ನು ಕಡೆಗಣಿಸುತ್ತಿಲ್ಲ. ಶೆಟ್ಟರ್ ಅವರನ್ನ ಕಡೆಗಣಿಸುವ ಪ್ರಶ್ನೇಯೇ ಇಲ್ಲ. ಬಹಳಷ್ಟು ಜನರು ಬಿಎಸ್ ವೈ ಅವರನ್ನ ಅಧಿಕಾರದಿಂದ ತಗೆದರು ಅಂತಿದ್ದಾರೆ. ಆದರೆ ಬಿಎಸ್ ವೈ ಸ್ವಪ್ರೇರಣೆಯಿಂದ ಅಧಿಕಾರ ಬಿಟ್ಟು ಕೊಟ್ಟಿದ್ದಾರೆ.

ಅವರೇ ಹೇಳಿದಂತೆ 2 ವರ್ಷ ಅಧಿಕಾರ ನಡೆಸಿ ಬೇರೆಯವರಿಗೆ ಅಧಿಕಾರ ನೀಡಿದ್ದಾರೆ. ಯಾರಿಗಾದ್ರು ಕ್ರೇಡಿಟ್ ಕೊಡುವುದು ಇದ್ದರೆ ಅದು ಯಡಿಯೂರಪ್ಪರಿಗೆ ಸಿಗಬೇಕು ಎಂದರು.

ಹೈಕಮಾಂಡ್ ಬಹಳಷ್ಟು ಚರ್ಚಿಸಿ ಸ್ಥಳೀಯ ನಾಯಕರ ಅಭಿಪ್ರಾಯ ಪಡೆದು ಬೊಮ್ಮಾಯಿ ಯವರನ್ನ ಸಿಎಂ‌ ಆಗಿ ಆಯ್ಕೆ ಮಾಡಲಾಗಿದೆ. ಬೊಮ್ಮಾಯಿಯವರಿಂದ ಉತ್ತಮ ಆಡಳಿತ ನಡೆಯುತ್ತಿದೆ ಎಂದು ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಕರ್ನಾಟಕ ಟಿವಿ- ಹುಬ್ಬಳ್ಳಿ

- Advertisement -

Latest Posts

Don't Miss