ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ನವೆಂಬರ್ ಕ್ರಾಂತಿಯ ಕಿಚ್ಚು ಧಗಧಗಿಸುತ್ತಿದೆ. ಸಿಎಂ ಯಾರಾಗ್ತಾರೆ ಅನ್ನೋ ಚರ್ಚೆಗಳು ಜೋರಾಗಿವೆ. ಇಂಥಾ ಹೊತ್ತಲ್ಲಿ ಬಿಜೆಪಿಗರು, 2028ಕ್ಕೆ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಅಂತಾ ಭವಿಷ್ಯ ನುಡಿದಿದ್ದಾರೆ.
ರಾಜ್ಯದಲ್ಲಿ ನಾವು ಏನೇ ಮಾಡಿದ್ರೂ 2028ಕ್ಕೆ ಸಮ್ಮಿಶ್ರ ಸರ್ಕಾರ ರಚನೆ ಆಗಲಿದೆ. ಹೀಗಂತ ಸಂಸದ ಕೆ. ಸುಧಾಕರ್ ಭವಿಷ್ಯ ನುಡಿದಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿ, ಏನೇ ಮಾಡದಿದ್ರೂ ಅಧಿಕಾರಕ್ಕೆ ಬರುವುದಾಗಿ ಈ ಹಿಂದೆ ಸಿದ್ದರಾಮಯ್ಯನವರು ಹೇಳುತ್ತಿದ್ರು. ಅದೇ ರೀತಿ ನಾವೂ ಕೂಡ ಏನು ಮಾಡದಿದ್ದರೂ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆ ಆಗಲಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥ ಸಂಚಲನ ಮಾಡದಿದ್ದರೂ, ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆ ಆಗಲಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥ ಸಂಚಲನ ಮಾಡಲಿಕ್ಕೂ ಪರವಾನಗಿ ಪಡೆಯಬೇಕಿದೆ. ಆದರೆ, ದೇಶದ್ರೋಹಿಗಳಿಗೆ ವಿಧಾನಸೌದದೊಳಗೆ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳುವವರಿಗೆ ರಕ್ಷಣೆ ನೀಡಿದೆ. ಆರ್‌ಎಸ್‌ಎಸ್ ದೇಶ ಸೇವೆ ಮಾಡುವುದು ಪಾಪಾನ ಅಂತಾ ಹೇಳಿದ್ದಾರೆ.
ಇನ್ನು, ಕೆಡಿಪಿ ಸಭೆಯಲ್ಲಿ ಸಬ್ ರಿಜಿಸ್ಟಾರ್ ಹಾಗೂ ಗಣಿ ಇಲಾಖೆಯಲ್ಲಿನ ಅಕ್ರಮದ ಕುರಿತು ಪ್ರತಿಕ್ರಿಯಿಸಿದ್ದು, ನಾನು ಮೊದಲ ದಿನದಿಂದಲೂ ಇದನ್ನೇ ಹೇಳುತ್ತಿದೆ. 2 ಇಲಾಖೆಗಳ ಬಗ್ಗೆ ಮಾತ್ರ ಹೇಳುತ್ತಿದ್ರು. ಅಧಿಕಾರಿಗಳ ಪೋಸ್ಟಿಂಗ್ ಹಣ ಪಡೆಯುತ್ತಿದ್ದಾರೆ. ತಹಶೀಲ್ದಾರ್, ಸರ್ಕಲ್ ಇನ್ಸ್‌ಪೆಕ್ಟರ್ ಬಳಿ ಕೋಟಿ ಕೋಟಿ ಪಡೆಯುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.