www.karnatakatv.net : ಬೆಳಗಾವಿ : ಕೋವಿಡ್ ಎರಡನೇ ಅಲೆಯಿಂದಾಗಿ ರಾಜ್ಯದ ಎಲ್ಲಾ ಹಾಸ್ಟೆಲಗಳು ಸೇರಿದಂತೆ ಎಲ್ಲಾ ಕಾಲೇಜುಗಳು ಕಳೆದ 3-4 ತಿಂಗಳಿಂದ ಬಂದ್ ಆಗಿದ್ದವು. ಪ್ರಸ್ತುತ ರಾಜ್ಯ ಸರಕಾರವು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಬರುವ ದಿನಗಳಲ್ಲಿ ರಾಜ್ಯದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ತರಗತಿಗಳನ್ನು ಆರಂಭಿಸುವಂತೆ ಸಲಹೆ ನೀಡಿದ್ದನ್ನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸ್ವಾಗತಿಸಿತ್ತು.ಆದರೆ ವಿದ್ಯಾರ್ಥಿಗಳ ಸಮಸ್ಯೆ ಕುರಿತು ಉನ್ನತ ಶಿಕ್ಷಣ ಸಚಿವರು ಗಮನಕ್ಕೆ ತೆಗೆದುಕೊಂಡು ಸಮಸ್ಯೆ ಬಗೆಹರಿಸುವ ಕ್ರಮ ತೆಗೆದುಕೊಳ್ಳಬೇಕು.

ಹಾಗೇಯೆ ರಾಜ್ಯದ ಅನೇಕ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಹಾಸ್ಟೆಲಗಳಿಗೆ ಅವಲಂಬಿತರಾಗಿರುವುದರಿಂದ ರಾಜ್ಯದ ಹಿಂದುಳಿದ ವರ್ಗ,ಸಮಾಜ ಕಲ್ಯಾಣ ಮತ್ತು ಅಲ್ಪಸಂಖ್ಯಾತ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಾಸ್ಟೆಲಗಳನ್ನು ತೆರೆಯಬೇಕು ಮತ್ತು ಉನ್ನತ ಶಿಕ್ಷಣ ಇಲಾಖೆಯು ಈ ಇಲಾಖೆಗಳೊಂದಿಗೆ ಸಮನ್ವಯದೊಂದಿಗೆ ಸಂಬಂದಪಟ್ಟ ಎಲ್ಲ ಕ್ರಮಗಳನ್ನು ತೆಗೆದುಕೊಂಡು ಕೋರೊನಾ ಮುಂಜಾಗ್ರತಾ ಕ್ರಮದಿಂದ ಸ್ಯಾನಿಟೈಸರ್ ಮಾಡಿ ಹಾಸ್ಟೆಲಗಳನ್ನ ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಹಾಸ್ಟೆಲನಲ್ಲಿ ಇರಲು ಅನುಮತಿ ನೀಡಬೇಕು.

ಈಸಂದರ್ಭದಲ್ಲಿ ರೋಹಿತ ಉಮನಾಬಾದಿಮಠ ಎಬಿವಿಪಿ ಬೆಳಗಾವಿ ವಿಭಾಗದ ಸಂಚಾಲಕ ಇವರು ಮಾತನಾಡಿ ಇವಾಗ ನಡೆಯುತ್ತಿರುವ ಪರೀಕ್ಷೆ ಕುರಿತು ಸಾಕಷ್ಟು ತೊಂದರೆಗಳು ಇವೆ ಹೊರಗಿನಿಂದ ನಗರಕ್ಕೆ ಆಗಮಿಸಲು ವಿದ್ಯಾರ್ಥಿಗಳು ಬಸ್ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಮತ್ತು ಬಸಗಳಿಗೆ ಬರಲು ತಮ್ಮ ಸ್ವಂತ ಹಣದಲ್ಲಿ ಬರುತ್ತಿದ್ದು ಆದಷ್ಟು ಬೇಗನೆ ವಿದ್ಯಾರ್ಥಿಗಳಿಗೆ ಪಾಸ ನೀಡುವ ಕೆಲಸ ಆಗಬೇಕು ಮತ್ತು ಆದಷ್ಟು ಬೇಗನೆ ಹಾಸ್ಟೆಲಗಳನ್ನು ತೆರೆಯಬೇಕು ಇದರಿಂದ ವಿದ್ಯಾರ್ಥಿಗಳು ಅನೇಕ ಸಮಸ್ಯೆ ಎದುರಿಸುತ್ತಿದ್ದು ಆದಷ್ಟು ಬೇಗನೆ ಸರಕಾರ ಮತ್ತು ಉನ್ನತ ಶಿಕ್ಷಣ ಸಚಿವರು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಿ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಿರಣ ದುಕಾಂದರ, ಮಂಜುನಾಥ ಹಂಚಿನಮನಿ,ಶಾಶ್ವತ ಪಾಟೀಲ, ಚಿದಾನಂದ ಯಾವಗಲ್ ಸೇರಿದಂತೆ ಇನ್ನು ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.