Sandalwood: ಸದ್ಯ ಅರಸಯ್ಯನ ಪ್ರಸಂಗ ಸಿನಿಮಾ ಮೂಲಕ ಮನೆ ಮಾತಾಗಿರುವ ಮಹಾಂತೇಷ್ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಾವು ಸಿನಿಮಾಗೋಸ್ಕರ ತಮ್ಮ ಕೆಲಸವನ್ನೇ ಬಿಟ್ಟ ಬಗ್ಗೆ ಮಾತನಾಡಿದ್ದಾರೆ.
ನಟ ಮಹಾಂತೇಷ್ ಅವರಿಗೆ ನಟನಾಗುವ ಆಸೆ ಇತ್ತು. ಅದಕ್ಕಾಗಿ ಅವರು ನಾಟಕದ ಟೀ ಸೇರಿ ತಮಗೆ ಸಿಕ್ಕ ಅವಕಾಶವನ್ನು ಬಳಸಿಕ“ಳ್ಳುತ್ತಿದ್ದರು. ಆದರೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಗದಿದ್ದಾಗ, ಅವರು ಕೆಲಸಕ್ಕೆ ಸೇರಿದ್ದರು. ಟೋಯೋಟಾದಲ್ಲಿ ಕೆಲಸಕ್ಕೆ ಸೇರಿದ್ದರು. 6ರಿಂದ 7 ವರ್ಷ ಅಲ್ಲಿ ಕೆಲಸ ಮಾಡಿದ್ದರು. ಸರಿಯಾದ ಸಮಯಕ್ಕೆ ಸಂಬಳ ಬರುತ್ತಿತ್ತು. ಖರ್ಚು ಮಾಡುತ್ತಿದೆ. ಮನೆಗೆ ಸ್ವಲ್ಪ ನೀಡುತ್ತಿದೆ.
ಆದರೆ ನನಗೆ ನನ್ನ ದಾರಿ ಇದಲ್ಲ, ಈ ಕೆಲಸದ ಬಗ್ಗೆ ನನಗೆ ಖುಷಿ ಇಲ್ಲ ಎಂದು ಕೆಲಸಕ್ಕೆ ರಿಸೈನ್ ಮಾಡಿದ್ರು. ಬಳಿಕ ಮುಂದೇನು ಮಾಡಬೇಕು ಎಂದು ಯೋಚಿಸಿ, ಸಿನಿಮಾದಲ್ಲಿ ಅವಕಾಶಕ್ಕಾಗಿ ಹುಡುಕಾಟ ಮುಂದುವರಿಸಿದರು. ಆದರೆ ಮನೆಯವರಿಗೆ ಈ ನಿರ್ಧಾರ ಕೋಪ ತರಿಸಿತ್ತು. ಹಾಗಾಗಿ 2ರಿಂದ 3 ವರ್ಷ ಮಹಾಂತೇಷ್ ಜತೆ ಮಾತನಾಡುವುದನ್ನೇ ಬಿಟ್ಟಿದ್ರಂತೆ.
ಇನ್ನು ಸಿನಿಮಾದಲ್ಲಿ ಅವಕಾಶ ಹುಡುಕುವಾಗ ತುಂಬಾ ಸಮಸ್ಯೆ ಎದುರಿಸಿದ್ದರು. ಕೈಯಲ್ಲಿ ಹಣವಿಲ್ಲದೇ, ಬೇರೆ ಬೇರೆ ಪಾರ್ಟ್ ಟೈಮ್ ಕೆಲಸ ಮಾಡಲು ಶುರು ಮಾಡಿದರು. ಬಳಿಕ ಮಹಾಂತೇಷ್ ಅವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅವರ ಮುಂದಿನ ಪಯಣ ಹೇಗಿತ್ತು ಅಂತಾ ಅವರಿಂದಲೇ ಕೇಳಿ. ಸಂದರ್ಶನಕ್ಕಾಗಿ ವೀಡಿಯೋ ನೋಡಿ.

