ನಿಮ್ಮ ಮದುವೆ, ತೀರ್ಥಯಾತ್ರೆ ಅಥವಾ ಫ್ಯಾಮಿಲಿ ಟ್ರಿಪ್‌ಗಾಗಿ ಬಸ್ ಬುಕ್ ಮಾಡೋದಕ್ಕೆ ತಯಾರಿ ಮಾಡಿಕೊಂಡಿದ್ದೀರಾ? ಈಗ ಅದಕ್ಕಿಂತ ಲೇಟೆಸ್ಟ್ ಆಯ್ಕೆ ಇದೆ – ನೀವು ಇಡೀ ರೈಲು ಅಥವಾ ರೈಲು ಬೋಗಿಯನ್ನೇ ಬುಕ್ ಮಾಡಬಹುದೆಂಬುದು ನಿಮಗೆ ಗೊತ್ತಾ?
ಹೌದು! IRCTC, FTR ಸೇವೆಯ ಮೂಲಕ, ನೀವು ಒಂದು ಅಥವಾ ಎರಡು ಬೋಗಿಗಳನ್ನು, ಇಲ್ಲವೆ ಸಂಪೂರ್ಣ ರೈಲನ್ನೇ ಬುಕ್ ಮಾಡಬಹುದು. ಉದಾಹರಣೆಗೆ, ನೀವು ಒಂದು ಬೋಗಿ ಬುಕ್ ಮಾಡೋದಾದ್ರೆ ₹50,000 ಠೇವಣಿ ಪಾವತಿಸಬೇಕು. ಎರಡು ಬೋಗಿಗಳಿಗೆ ₹1 ಲಕ್ಷ. ಆದರೆ ನಿಮಗೆ ಇಡೀ ರೈಲು ಬೇಕಾದ್ರೆ, ಕನಿಷ್ಠ 18 ಬೋಗಿಗಳು ಬೇಕಾಗುತ್ತೆ ಮತ್ತು ಅದರ ಠೇವಣಿ ₹9 ಲಕ್ಷ. ಇದು ರೈಲು ಪ್ರಯಾಣದ ದೂರ, ನೀವು ಆಯ್ಕೆ ಮಾಡಿದ ಬೋಗಿಯ ತರಗತಿ ಇವುಗಳ ಮೇಲೆ ಅವಲಂಬಿತವಾಗಿರುತ್ತೆ. ಪ್ರಯಾಣ ಮುಗಿದ ಮೇಲೆ, ಖರ್ಚು ಕಡಿತಗೊಂಡು ಉಳಿದ ಠೇವಣಿ ನಿಮಗೆ ಹಿಂತಿರುಗುತ್ತದೆ.
ಇದನ್ನ ಹೇಗೆ ಬುಕ್ ಮಾಡೋದು ಅಂದ್ರೆ – ಗೂಗಲ್‌ನಲ್ಲಿ ‘IRCTC FTR’ ಅಂತ ಹುಡುಕಿ ಅಧಿಕೃತ ವೆಬ್‌ಸೈಟ್‌ಗೆ ಹೋಗಿ. ಅಲ್ಲಿ ನೀವು Sleeper, 3AC, 2AC ಅಥವಾ First AC Coach ಆಯ್ಕೆ ಮಾಡಬಹುದು. ನಿಮ್ಮ ಪ್ರಯಾಣದ ಸ್ಥಳ, ದಿನಾಂಕ ಇತ್ಯಾದಿಗಳನ್ನು ನಮೂದಿಸಿ, ಕನಿಷ್ಠ 30 ದಿನಗಳ ಮುಂಚಿತವಾಗಿ ಬುಕ್ ಮಾಡಬೇಕು.
ಈ ಸೌಲಭ್ಯ ಮದುವೆ, ಯಾತ್ರೆ, ಟ್ರಿಪ್ ಅಥವಾ ದೊಡ್ಡ ಗುಂಪುಗಳ ಪರ್ಸನಲ್ ಟ್ರಾವೆಲ್‌ಗಾಗಿ ಸೂಪರ್ ಉಪಯುಕ್ತ. ಓನ್‌ಲೈನ್ ಮೂಲಕವೇ ಈ ಪ್ರಕ್ರಿಯೆ ನಡೆಯುತ್ತದೆ, ಆದರೆ ತುರ್ತು ಸಂದರ್ಭಗಳಲ್ಲಿದ್ರೆ ರೈಲ್ವೆ ಮಂಡಳಿಯ ಅನುಮತಿಗೆ ಅನುಗುಣವಾಗಿ ಆಫ್‌ಲೈನ್ ಮೂಲಕವೂ ಮಾಡಬಹುದು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ




