- Advertisement -
Belagavi News: ಬೆಳಗಾವಿ : ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಶಾಲಾ ಮಕ್ಕಳಿಂದ ಟ್ಯೂಬ್ ಸರ್ಕಸ್ ಸುದ್ದಿ ವಿಚಾರದ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
ಈಗಾಗಲೆ ಕಿತ್ತೂರ ತಾಲೂಕಿನ ನಿಂಗಾಪೂರ್ ಗ್ರಾಮದ ಹುಲಿಕೇರಿ ಗ್ರಾಮದ ಮಕ್ಕಳ ಭಾವನೆ ನನಗೆ ಅರ್ಥ ಆಗಿದೆ. ಮಕ್ಕಳ ಶಿಕ್ಷಣಗೋಸ್ಕರ ನಾಳೆಯಿಂದ ಒಂದು ಬೋಟ್ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಮಾಡಲಾಗುತ್ತೆ. ಈಗಾಗಲೆ ಕಿತ್ತೂರು ಶಾಸಕ ಮತ್ತು ಕಿತ್ತೂರು ತಹಶಿಲ್ದಾರರ ಅವರ ಜೊತೆ ಮಾತನಾಡಿದ್ದೆನೆ. ನಾಳೆನೇ ನಿಂಗಾಪುರ್ ಗ್ರಾಮದ ಹುಲಿಕೇರೆ ಕೆರೆಯಲ್ಲಿ ಬೋಟ್ ವ್ಯವಸ್ಥೆ ಮಾಡುತ್ತೆನೆ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳುತ್ತವೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಹೇಳಿದ್ದಾರೆ.
- Advertisement -